Advertisement

ಭಾರತದ ಬುಟ್ಟಿಗೆ 5ನೇ ಬಂಗಾರಪೂನಂ ಯಾದವ್‌ ಚಿನ್ನದ ನಗು

06:15 AM Apr 09, 2018 | Team Udayavani |

ಗೋಲ್ಡ್‌ಕೋಸ್ಟ್‌: ಭಾರತದ ವೇಟ್‌ಲಿಫ್ಟಿಂಗ್‌ ಚಿನ್ನದ ಬೇಟೆ ರವಿವಾರವೂ ಮುಂದುವರಿದಿದೆ. ವನಿತೆಯರ 69 ಕೆಜಿ ವಿಭಾಗದಲ್ಲಿ ಪೂನಂ ಯಾದವ್‌ ಸ್ವರ್ಣದಿಂದ ಸಿಂಗಾರಗೊಂಡರು.

Advertisement

ಕಳೆದ ಗ್ಲಾಸೊYà ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಪೂನಂ ಯಾದವ್‌ ಗೋಲ್ಡ್‌ಕೋಸ್ಟ್‌ನಲ್ಲಿ ನೇರವಾಗಿ ಚಿನ್ನವನ್ನೇ ಎತ್ತಿದರು. ರವಿವಾರದ ಸ್ಪರ್ಧೆಯಲ್ಲಿ ಪೂನಂ ಒಟ್ಟು 222 ಕೆಜಿ (110+122) ಭಾರವೆತ್ತಿ ಪೋಡಿಯಂನಲ್ಲಿ ಬಹಳ ಎತ್ತರದಲ್ಲಿ ಕಾಣಿಸಿಕೊಂಡರು. ಇದು ಪೂನಂ ಅವರ ಶ್ರೇಷ್ಠ ವೈಯಕ್ತಿಕ ನಿರ್ವಹಣೆಯಾಗಿದೆ. ಇಂಗ್ಲೆಂಡಿನ ಸಾರಾ ಡೇವಿಸ್‌ 217 ಕೆಜಿಯೊಂದಿಗೆ (95+122) ಬೆಳ್ಳಿ ಪದಕ ಜಯಿಸಿದರೆ, ಫಿಜಿಯ ಅಪೊಲೋನಿಯಾ ವೈವೈ 216 ಕೆಜಿ ಭಾರದೊಂದಿಗೆ  (100+116) ಕಂಚಿನ ಪದಕ ಗೆದ್ದರು.

ಇಂಗ್ಲೆಂಡಿನ ಲಿಫ್ಟರ್‌ ಸಾರಾ ಡೇವಿಸ್‌ ಕ್ಲೀನ್‌ ಆ್ಯಂಡ್‌ ಜರ್ಕ್‌ನ ಕೊನೆಯ ಪ್ರಯತ್ನದಲ್ಲಿ 128 ಕೆಜಿ ಭಾರವೆತ್ತುವ ಗುರಿ ಇರಿಸಿಕೊಂಡರೂ ಇದನ್ನು ಪರಿಪೂರ್ಣಗೊಳಿಸಲು ವಿಫ‌ಲರಾದರು. ಇದನ್ನು ಸಾಧಿಸಿದ್ದೇ ಆದರೆ ಪೂನಂ ಬೆಳ್ಳಿಗೆ ತೃಪ್ತಿಪಡಬೇಕಿತ್ತು.

“ನಾನು ಫಿಜಿ ಎದುರಾಳಿಯಿಂದ ಭಾರೀ ಪೈಪೋಟಿ ಎದುರಾಗಬಹುದೆಂಬ ನಿರೀಕ್ಷೆಯಲ್ಲಿದ್ದೆ. ಇಂಗ್ಲೆಂಡ್‌ ಸ್ಪರ್ಧಿ ಬಗ್ಗೆ ಅಂತಹ ಭೀತಿ ಇರಲಿಲ್ಲ. ಆದರೆ ಆಕೆ ಅಂತಿಮ ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ 128 ಕೆಜಿ ಭಾರಕ್ಕೆ ಯತ್ನಿಸಿದಾಗ ಬಹಳ ನರ್ವಸ್‌ ಆದೆ. ಆಕೆಯಲ್ಲಿ ಅಂಥದೊಂದು ಸಾಮರ್ಥ್ಯವಿತ್ತು. ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು….’ ಎಂದು ಪೂನಂ ಯಾದವ್‌ ಬಹಳ ಖುಷಿಯಲ್ಲಿ ಪ್ರತಿಕ್ರಿಯಿಸಿದರು.

ಆರ್ಥಿಕ ಸ್ಥಿತಿ ಪರಾಗಿಲ್ಲ
“ನಾನು 2014ರಲ್ಲಿ ಭಾರತದ ವೇಟ್‌ಲಿಫ್ಟಿಂಗ್‌ ಕ್ಯಾಂಪ್‌ ಸೇರಿಕೊಂಡೆ. ಇದಕ್ಕೆ ನನ್ನ ಅಕ್ಕನೇ ಸ್ಫೂರ್ತಿ. 2014ರ ಗ್ಲಾಸೊYà ಪದಕ ಸಾಧನೆಯ ಬಳಿಕ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ಬಹಳಷ್ಟು ಸುಧಾರಿಸಿದೆ. ಅಂದಿನ ಗೇಮ್ಸ್‌ಗೂ ಮುನ್ನ ತಂದೆ ಸಾಲ ಮಾಡಿ ನನಗೆ ತರಬೇತಿ ವ್ಯವಸ್ಥೆ ಮಾಡಿದ್ದರು. ನಾನು ಕಂಚಿನ ಪದಕ ಗೆದ್ದ ಬಳಿಕ ಸಾಲ ತೀರಿಸಿದರು. ಈ ಸಲದ ಚಿನ್ನದ ಸಾಧನೆಯಿಂದ ನಮ್ಮ ಬಾಳು ಬಂಗಾರವಾಗಬಹುದೆಂಬ ನಿರೀಕ್ಷೆ ಹೊಂದಿದ್ದೇನೆ’ ಎಂದು ಇಂಡಿಯನ್‌ ರೈಲ್ವೇಯಲ್ಲಿ ಉದ್ಯೋಗದಲ್ಲಿರುವ, ವಾರಾಣಸಿಯ 22ರ ಹರೆಯದ ಪೂನಂ ಯಾದವ್‌ ಹೇಳಿದರು.

Advertisement

ಇದಕ್ಕೂ ಮುನ್ನ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು, ಸಂಜಿತಾ ಚಾನು, ಸತೀಶ್‌ ಶಿವಲಿಂಗಂ, ವೆಂಕಟ ರಾಹುಲ್‌ ರಗಾಲ ಭಾರತಕ್ಕೆ ಚಿನ್ನವನ್ನು ತಂದಿತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next