Advertisement
ಮಹಿಳೆಯರ ಪ್ಲಸ್ 87 ವಿಭಾಗದಲ್ಲಿ ಸ್ಪರ್ಧಿಸಿದ ಪೂರ್ಣಿಮಾ ಚಿನ್ನದ ಪದಕದ ಹಾದಿಯಲ್ಲಿ ಎಂಟು ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದಾರೆ. ಪೂರ್ಣಿಮಾ ಪಾಂಡೆ ಒಟ್ಟು 229 ಕೆ.ಜಿ (102 ಕೆ.ಜಿ ಹಾಗೂ 127 ಕೆ.ಜಿ) ಭಾರ ಎತ್ತ ಮೂಲಕ ಮುಂದಿನ ವರ್ಷ ನಡೆಯಲಿರುವ ಕಾಮನ್ವೆಲ್ತ್‌ಗೇಮ್ಸ್‌ಗೆ ನೇರ ಅರ್ಹತೆ ಪಡೆದಿದ್ದಾರೆ
ಪುರುಷರ 109 ಕೆ.ಜಿ ವಿಭಾಗದಲ್ಲಿ 348 ಕೆ.ಜಿ (161 ಕೆ.ಜಿ ಪ್ಲಸ್ 187 ಕೆ.ಜಿ) ಭಾರ ಎತ್ತಿ ಸಾಧನೆ ಮಾಡಿರುವ ಭಾರತದ ಲವ್‌ಪ್ರೀತ್ ಸಿಂಗ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
Related Articles
Advertisement
ಮಹಿಳೆಯರ 87 ಕೆ.ಜಿ ವಿಭಾಗದಲ್ಲಿ ಅನುರಾಧಾ ಪಾವುಂರಾಜ್ ಒಟ್ಟು 195 ಕೆ.ಜಿ (90 ಕೆ.ಜಿ ಪ್ಲಸ್ 105 ಕೆ.ಜಿ) ಭಾರ ಎತ್ತುವ ಮೂಲಕ ಕಂಚಿನ ಪದಕ ಗೆದ್ದರು. ಪ್ರತಿ ವಿಭಾಗದಲ್ಲಿ ಚಿನ್ನದ ಪದಕ ಜಯಸುವ ವೇಟ್‌ಲಿಫ್ಟರ್‌ಗಳು ಮುಂದಿನ ವರ್ಷ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ಗೆ ನೇರ ಪ್ರವೇಶ ಗಳಿಸಲಿದ್ದಾರೆ. ಇನ್ನುಳಿದವರ ಅರ್ಹತೆಯು ರ್‍ಯಾಂಕಿಂಗ್ ಆಧಾರದಲ್ಲಿ ಪರಿಗಣಿಸಲಾಗುತ್ತದೆ.