Advertisement

ಚುನಾವಣೆ ಪ್ರಚಾರದಲ್ಲಿ ಸಮಭಾವ-ಸಹಮತ!

02:15 AM Apr 14, 2019 | sudhir |

ಕುಂಬಳೆ: ಬಾಯಾರು, ಬಂದೋÂಡು ,ಚೌಕಿ, ಮೊದಲಾದೆಡೆ ಗಳಲ್ಲಿ ಒಂದೇ ಕಟ್ಟಡದಲ್ಲಿ ಎಡರಂಗ, ಐಕ್ಯರಂಗ, ಎನ್‌.ಡಿ.ಎ.ಪಕ್ಷಗಳ ಚುನಾ ವಣಾ ಕಚೇರಿಗಳು ಮತ್ತು ಗೋಡೆಗಳಲ್ಲಿ ಬರಹಗಳು ಮತ್ತು ಭಿತ್ತಿಪತ್ರಗಳನ್ನು ಕಾಣಬಹುದಾಗಿದೆ.

Advertisement

ಕೆಲವು ಖಾಸಗೀ ವ್ಯಕ್ತಿಗಳ ಕಟ್ಟಡಗಳ‌,ಮನೆಗಳ ಆವರಣ ಗೋಡೆಯಲ್ಲಿ ಕಟ್ಟಡಗಳ ಮಾಲಕರ ಒಪ್ಪಿಗೆಯ ಮೇರೆಗೆ ಚುನಾವಣಾ ಪ್ರಚಾರಘಿಗಳನ್ನು ಬರೆಯ ಲಾಗಿದೆ.ೆ.ಇದು ಯಾರಲ್ಲಿಯೂ ದೇÌಷ ಬೇಡವೆಂಬ ಬುದ್ಧಿವಂತಿಕೆಯನ್ನು ಸಾರುವುದು.ಅಚ್ಚರಿ ಎಂದರೆ ಕೆಲವು ಮನೆಗಳಲ್ಲೂ ಬೇರೆ ಬೇರೆ ಪಕ್ಷಗಳ ನಾಯಕರು,ಕಾರ್ಯಕರ್ತರು,ಮತದಾರನ್ನೂ ಕಾಣ ಬಹುದು.ಕೆಲವರು ಪಕ್ಷದ ತತ್ವಾದರ್ಶದವರಾಗಿದ್ದರೆ ಇನ್ನು ಕೆಲವರು ಸ್ವಾರ್ಥ ಲಾಭ ಕೋRಸ್ಕರ ಪಕ್ಷ ಬದಲಾಯಿಸಿದವರಾಗಿರುವರು.

ಲಂಗುಲಗಾಮಿಲ್ಲದೆ ಹಿಂದಿನ ಕಾಲದಲ್ಲಿ ಎಲ್ಲೆಂದರಲ್ಲಿ ಮನೆಯ ಗೋಡೆಗಳಲ್ಲಿ ಆವರಣಗಳಲ್ಲಿ ಬಸ್‌ ನಿಲ್ದಾಣ,ಸರಕಾರಿ,ಸಾರ್ವಜನಿಕ ಸ್ಥಳಗಳಲ್ಲಿ ಬರಹ ಭಿತ್ತಿ ಪತ್ರಗಳನ್ನು ಬರೆಯಲಾಗುತ್ತಿತ್ತು.

ಕೆಲವೊಂದೆಡೆಗಳಲ್ಲಿ ಒಪ್ಪಿಗೆ ಇಲ್ಲದೆಯೂ ಬಲವಂತವಾಗಿ ಮತ್ತು ರಾತ್ರಿ ಕಾಲದಲ್ಲಿ ಬರೆಯಲಾಗುತ್ತಿತ್ತು. ಚುನಾವಣೆಯ ನೀತಿ ನಿಯಮಾವಳಿಯಲ್ಲಿ ಅಮೂಲಾಗ್ರ ಬದಲಾವಣೆ ತಂದ ಮುಖ್ಯಚುನಾವಣಾ ಅಧಿಕಾರಿಯಾಗಿದ್ದ ಟಿ.ಎನ್‌.ಶೇಷನ್‌ ಅವರು ಸಾರ್ವಜನಿಕ ಸರಾಕರಿ ಸ್ಥಳಗಳಲ್ಲಿ ಮತ್ತು ಕಟ್ಟಡಗಳಲ್ಲಿ ಮತ್ತು ಖಾಸಗೀ ಸ್ಥಳಗಳಲ್ಲಿ ಪ್ರಚಾರ ಫಲಕಗಳನ್ನು ನಾಟುವುದನ್ನು ಮತ್ತು ಬರೆಯುವುದಕ್ಕೆ ಕಡಿವಾಣ ಹಾಕಿದ ಬಳಿಕ ಪ್ರಕೃತ ಒಪ್ಪಿಗೆ ಪಡೆದಲ್ಲಿ ಮಾತ್ರವೇ ಯಾವುದೇ ಪ್ರಚಾರ ಫಲಕಗಳನ್ನು ಖಾಸಗೀ ಸ್ಥಳಗಳಲ್ಲಿ ಬಳಸಬಹುದಾಗಿದೆ.

ದಿನದಿಂದ ದಿನಕ್ಕೆ ಏರುತ್ತಿರುವ ಬಿಸಲಿನ ಕಾವಿನಲ್ಲಿ ಚುನಾವಣಾ ರಂಗು ಕಾವೇರಿದೆ.ಅಭ್ಯರ್ಥಿಗಳು ರಾತ್ರಿ ಹಗಲೆನ್ನದೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆಯಾ ಪಕ್ಷಗಳ ಕಾರ್ಯಕರ್ತರು ಬಿರುಬಿಸಿಲಿನ ಮಧ್ಯೆಯೂ ಬಿರುಸಿನ ಚುನಾವಣಾ ಪ್ರಚಾರದಲ್ಲಿ ಕಾರ್ಯ ನಿರತರಾಗಿರುವರು.ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಮತ್ತು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next