Advertisement

ಶೈಕ್ಷಣಿಕ ಅಭಿವೃದ್ಧಿಗೆ ಸಮುದಾಯ ಸಹಕಾರ ಅಗತ್ಯ: ರವೀಂದ್ರ

11:58 AM Jun 11, 2018 | Team Udayavani |

ಯಾದಗಿರಿ: ಶೈಕ್ಷಣಿಕ ಅಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ರವೀಂದ್ರ ಹೇಳಿದರು.  ತಾಲೂಕಿನ ಅಲ್ಲಿಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್‌ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಹಾಜರಾತಿ ಮತ್ತು ದಾಖಲಾತಿ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕಳುಹಿಸುವ ಮೂಲಕ ಅವರ ಉತ್ತಮ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಮುಖ್ಯವಾಗಿದೆ. ಮಕ್ಕಳಿಗಾಗಿ ಆಸ್ತಿಯನ್ನು ಸಂಪಾದಿಸುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮ ಸಂಯೋಜಕ ಮೌನೇಶ ನಾಲ್ಕಮನಿ ಮಾತನಾಡಿ, ದಾಖಲಾತಿ ಮತ್ತು ಹಾಜರಾತಿ ಇಡೀ ವರ್ಷ ನಡೆಯುವ ಕಾರ್ಯಕ್ರಮ. ಇದಕ್ಕೆ ಇವತ್ತು ಚಾಲನೆ ನೀಡಲಾಗಿದೆ. ಗ್ರಾಮದ ಜನರ ಸಹಕಾರದ ಮೇರೆಗೆ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಲ್ಲಪ್ಪ ಮ್ಯಾಗೇರಿ, ಕಾರ್ಯಕ್ರಮ ಸಂಯೋಜಕ ಕೆ.ಎಂ. ವಿಶ್ವನಾಥ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಸಾಬಣ್ಣ ನಾಟೇಕಾರ್‌ 37 ಮಕ್ಕಳಿಗೆ
ಉಚಿತ ನೋಟ್‌ ಬುಕ್‌, ಪೆನ್‌ ನೀಡಿದರು. 

ಗ್ರಾಮದ ಮುಖಂಡರಾದ ಹಂಪಯ್ಯ ಸದರಿ ಸಾವಿರ ರೂ. ಪ್ರೋತ್ಸಾಹಧನ ವಿತರಿಸಿದರು. ಸಾಬಣ್ಣ ನಾಟೇಕಾರ್‌, ಹಂಪಯ್ಯ ಸದರಿ, ನಾಗಪ್ಪ ಸದರಿ, ರಾಜಯ್ಯ ಸ್ವಾಮಿ, ಮೊಗಲಪ್ಪ, ನಿಂಗಪ್ಪ, ಮಾಣಿಕರಾವ್‌, ಸೋಮಶೇಖರ, ಶಾಮು, ಏಸಪ್ಪ, ಸಾಬಣ್ಣ, ದೇವಮ್ಮ, ಚನ್ನಬಸಮ್ಮ, ಶಾಣಮ್ಮ, ದುಂಡಮ್ಮ, ರಮೇಶ ಈಟೆ, ಪಾಟೀಲ್‌, ಈರಣ್ಣಾ,
ಶಾಖೀರ್‌, ವಿಶ್ವನಾಥ, ಮೌನೇಶ, ಶಿಲ್ಪಾ, ಸಂಧ್ಯಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next