Advertisement

ಕಾಮನ್ವೆಲ್ತ್‌ ಗೇಮ್ಸ್‌: ಭಾರತಕ್ಕೆ ಬೆಳ್ಳಿ ಗೆದ್ದುಕೊಟ್ಟ ತೇಜಸ್ವಿನಿ

11:39 AM Apr 12, 2018 | Team Udayavani |

ಗೋಲ್ಡ್‌ ಕೋಸ್ಟ್‌: ಇಲ್ಲೀಗ ಸಾಗುತ್ತಿರುವ 2018ರ ಕಾಮನ್ವೆಲ್ತ್‌ ಗೇಮ್ಸ್‌ನ ಎಂಟನೇ ದಿನವಾದ ಇಂದು ಗುರುವಾರ ಭಾರತದ ಶೂಟರ್‌  ತೇಜಸ್ವಿನಿ ಸಾವಂತ್‌ ಮಹಿಳೆಯರ 50ಎಂ ರೈಫ‌ಲ್‌ ಪ್ರೋನ್‌ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಗೆದ್ದುಕೊಟ್ಟರು. 

Advertisement

ಆದರೆ ಇದೇ ಸ್ಪರ್ಧೆಯಲ್ಲಿ ಅರುಣ್‌ ಮೌದ್ಗಿಲ್‌ ಅವರು 16ನೇ ಸ್ಥಾನಿಯಾಗಿ ನಿರಾಶೆಯುಂಟು ಮಾಡಿ ಪದಕ ವಂಚಿತರಾದರು. 

ಭಾರತದ ಪದಕ ಗಳಿಕೆ ಈಗ 12 ಚಿನ್ನ , 5 ಬೆಳ್ಳಿ ಮತ್ತು 8 ಕಂಚು ಆಗಿದೆ. 

ಇದೇ ವೇಳೆ ಭಾರತದ ಕುಸ್ತಿ ಪಟು ಸುಶೀಲ್‌ ಕುಮಾರ್‌ 74 ಕೆಜಿ, ರಾಹುಲ್‌ ಅವಾರೆ 57 ಕೆಜಿ ಮತ್ತು ಬಬಿತಾ ಕುಮಾರಿ 53 ಕೆಜಿ ವಿಭಾಗದಲ್ಲಿ ನಿರ್ಣಾಯಕ ಜಯ ಸಾಧಿಸಿ ಫೈನಲ್‌ ತಲುಪಿದ್ದಾರೆ. 

ಭಾರತೀಯ ಮಹಿಳೆಯರ ಹಾಕಿ ತಂಡ ಇಂದು ಪ್ರಬಲ ಆಸೀಸ್‌ ತಂಡವನ್ನು ಸೆಮಿ ಫೈನಲ್‌ನಲ್ಲಿ ಎದುರಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next