ಮಂಗಳೂರು: ವಿದ್ಯಾರ್ಥಿಗಳ ತಾಂತ್ರಿಕ ಕೌಶಲ ಅನಾವರಣಕ್ಕೆ ಟೆಕ್ ವಿಶನ್‌ನಂತಹ ಸ್ಪರ್ಧೆಗಳು ಉತ್ತಮ ವೇದಿಕೆ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿ
ಗಳು ಭವಿಷ್ಯಕ್ಕೆ ಅಡಿಪಾಯ ಹಾಕಿಕೊಳ್ಳಬೇಕು ಎಂದು ಕರ್ನಾಟಕ ಇನೋವೇಶನ್ ಆ್ಯಂಡ್ ಟೆಕ್ನಾಲಜಿ ಸೊಸೈಟಿ (ಕಿಟ್ಸ್) ಐಟಿ ಬಿಟಿ ವಿಭಾಗದಕೌಶಲ ಕಾರ್ಯಕ್ರಮದ ಮುಖ್ಯಸ್ಥೆ ಡಾಣ ಸಂಧ್ಯಾ ಆರ್. ಅಣೆÌàಕರ್ ಹೇಳಿದರು.
ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ನಡೆದ ಟೆಕ್ ವಿಷನ್ ಎಲವೇಟ್ 50 ಸ್ಪರ್ಧೆಯನ್ನು ಅವರು ಬುಧವಾರ ಉದ್ಘಾಟಿಸಿದರು.
ವಿದ್ಯಾರ್ಥಿಗಳ ಕೌಶಲವನ್ನು ಒರೆಗೆ ಹಚ್ಚುವ ಈ ಯೋಚನೆ, ಯೋಜನೆಗಳು ನಿರಂತರವಾಗಿ ಮುಂದುವರಿಯಬೇಕು ಎಂದು ಆಶಿಸಿದರು.
ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಅಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಎಂಜಿನಿಯ ರಿಂಗ್ ಹಣ ಮಾಡುವ ವೃತ್ತಿಯಲ್ಲ. ಸಮಾಜಕ್ಕೆ ಕೊಡುಗೆ ನೀಡಿ ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಬೇಕು ಎಂದರು.
ಸ್ಟಾರ್ಟ್‌ಅಪ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಕರ್ನಾಟಕದ ಉದಯ್ ಬಿರ್ಜೆ, ವೈಟರ್ ಹೆಲ್ತ್ ಸಂಸ್ಥೆಯ ಸಹ ಸಂಸ್ಥಾಪಕ ವಿಕ್ರಂ ರೈ, ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು ಪ್ರಾಂಶುಪಾಲ ಡಾಣ ಆರ್. ಶ್ರೀನಿವಾಸ್ ರಾವ್ ಕುಂಟೆ, ಉಪ ಪ್ರಾಚಾರ್ಯ ಬಾಲಕೃಷ್ಣ ಉಪಸ್ಥಿತರಿದ್ದರು.ಟೆಕ್ ವಿಷನ್‌ನ ಸಂಯೋಜಕ ರತೀಶ್ಚಂದ್ರ ಆರ್. ಗಟ್ಟಿ ಸ್ವಾಗತಿಸಿದರು.