Advertisement

ದೀದಿಗೆ ಬ್ರೇಕು ಹಾಕುವುದೇ ಬಿಜೆಪಿ? 

12:30 AM Mar 09, 2019 | |

ಪಶ್ಚಿಮ ಬಂಗಾಳದ ಚುನಾವಣಾ ಚಿತ್ರಣವೇ ಈಗ ಬದಲಾಗಿದೆ. ಪ್ರತಿಬಾರಿಯೂ ಎಡಪಕ್ಷಗಳು ಮತ್ತು ತೃಣ ಮೂಲ ಕಾಂಗ್ರೆಸ್‌ ನಡುವೆ ಜೋರು ಸ್ಪರ್ಧೆ ಇರುತ್ತಿತ್ತು. ಇಲ್ಲವೇ ಸಿಪಿಎಂ ವರ್ಸಸ್‌ ಕಾಂಗ್ರೆಸ್‌ ಪೈಪೋಟಿ ಇರುತ್ತಿತ್ತು. ಆದರೆ ಈ ಬಾರಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿದ್ದು ಲೋಕಸಭಾ ಚುನಾವಣೆಯಲ್ಲಿ ಎಡರಾಜ್ಯದಲ್ಲಿ ಪ್ರಬಲ ವಿಜಯಿಯಾಗಿ ಹೊರಹೊಮ್ಮಲು ಬಿಜೆಪಿಗೆ ಸಾಧ್ಯವಿದೆಯೇ ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಶಾರದಾ ಚಿಟ್‌ಫ‌ಂಡ್‌ ಪ್ರಕರಣದಲ್ಲಿ ಇತ್ತೀಚೆಗೆ ಮಮತಾ ಬ್ಯಾನರ್ಜಿ ಸಿಬಿಐ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಾರಿದ್ದ ಸಮರ, ಅವರ ಪರವಾಗಿ ಕೆಲಸ ಮಾಡಿಲ್ಲ ಎನ್ನುತ್ತಾರೆ ಚುನಾವಣಾ ಪರಿಣತರು.  ಬಿಜೆಪಿ ಕೂಡ ಏನಕೇನ ಮಮತಾರ ಓಟವನ್ನು ಕಟ್ಟಿಹಾಕಬೇಕು ಎಂದು ನಿರ್ಧರಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಅದು ಭರ್ಜರಿಯಾಗಿಯೇ ಟಿಎಂಸಿ ವಿರುದ್ಧ ಸಮರ ಸಾರಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜಿಪಿ ಮುಖ್ಯಸ್ಥ ಅಮಿತ್‌ ಶಾ ಈ ರಾಜ್ಯಕ್ಕೆ ಅನೇಕ ಬಾರಿ ಭೇಟಿ ನೀಡಿ ಮಮತಾ ವಿರುದ್ಧ ಪ್ರಬಲ ವಾಗ್ಧಾಳಿ ನಡೆಸಿದ್ದಾರೆ.  

Advertisement

ಅಕ್ರಮ ವಲಸಿಗರೇ ವಿಷಯ: ಪಶ್ಚಿಮ ಬಂಗಾಳದಲ್ಲೀಗ ಅಕ್ರಮ ವಲಸಿಗರ ಸಮಸ್ಯೆ ವಿಪರೀತವಾಗಿದ್ದು, ಮಮತಾ ಸರ್ಕಾರ ಈ ವಿಷಯದಲ್ಲಿ ಕುರುಡಾಗಿದೆ ಅಥವಾ ಅಕ್ರಮ ವಲಸಿಗರ ಪರವಾಗಿದೆ ಎನ್ನುವ ಆಕ್ರೋಶ ಸ್ಥಳೀಯರಲ್ಲಿ ಮಡುಗಟ್ಟಿದೆ. ಅಲ್ಲದೇ ಶಾರದಾ ಮತ್ತು ರೋಸ್‌ವ್ಯಾಲಿ ಹಗರಣದಲ್ಲಿ ಹಣ ಕಳೆದುಕೊಂಡಿರುವ ಲಕ್ಷಾಂತರ ಬೆಂಗಾಲಿಗಳೀಗ ಸಹನೆ ಕಳೆದುಕೊಂಡಿದ್ದಾರೆ ಎನ್ನಲಾಗುತ್ತದೆ. 

