ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ವಿರುದ್ಧ ಮತ್ತೊಂದು ಭೂ ಕಬಳಿಕೆ ಆರೋಪ ಕೇಳಿಬಂದಿದ್ದು, ಈ ಸಂಬಂಧ ಜಾರ್ಜ್ ವಿರುದ್ಧ ಎನ್ ಆರ್ ರಮೇಶ್ ಅವರು ಲೋಕಾಯುಕ್ತ, ಎಸಿಬಿ ಹಾಗೂ ಬಿಎಂಟಿಎಫ್ ನಲ್ಲಿ ದೂರು ದಾಖಲಿಸಿದ್ದಾರೆ.
Advertisement
ಸಚಿವ ಕೆಜೆ ಜಾರ್ಜ್ ಅವರ ಪಾಲುದಾರಿಕೆಯ ಎಂಬೆಸಿ ಗೋಲ್ಫ್ ಲಿಂಕ್ ಟೆಕ್ ಪಾರ್ಕ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿರುವುದಾಗಿ ರಮೇಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಸುಮಾರು 600 ಪುಟಗಳ ದಾಖಲೆ ಬಿಡುಗಡೆ ಮಾಡಿರುವ ಅವರು, ಕೆಜೆ ಜಾರ್ಜ್ ಟೆಕ್ ಪಾರ್ಕ್ ಹೆಸರಿನಲ್ಲಿ . 52.03 ಎಕರೆ ಜಾಗ ಕಬಳಿಕೆ ಮಾಡಿರುವುದಾದಿ ದೂರಿದರು.