Advertisement

ಔಷಧ ಬಳಸದ ಅಧಿಕಾರಿಗಳ ವಿರುದ್ಧ ದೂರು

11:20 AM Jul 19, 2017 | Team Udayavani |

ಬೆಂಗಳೂರು: ಕೋಟ್ಯಾಂತರ ರು. ಮೌಲ್ಯದ ಔಷಧಗಳನ್ನು ಸಕಾಲದಲ್ಲಿ ಸದ್ಬಳಕೆ  ಮಾಡಿಕೊಳ್ಳದೇ ನಾಶ ಮಾಡಿ ಕರ್ತವ್ಯ ಲೋಪ ಎಸಗಿದ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಈ ಕುರಿತು ಜೆಡಿಯು ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ  ಎನ್‌ . ನಾಗೇಶ್‌, ಮಂಗಳವಾರ ಲೋಕಾಯುಕ್ತ ಪಿ. ವಿಶ್ವನಾಥ ಶೆಟ್ಟಿಯವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

Advertisement

ಸರ್ಕಾರಿ ಆಸ್ಪತ್ರೆಗಳಿಗೆ ಬರುವಂತಹ ರೋಗಿಗಳಿಗೆ ಔಷಧಗಳನ್ನು ನೀಡದೇ, ಗೋಡಾನ್‌ಗಳಲ್ಲಿ ದಾಸ್ತಾನು ಇಟ್ಟುಕೊಂಡಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು. ಬಳಿಕ ಸಹಜವಾಗಿಯೇ ಬಳಸುವ ಅವಧಿ ಮುಗಿದಿದ್ದರಿಂದ 49,1668 ಕೆ.ಜಿ  ಔಷಧಗಳನ್ನು ನಾಶ ಮಾಡಿದ್ದಾರೆ. ಈ ಕಾರ್ಯಕ್ಕೆ 63 ಲಕ್ಷ ರೂಪಾಯಿಗಳನ್ನು ಖಾಸಗಿ ಕಂಪೆನಿಗಳಿಗೆ ಪಾವತಿಸಿದ್ದಾರೆ.

ಆದರೆ ನಿಗದಿತ ಅವಧಿಯೊಳಗಡೆ ಔಷಧಗಳನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಿದ್ದರೇ ಈ ರೀತಿ ನಾಶಪಡಿಸುವ ಅಗತ್ಯವಿರಲಿಲ್ಲ. ಈ ನಿಟ್ಟಿನಲ್ಲಿ ಕರ್ತವ್ಯ ಲೋಪ  ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಆರೋಪದ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ  ದೂರಿನಲ್ಲಿ  ಕೋರಲಾಗಿದೆ.

ಮತ್ತೂಂದೆಡೆ ಔಷಧ ನಾಶಪಡಿಸುವ ಕರ್ನಾಟಕ ಸ್ಟೇಟ್‌ ಡ್ರಗಸ್‌  ಲಾಜಿಸ್ಟಿಕ್‌ ಮತ್ತು  ವೇರ್‌ ಹೌಸಿಂಗ್‌ ಸೊಸೈಟಿಗೆ ಬಗ್ಗೆ ಸ್ಟಷ್ಟೀಕರಣ ನೀಡಿರುವ ಆರೋಗ್ಯ ಅಧಿಕಾರಿಗಳು, ಕಳಪೆ ಗುಣಮುಟ್ಟದ ಔಷಧ ನಾಶಪಡಿಸುತ್ತಿರುವುದಾಗಿ ತಿಳಿಸಲಾಗಿದೆ. ಹೀಗಾಗಿ  ಔಷಧಿ ಖರೀದಿ ವೇಳೆ ಖಾಸಗಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಸಲುವಾಗಿ ಕಳಪೆ ಗುಣಮಟ್ಟದ ಔಷಧ ಖರೀದಿ ಮಾಡಿರುವ ಸಾಧ್ಯತೆಯಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next