ಎನ್‌ಆರ್‌ಸಿ ವಿಚಾರದಲ್ಲೂ ಬಿಜೆಪಿ ಮತ್ತು ಟಿಎಂಸಿ ನಡುವೆ ಈಗ ಹಗ್ಗಜಗ್ಗಾಟ ನಡೆದಿದ್ದು, ಮಮತಾ ಸರ್ಕಾರ ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶಿ ಅಕ್ರಮ ನುಸುಳುಕೋರರ ಸ್ವರ್ಗ ಮಾಡಿಟ್ಟಿದ್ದಾರೆಂದು ಬಿಜೆಪಿ ಪ್ರಚಾರ ನಡೆಸುತ್ತಿದೆ. 32 ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ: ಈ ಎಲ್ಲಾ ವಿಚಾರಗಳಿಂದಾಗಿ, ಸದ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿಯೇ ಪ್ರಮುಖ ಸ್ಪರ್ಧಾಳುಗಳಾಗಿ ಬದಲಾಗಿವೆ. ಎಡಪಕ್ಷಗಳು ಮತ್ತು ಕಾಂಗ್ರೆಸ್‌ ಅಲ್ಲಿ ದುರ್ಬಲವಾಗಿರುವಂತೆ ಕಂಡುಬರು ತ್ತಿವೆಯಾದರೂ ಪರಿಸ್ಥಿತಿ ಹೇಗೆ ಬೇಕಾದರೂ ಬದಲಾಗುವ ಸಾಧ್ಯತೆ ಇಲ್ಲದಿಲ್ಲ. ಆದರೂ ಭಾರತೀಯ ಜನತಾ ಪಾರ್ಟಿ ಮಾತ್ರ ಈ ಬಾರಿ ವಿಶೇಷ ಹುಮ್ಮಸ್ಸಿನಲ್ಲಿರುವುದಂತೂ ನಿಚ್ಚಳ. ಬಿಜೆಪಿಯ ಹಿರಿಯ ನಾಯಕ, ಪಶ್ಚಿಮ ಬಂಗಾಳದ ಚುನಾ ವಣಾ ಸಮಿತಿಯ ಪ್ರಭಾರಿ ಮುಕುಲ್‌ ರಾಯ್‌ “ಈ ಬಾರಿ ಪ.ಬಂಗಾಲದ 42 ಸ್ಥಾನಗಳಲ್ಲಿ ಬಿಜೆಪಿ 32 ಸ್ಥಾನಗಳಲ್ಲಿ ಗೆಲ್ಲಲಿದೆ’ ಎಂಬ ಅಚ್ಚರಿದಾಯಕ ಭರವಸೆ ನೀಡುತ್ತಿದ್ದಾರೆ. ಅವರ ಪ್ರಕಾರ ತೃಣಮೂಲ ಕಾಂಗ್ರೆಸ್‌ “ಆಡಳಿತ ವಿರೋಧಿ ಅಲೆಯಿಂದ’ ಅಲ್ಲ, ಬದಲಾಗಿ “ಮಮತಾ ವಿರೋಧಿ ಭಾವನೆ’ ಗಳಿಂದಾಗಿ ಹೀನಾಯ ಸೋಲು ಅನುಭವಿಸಲಿದೆ ಎನ್ನುವುದು ಅವರ ವಾದ. ಅಲ್ಲದೇ ಈ ಬಾರಿ ನೇರ ಹಣಾಹಣಿಯಿರುವುದು ಬಿಜೆಪಿ ಮತ್ತು ತೃಣಮೂಲದ ಮಧ್ಯೆ, ಎಡ ಪಕ್ಷಗಳು ಮತ್ತು ಕಾಂಗ್ರೆಸ್‌ನ ಮತಗಳೆಲ್ಲ ಈ ಬಾರಿ ಬಿಜೆಪಿಗೆ ಹರಿದುಬರಲಿವೆ ಎನ್ನುವ ಭರವಸೆಯಲ್ಲೂ ಇದ್ದಾರೆ ಮುಕುಲ್‌ ರಾಯ್‌. 

ಮಹಾಘಟಬಂಧನದ ಮುಂಚೂಣಿ ಚಹರೆಯಾಗಲು ಸಿದ್ಧರಾಗಿರುವ ಮಮತಾ ಅವರಿಗೆ ಈ  ಲೋಕಸಭಾ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂಥ ಸ್ಥಿತಿ ತಂದೊಡ್ಡಿದೆ. ಲೋಕಸಭಾ ಚುನಾವಣೆಯ ಫ‌ಲಿತಾಂಶ, ವಿಧಾನಸಭೆಯ ಚಹರೆಯನ್ನೂ ಬದಲಿಸಲಿದೆ ಎನ್ನುವುದು ದೀದಿಗೆ ಅರಿವಾಗಿದೆ. ಹೀಗಾಗಿ ಅವರೂ ಈಗ ಬಿಜೆಪಿಯ ವಿರದ್ಧ ಪ್ರಬಲ ಸಮರ ಸಾರಿದ್ದಾರೆ. 

