Advertisement

ಜೀತೂಗೆ ಚಿನ್ನ, ಓಂ ಪ್ರಕಾಶ್‌ಗೆ ಕಂಚು: ಪದಕ ಪಟ್ಟಿಯಲ್ಲಿ ಭಾರತ ನಂ.3

11:22 AM Apr 09, 2018 | Team Udayavani |

ಗೋಲ್ಡ್‌ ಕೋಸ್ಟ್‌ : ಇಲ್ಲೀಗ ಸಾಗುತ್ತಿರುವ 2018ರ ಕಾಮನ್ವೆಲ್ತ್‌ ಗೇಮ್ಸ್‌ ನ ಐದನೇ ದಿನದಂದು ಭಾರತ 8 ಚಿನ್ನ, 4 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ಗೆಲ್ಲುವ ಮೂಲ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ. 

Advertisement

ಪುರುಷರ 10 ಎಂ ಏರ್‌ ಪಿಸ್ಟಲ್‌ ಸ್ಪರ್ಧೆಯಲ್ಲಿ ಜೀತೂ ರಾಯ್‌ ಅವರು ಚಿನ್ನ ಮತ್ತು ಓಂ ಪ್ರಕಾಶ್‌ ಅವರು ಕಂಚಿನ ಪದಕವನ್ನು ಗೆದ್ದುಕೊಂಡರು.

ಅನಂತರ ಮೆಹೂಲಿ ಘೋಷ್‌ ಮತ್ತು ಅಪೂರ್ವಿ ಚಂಡೇಲಾ ಅವರು ಮಹಿಳೆಯರ 10 ಎಂ ಏರ್‌ ಪಿಸ್ಟರ್‌ ಫೈನಲ್‌ನಲ್ಲಿ ಅನುಕ್ರಮವಾಗಿ 2 ಮತ್ತು 3ನೇ ಸ್ಥಾನಿಯಾಗಿ ಜಯ ಸಾಧಿಸಿದರು. 

ವೇಟ್‌ ಲಿಫ್ಟರ್‌ ಪ್ರದೀಪ್‌ ಸಿಂಗ್‌ ಅವರು ಪುರುಷರು 105 ಕಿಲೋ ವಿಭಾಗದಲ್ಲಿ ಬೆಳ್ಳಿ ಗೆದ್ದರು. ಇದೇ ವೇಳೆ ಭಾರತದ ಪುರುಷರ ಟೇಬಲ್‌ ಟೆನಿಸ್‌ ತಂಡ ಫೈನಲ್‌ ಪ್ರವೇಶಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next