Advertisement

ಕಾಮನ್ವೆಲ್ತ್‌ ಗೇಮ್ಸ್‌ ವೈಭವಕ್ಕೆ ಭವ್ಯ ತೆರೆ

06:00 AM Apr 16, 2018 | Team Udayavani |

ಗೋಲ್ಡ್‌ಕೋಸ್ಟ್‌: ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ಗೆ ವರ್ಣರಂಜಿತ ತೆರೆಬಿದ್ದಿದೆ. ಆತಿಥೇಯ ಆಸ್ಟ್ರೇಲಿಯ ಒಟ್ಟು 198 ಪದಕಗಳೊಂದಿಗೆ ಅಗ್ರಸ್ಥಾನಿಯಾಗಿದೆ. 136 ಪದಕ ಗೆದ್ದ ಇಂಗ್ಲೆಂಡ್‌ ದ್ವಿತೀಯ ಸ್ಥಾನ ಪಡೆದಿದೆ. 66 ಪದಕ ಗೆದ್ದ ಭಾರತ ತೃತೀಯ ಸ್ಥಾನದಲ್ಲಿ ಅಲಂಕೃತಗೊಂಡಿದೆ. 

Advertisement

ಅಂತಿಮ ದಿನ ಭಾರತಕ್ಕೆ ಸೈನಾ ನೆಹ್ವಾಲ್‌ ಮೂಲಕ ಒಂದು ಚಿನ್ನದ ಪದಕ ಬಂತು. ಬ್ಯಾಡ್ಮಿಂಟನ್‌ ಸಿಂಗಲ್ಸ್‌ ನಲ್ಲಿ ಅವರೆದುರು ಆಡಿದ ಪಿ.ವಿ. ಸಿಂಧು ಬೆಳ್ಳಿ ಗೆದ್ದರು. ಪುರುಷರ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ನಲ್ಲಿ ಕೆ. ಶ್ರೀಕಾಂತ್‌, ಡಬಲ್ಸ್‌ನಲ್ಲಿ ಸಾತ್ವಿಕ್‌ ರೆಡ್ಡಿ-ಚಿರಾಗ್‌ ಶೆಟ್ಟಿ, ಸ್ಕ್ವಾಷ್‌ ಮಹಿಳಾ ಡಬಲ್ಸ್‌ನಲ್ಲಿ ದೀಪಿಕಾ ಪಳ್ಳಿàಕಲ್‌-ಜೋಶ್ನಾ ಚಿನ್ನಪ್ಪ ಬೆಳ್ಳಿ ಗೆದ್ದರು. ಟಿಟಿ ಮಿಶ್ರ ಡಬಲ್ಸ್‌ ನಲ್ಲಿ ಮಣಿಕಾ ಬಾತ್ರಾ-ಜಿ. ಸತಿಯನ್‌, ಪುರುಷರ ಸಿಂಗಲ್ಸ್‌ನಲ್ಲಿ ಅಚಂತ ಶರತ್‌ ಕಮಲ್‌ ಕಂಚು ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next