ಪ. ಬಂಗಾಳ ಲೋಕಸಭಾ ಸ್ಥಾನಗಳು: 42
ಪ್ರಸಕ್ತ ಲೋಕಸಭಾ ಸ್ಥಾನಗಳು: ಟಿಎಂಸಿ 34, ಕಾಂಗ್ರೆಸ್‌ 4. ಸಿಪಿಐ(ಎಂ) 2, ಬಿಜೆಪಿ 2
ಚುನಾವಣಾ ವಿಷಯಗಳು: ಎನ್‌ಆರ್‌ಸಿ(ರಾಷ್ಟ್ರೀಯ ಪೌರತ್ವ ನೋಂದಣಿ), ಅಕ್ರಮ ವಲಸೆ, ನೋಟ್‌ಬಂದಿ, ನಿರುದ್ಯೋಗ ಸಮಸ್ಯೆ

Advertisement

ರಾಮಮಂದಿರ ನಿರ್ಮಾಣವಾಗದಿದ್ದರೆ ಭಾರತ ಸಿರಿಯಾದಂತೆ ಆಗುತ್ತದೆ ಎಂದು ಶ್ರೀ ಶ್ರೀ ಬೆದರಿಸಿದ್ದರು. ಅದ್ಹೇಗೆ ಅವರು ತಟಸ್ಥ ಮಧ್ಯಸ್ಥಿಕೆದಾರರಾಗಬಲ್ಲರು? 
ಅಸಾದುದ್ದೀನ್‌ ಓವೈಸಿ

ರವಿಶಂಕರ್‌ ಗುರೂಜಿ ನ್ಯೂಟ್ರಲ್‌ ಆಗಿ ಇರಬೇಕು ಎಂದು ಓವೈಸಿ ಹೇಳುತ್ತಿದ್ದಾರೆ. ಅದರ ಒಳಾರ್ಥವೇನೆಂದರೆ, ರವಿಶಂಕರ್‌ ತಮ್ಮ ಪರವಾಗಿ ಮಾತನಾಡಬೇಕು ಮಂದಿರದ ಪರವಾಗಿ ಅಲ್ಲ ಎಂಬುದು!  
ಚಂದ್ರ ಮಣಿಯಾರ್‌

ಈ ಬಾರಿ
ಮುಕುಲ್‌ ರಾಯ್‌
ಬಿಜೆಪಿ ನಾಯಕ,  64 ವರ್ಷದ ಮುಕುಲ್‌ ರಾಯ್‌ ಈಗ  ಪ. ಬಂಗಾಳದಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಮುಖ ಚಹರೆ. ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ರಾಯ್‌ ಮಮತಾರ ಬಲಗೈ ಎನಿಸಿಕೊಂಡಿದ್ದವರು.  ದೀದಿ ವಿರುದ್ಧದ ಮುನಿಸು ಅವರನ್ನು ತೃಣಮೂಲ ತೊರೆಯುವಂತೆ ಮಾಡಿತು.  ಅಂದಿನ ತಮ್ಮ ಆಪ್ತ ಮುಕುಲ್‌ರ ವಿರುದ್ಧ ಈಗ ಮಮತಾ ಸಮರ ಸಾರಿದ್ದಾರೆ. 

ಇಂದಿನ ಕೋಟ್‌
ನಮ್ಮ ಸರ್ಕಾರ ಮಹಿಳಾ ಸಶಕ್ತೀಕರಣಕ್ಕಾಗಿ ಬದ್ಧವಾಗಿದೆ. ಜನ್ಮದಿಂದ ಹಿಡಿದು ಜೀವನದ ಪ್ರತಿ ಹೆಜ್ಜೆಯಲ್ಲೂ ಹೆಣ್ಣುಮಕ್ಕಳ ರಕ್ಷಣೆ, ಸುರಕ್ಷೆ ಮತ್ತು ಸಶಕ್ತೀಕರಣಕ್ಕಾಗಿ ಅನೇಕ ಯೋಜನೆಗಳು ಜಾರಿಯಲ್ಲಿವೆ. 
ನರೇಂದ್ರ ಮೋದಿ

