Advertisement

Complaint: ಖಾಸಗಿ ಫೋಟೋ ತೋರಿಸಿ ಬೆದರಿಸಿದ ವೈದ್ಯನ ವಿರುದ್ಧ ದೂರು

12:23 PM May 17, 2024 | Team Udayavani |

ರಾಮನಗರ: ಮಹಿಳೆಯ ಖಾಸಗಿ ಫೋಟೋ ಗಳನ್ನು ಸೆರೆ ಹಿಡಿದು ಹಣಕ್ಕೆ ಬೇಡಿಕೆ ಇಡುತ್ತಿದ್ದ ವೈದ್ಯನ ವಿರುದ್ಧ ಸಂತ್ರಸ್ತ ಮಹಿಳೆ ಠಾಣೆ ಮೆಟ್ಟಿಲು ಹತ್ತಿರುವ ಪ್ರಕರಣ ಕುಂಬಳಗೂಡು ಠಾಣೆ ವ್ಯಾಪ್ತಿಯ ಬಡಾವಣೆಯಲ್ಲಿ ನಡೆದಿದೆ.

Advertisement

ಕೆಂಗೇರಿ ಹೋಬಳಿಯ ವಿನಾಯಕನಗರ ಬಡಾ ವಣೆಯ ವೈದ್ಯ ಪರಸಪ್ಪ ಎಂಬುವರ ವಿರುದ್ಧ ಸಂತ್ರಸ್ತ ಮಹಿಳೆ ಕುಂಬಳಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನನ್ನ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡಿ ಹಣ ಮತ್ತು ಚಿನ್ನಾಭರಣ ಪಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ‌

ಈ ಹಿಂದೆ ಸಂತ್ರಸ್ತ ಮಹಿಳೆ ವಾಸವಿದ್ದ ಮನೆಯ ಕೆಳಮಹಡಿಯಲ್ಲಿ ಆರೋಪಿ ವೈದ್ಯ ವಾಸವಿದ್ದನು. ಈ ವೇಳೆ, ಮಹಿಳೆ ಕುಟುಂಬದವರು ಅನಾರೋಗ್ಯಕ್ಕೆ ತುತ್ತಾದಾಗ ಈತನ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಮಹಿಳೆ ಕೈನಲ್ಲಿ ಗಂಟು ಇದ್ದ ಕಾರಣ ವೈದ್ಯನ ಬಳಿ ಮಹಿಳೆ ಚಿಕಿತ್ಸೆಗೆ ಹೋದಾಗ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ. ಮಹಿಳೆ ಜತೆ ಸ್ನೇಹ ಸಂಪಾದಿಸಿದ ವೈದ್ಯ ಮಹಿಳೆ ಮನೆಗೆ ಹೋಗಿ ಬಂದು ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಮಹಿಳೆಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಅವಳ ಅರಿವಿಗೆ ಬಾರದಂತೆ ತೆಗೆದುಕೊಂಡಿದ್ದಾನೆ. ಈ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟು ಕೊಂಡು ಮಹಿಳೆಗೆ ಬ್ಲಾಕ್‌ ಮೇಲ್‌ ಮಾಡುತ್ತಿದ್ದ ಎನ್ನಲಾಗಿದೆ.

ಅಲ್ಲದೇ, ಹಣ ನೀಡದೇ ಹೋದಾಗ ಮಹಿಳೆಯ ಸಂಬಂಧಿಕರಿಗೆ ಫೋಟೋಗಳನ್ನು ಕಳುಹಿಸಿದ್ದ. ಅಲ್ಲದೇ, ಪೊಲೀಸರಿಗೆ ದೂರು ನೀಡಿದರೆ ಫೋಟೋ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next