Advertisement

ಸೋಲು-ಗೆಲುವಿಗಿಂತ ಸ್ಪರ್ಧೆ ಮುಖ್ಯ

06:35 PM Oct 19, 2021 | Team Udayavani |

ಚಿತ್ರದುರ್ಗ: ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತಲೂ ಸ್ಪರ್ಧಿಸುವುದು ಮುಖ್ಯ ಎಂದು ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಡಾ| ಕೆ. ನಂದಿನಿದೇವಿ ಹೇಳಿದರು. ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಒನಕೆ ಓಬವ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜಿಸುವುದರಿಂದ ಬೇರೆ ಬೇರೆ ಇಲಾಖೆ ನೌಕರರ ಪರಸ್ಪರ ಪರಿಚಯವಾಗುತ್ತದೆ. ಮಾನಸಿಕ ಹಾಗೂ ದೈಹಿಕವಾಗಿ ಮನುಷ್ಯ ಆರೋಗ್ಯದಿಂದ ಇರಲು ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ರಕ್ಷಣಾಧಿಕಾರಿ ಜಿ. ರಾಧಿಕಾ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಯಾವುದೇ ಕ್ರೀಡೆಗಳು ನಡೆದಿರಲಿಲ್ಲ. ಈಗ ಕೋವಿಡ್‌ ಸ್ವಲ್ಪ ಕಡಿಮೆಯಾಗಿರುವುದರಿಂದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕೋವಿಡ್‌ ಮೂರನೇ ಅಲೆ ಎದುರಾಗದಂತೆ ಎಲ್ಲರೂ ಎಚ್ಚರ ವಹಿಸಬೇಕಿದೆ. ಮೈಮರೆಯುವುದು ಬೇಡ. ಜಾಗೃತರಾಗಿರಿ ಎಂದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್‌ ಮಾತನಾಡಿ, ಸರ್ಕಾರಿ ನೌಕರರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ.ಕ್ರೀಡೆಯಿಂದ ತುಸು ವಿರಾಮ ದೊರೆಯಲಿದೆ. ವಿಶ್ರಾಂತಿಯಿಂದ ಮನಸ್ಸು ಉಲ್ಲಾಸವಾಗಿರುತ್ತದೆ
ಎಂದು ಅಭಿಪ್ರಾಯಪಟ್ಟರು.

ಜಿಪಂ ಮುಖ್ಯ ಲೆಕ್ಕಾಧಿಕಾರಿ ಡಿ.ಆರ್‌. ಮಧು, ಜಿಲ್ಲಾ ವಾಲಿಬಾಲ್‌ ತರಬೇತುದಾರ ಮುಹಿಬುಲ್ಲಾ, ನಗರಾಭಿವೃದ್ಧಿ ಪ್ರಾ ಧಿಕಾರದ ಆಯುಕ್ತ ಸೋಮಶೇಖರ್‌, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ನೌಕರರ ಸಂಘದ ಅಧ್ಯಕ್ಷ ಕೆ. ನಾಗರಾಜ್‌, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನಾ ಇಲಾಖೆ ಸ್ಥಳೀಯ ವರ್ತುಲದ ಹಿರಿಯ ಉಪನಿರ್ದೇಶಕ ಶ್ರೀನಿವಾಸ್‌, ಡಿಎಆರ್‌ ಡಿವೈಎಸ್ಪಿ ತಿಪ್ಪೇಸ್ವಾಮಿ ಭಾಗವಹಿಸಿದ್ದರು.

ಶಟಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ ಫಲಿತಾಂಶ
ಜಿಲ್ಲಾ ಮಟ್ಟದ ಶಟಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ ಪುರುಷರ ಸಿಂಗಲ್ಸ್‌ನಲ್ಲಿ ಹೊಸದುರ್ಗದ ಸತೀಶ್‌ ಪ್ರಥಮ, ಐಮಂಗಲದ ವಿ. ವಿಠಲ್‌ಕುಮಾರ್‌ ದ್ವಿತೀಯ, ಹಿರಿಯೂರಿನ ನಾಗಭೂಷಣ ಹಾಗೂ ಹೊಸದುರ್ಗದ ಮಹಾಂತೇಶ್‌ ತೃತೀಯ ಸ್ಥಾನ ಪಡೆದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಚಿತ್ರದುರ್ಗದ ಜಿ. ಅನಿತಾ ಪ್ರಥಮ, ವಿಮಲಾಕ್ಷಿ ದ್ವಿತೀಯ, ಚಿತ್ರದುರ್ಗದ ಸುಷ್ಮಾರಾಣಿ ಹಾಗೂ ಗಿರಿಜಮ್ಮ ತೃತೀಯ ಸ್ಥಾನ ಪಡೆದಿದ್ದಾರೆ. ಪುರುಷರ ಡಬಲ್ಸ್‌ ನಲ್ಲಿ ಚಿತ್ರದುರ್ಗದ ನಾಗಭೂಷಭಣ ಮತ್ತು ಮಧು ಪ್ರಥಮ, ಹೊಸದುರ್ಗದ ಸತೀಶ್‌ ಮತ್ತು ದಾಸಪ್ಪ ದ್ವಿತೀಯ, ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾ ಧಿಕಾರಿ ಡಿ.ಆರ್‌.
ಮಧು, ಮಹಾಂತೇಶ್‌, ಹಿರಿಯೂರಿನ ವಿಠಲ್‌, ವಿನೋದ್‌ರಾಜ್‌ ತೃತೀಯ ಸ್ಥಾನ ಪಡೆದರು. ಮಹಿಳೆಯರ ಡಬಲ್ಸ್‌ನಲ್ಲಿ ಚಿತ್ರದುರ್ಗದ ಅನಿತಾ ಮತ್ತು ವಿಮಲಾಕ್ಷಿ ಪ್ರಥಮ, ಚಿತ್ರದುರ್ಗದ ಸುಷ್ಮಾರಾಣಿ, ಇಂದ್ರಮ್ಮ ದ್ವಿತೀಯ, ಚಿತ್ರದುರ್ಗದ ಗೀತಾ ಮತ್ತು ಗಿರಿಜಮ್ಮ ತೃತೀಯ ಸ್ಥಾನ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next