ಯುಪಿಯಲ್ಲಿ ಕಾಶ್ಮೀರಿ ವ್ಯಾಪಾರಿಯ ಮೇಲೆ ನಡೆದ ದಾಳಿಯನ್ನು ನೋಡಿ ನನಗೆ ಬೇಸರವಾಗಿದೆ. ಇದೇ ವೇಳೆಯೇ ದಾಳಿಕೋರರನ್ನು ತಡೆದ ವ್ಯಕ್ತಿಗೂ ನಾನು ನಮಿಸುತ್ತೇನೆ. 
ರಾಹುಲ್‌ ಗಾಂಧಿ 

ಮೋದಿ ಸರ್ಕಾರ ದೇಶದ ಎಲ್ಲಾ ಸಂಪನ್ಮೂಲ ಮತ್ತು ಹಣವನ್ನು ಕದ್ದು, ತಮ್ಮ ಪಕ್ಷಕ್ಕಾಗಿ ಬಳಸಿಕೊಳ್ಳುತ್ತಿದೆ. 
ಮಮತಾ ಬ್ಯಾನರ್ಜಿ

ಮಹಿಳಾ ಮತಗಳೇ ನಿರ್ಣಾಯಕ
2014ರ ಲೋಕಸಭಾ ಚುನಾವಣೆಗಳಂತೆಯೇ 2019ರಲ್ಲೂ ಮಹಿಳಾ ಮತದಾರರು ದೇಶದ ಭವಿಷ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿಲಿದ್ದಾರೆ ಎನ್ನುತ್ತಾರೆ ಚುನಾವಣಾ ಪರಿಣತರು. 2014ರಲ್ಲಿ 9 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾನ ಪ್ರಮಾಣವೇ ಅಧಿಕವಿದ್ದದ್ದು ವಿಶೇಷ. ಈಗ ಮಹಿಳಾ ಮತದಾರರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. 2014ರಲ್ಲಿ 39.7 ಕೋಟಿಯಷ್ಟಿದ್ದ ಮಹಿಳಾ ಮತದಾರರ ಪ್ರಮಾಣ ಈ ಬಾರಿ 43.17 ಕೋಟಿಗೆ ಏರಿದೆ. ಇದೇ ಕಾರಣಕ್ಕಾಗಿಯೇ ಈ ಬಾರಿಯೂ ಮಹಿಳಾ ಮತಗಳು ನಿರ್ಣಾಯಕವಾಗಲಿವೆ.  “2019ರಲ್ಲಿ ಮಹಿಳಾ ಮತದಾನ ಪ್ರಮಾಣ ಹಿಂದಿಗಿಂತಲೂ ಅಧಿಕವಿರಲಿದೆ ಎನಿಸುತ್ತಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲೂ ಕೂಡ ಕೆಲ ರಾಜ್ಯಗಳಲ್ಲಿ ಗಂಡಸರಿಗಿಂತ ಹೆಂಗಸರ ಮತದಾನ ಪ್ರಮಾಣವೇ ಅಧಿಕವಿತ್ತು. ಇತ್ತೀಚಿನ ಕೆಲ ವರ್ಷಗಳಲ್ಲಿ ಮತದಾನದಲ್ಲಿದ್ದ ಲಿಂಗಾನುಪಾತ ಅಂತರ ತಗ್ಗಿದೆ’ ಎನ್ನುತ್ತಾರೆ ಚರಾಜಕೀಯ ಪಕ್ಷಗಳೂ ಅವರತ್ತ ಚಿತ್ತ ಹರಿಸಿರಲಿಲ್ಲ, ಆದರೆ ಈಗ ಅವರ ಮತ ಮಹತ್ವದ ಅರಿವಾಗಿರುವುದರಿಂದ, ಪ್ರತಿಯೊಂದು ರಾಜಕೀಯ ಪಕ್ಷವೂ ಮಹಿಳೆಯರನ್ನು ಸೆಳೆಯುವ ಪ್ರಯತ್ನ ನಡೆಸಿವೆ, ಪಕ್ಷಗಳ ಪ್ರಣಾಳಿಕೆಗಳಲ್ಲಿ ಮಹಿಳಾಪರ ಘೋಷಣೆಗಳು ಹೆಚ್ಚು ಕಾಣಿಸಿಕೊಳ್ಳಲಾರಂಭಿಸಿರುವುದು ಇದೇ ಕಾರಣಕ್ಕೆ ಎನ್ನುತ್ತಾರೆ ಕುಮಾರ್‌.  

43.17 ಕೋಟಿ
ದೇಶದಲ್ಲಿನ ಮಹಿಳಾ ಮತದಾರರ ಪ್ರಮಾಣ ಈಗ 43.17 ಕೋಟಿಗೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next