Advertisement

ಶಿಕ್ಷಣದಿಂದಲೇ ಸಮುದಾಯ ಅಭಿವೃದ್ಧಿ

12:02 PM Dec 15, 2021 | Team Udayavani |

ದೇವದುರ್ಗ: ಕಲಿತಷ್ಟು ಕಡಿಮೆ ಎನ್ನುವ ಅಧುನಿಕ ಜಗತ್ತಿನಲ್ಲಿ ಶಿಕ್ಷಣದಿಂದಲೇ ಸಮುದಾಯಗಳ ಸಂಘಟನೆ ಜತೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಐಪಿಎಸ್‌ ಅಧಿಕಾರಿ ಜಯಪ್ರಕಾಶ ಅಕ್ಕರಕಿ ಹೇಳಿದರು.

Advertisement

ಪಟ್ಟಣದ ಖೇಣೇದ್‌ ಮುರಿಗೆಪ್ಪ ಫಂಕ್ಷನ್‌ ಸಭಾಂಗಣದಲ್ಲಿ ಸರ್ವ ನಾಗರಿಕ ಮತ್ತು ಕಾಲೇಜ್‌ ಗೆಳೆಯರ ಬಳಗದ ವತಿಯಿಂದ ಭಾರತೀಯ ಪೊಲೀಸ್‌ ಸೇವೆಗೆ ಐಪಿಎಸ್‌ ಮುಂಬಡ್ತಿ ಹೊಂದಿದ ಜಯಪ್ರಕಾಶ ಅಕ್ಕರಕಿ ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಎಷ್ಟೇ ಉನ್ನತ ಹುದ್ದೆಗಳ ಸೌಲಭ್ಯ ಪಡೆದರೂ ತಂದೆ-ತಾಯಿ, ಗುರು ಹಿರಿಯರನ್ನು ಗೌರವಿಸಬೇಕು. ಸರ್ಕಾರಿ ಶಾಲೆಯಿಂದ ಶಿಕ್ಷಣ ಆರಂಭಿಸಿ ಇಂಥದೊಂದು ಹುದ್ದೆ ಪಡೆಯಲು ನನಗೆ ಪ್ರೇರಣೆ ಎಂದ ಅವರು, ಪೊಲೀಸ್‌ ವೃತ್ತಿಯೇ ಬಿಡುವಿಲ್ಲದ ಕೆಲಸ. ಒತ್ತಡದಲ್ಲಿದಾಗ ದೂರವಾಣಿ ಕರೆಗೆ ಸ್ಪಂದಿಸಿಲ್ಲ ಎಂದು ಯಾರೂ ಬೇಸರ ಮಾಡಿಕೊಳ್ಳಬೇಡಿ. ಜನತೆಗೆ ಸದಾ ಸ್ಪಂದಿಸುತ್ತೇನೆ ಎಂದರು.

ಈ ವೇಳೆ ಬೂದಿಬಸವೇಶ್ವರ ಶ್ರೀ, ಕಪಿಲ ಸಿದ್ದರಾಮೇಶ್ವರ ಸ್ವಾಮೀಜಿ, ಅಮರೇಶ ಬಲ್ಲಿದವ್‌, ಡಾ| ಬಸವರಾಜರೆಡ್ಡಿ, ಡಾ| ಮಂಜುನಾಥ, ನಾಗರಾಜ ಅಕ್ಕರಕಿ, ರಾಜಶೇಖರ ನಾಯಕ, ಭಾನುಪ್ರಕಾಶ ಖೇಣೇದ್‌, ರಾಮಣ್ಣ ಇರಬಗೇರಾ, ದೇವಿಂದ್ರಪ್ಪ ಸ್ವಾಸಿಗೇರಾ, ಪುರಸಭೆ ಸದಸ್ಯರಾದ ಚಂದ್ರಕಾಂತ ಬಿಲ್ಲವ್‌, ಮಾನಪ್ಪ ಮೇಸ್ತ್ರಿ, ಶರಣಗೌಡ ಗೌರಂಪೇಟೆ, ನಾಗರಾಜ ಗೌರಂಪೇಟೆ, ರಾಚಪ್ಪ ಸಾಹು ಖೇಣೇದ್‌, ದೇವರೆಡ್ಡಿ ಜೋಳದಹೆಡಗಿ, ಸಾಜಿದ್‌, ಚಂದ್ರಶೇಖರ ಅಕ್ಕರಕಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next