Advertisement
ಸೋಲಾರಿ ಹಕ್ಕಿ. ಹಸಿರುಕೆನ್ನೆ ಬಾತು, ಸಾಮಾನ್ಯ ಬಾತುಕೋಳಿ ಎಂದು ಕನ್ನಡದಲ್ಲಿ ಕರೆಯುವರು. ಇದೊಂದು ವಲಸೆ ಬಾತುಕೋಳಿ. ಗೂಸ್, ಡಕ್, ಟೇಲ್‌ಎಂದು ಮೂರು ಶಬ್ದಗಳಿಂದ ಬಾತುಗಳನ್ನು ಕರೆಯುತ್ತಾರೆ. ಇವೆಲ್ಲವುಗಳಿಗೂ ಜಾಲಪಾದ ಇದೆ. ಹಾರುವುದರಲ್ಲೂ ಸಾಮ್ಯತೆ ಇದೆ. ನೀರಿನ ಸಮೀಪವೇ ಇವೆಲ್ಲ ಇರುತ್ತವೆ. ಆಕಾರ ಗಾತ್ರದಲ್ಲಿ ವ್ಯತ್ಯಾಸ ಇದ್ದರೂ ಇವೆಲ್ಲ ಸಾಮಾನ್ಯವಾಗಿ ಹಸಿರು ಹುಲ್ಲು ಚಿಗುರೆಲೆ ನೀರಿನ ಸಸ್ಯಗಳಾದ ಕವಳೆ, ಕಮಲ, ಲಿಲಿ ಗಿಡಗಳ ಹಸಿರು ಚಿಗುರು ಕೆಲವೊಮ್ಮೆ ಅದರದಂಟನ್ನು ಸೀಳಿ ಅದರ ತಿರುಳುಗಳನ್ನೂ ತಿನ್ನುತ್ತವೆ. ಹೀಗೆ ಇದು ಸಾಮಾನ್ಯವಾಗಿ ಸಸ್ಯಾಹಾರಿಯಾಗಿದ್ದರೂ ಸಹ ಕೀಟ, ಜಲಕೀಟ, ಮೃದ್ವಂಗಿಗಳನ್ನೂ ಸಹ ತಿನ್ನುವುದಿದೆ.
Related Articles
Advertisement
ಇತರ ಬಾತುಗಳಂತೆ ಚಿಕ್ಕದಪ್ಪ ಸ್ವಲ್ಪ ಮೇಲ್ಮುಖವಾಗಿರುವಾಗೇ ಬಣ್ಣದ ಚುಂಚು ಇದೆ. ಮೇಲುcಂಚು ತುದಿಯಲ್ಲಿ ಕೆಳಮುಖ ಬಾಗಿದ್ದು ಚೂಪಾದ ಕೊಕ್ಕೆಯಂತಿದೆ. ಇದರ ರೆಕ್ಕೆಕಪ್ಪು ಹೊಳೆವ ಹಸಿರು ಮತ್ತು ಬೂದು ಬಣ್ಣಗಳಿಂದ ಕೂಡಿದೆ. ಗಜನೀ, ಕೆಸರು ನೀರಿರುವ ಪ್ರದೇಶ ಹಾಗೂ ಹಸಿರು ನೀರು ಸಸ್ಯ ತುಂಬಿರುವ ಸ್ಥಳ ಇದಕ್ಕೆ ಪ್ರಿಯ. ಅಂಡಮಾನ್ ನಿಕೋಬಾರ್ ದ್ವೀಪ, ಶ್ರೀಲಂಕಾ, ಮಾಲ್ಡೀವ್ಸಗಳಲ್ಲು ವಲಸೆ ಬಂದ ದಾಖಲೆ ಇದೆ. ಇದು ನಿಶ್ಚಿತವಾಗಿ ಚಳಿಗಾಲದಲ್ಲಿ ಭಾರತಕ್ಕೆ ಬರುತ್ತವೆ. ಧಾರವಾಡದ ಸುತ್ತಮುತ್ತ, ಬಯಲು ಸೀಮೆ ಮತ್ತು ಪಶ್ಚಿಮ ಘಟ್ಟದ ಕೂಡುವ ಭಾಗ ಅಪರೂಪಕ್ಕೆ ಕರಾವಳಿ ಪ್ರದೇಶಗಳಲ್ಲೂ ಕಂಡ ನಿದರ್ಶನ ಇದೆ. ಉತ್ತರಕರ್ನಾಟಕದ ಭಾಗದಲ್ಲಿ ಚಳಿಗಾಲ ಬಂದಕೂಡಲೆ ಗುಂಪಾಗಿ ಕಾಣುತ್ತಿದ್ದವು. ಇತರ ಬಾತುಗಳ ಜೊತೆ ಇವು ವಾಸಿಸುತ್ತವೆ.
ಉತ್ತರ ಯುರೋಪಖಂಡದಿಂದ ಹಿಡಿದು ಪೂರ್ವ ಸೈಬೇರಿಯಾಗಳಲ್ಲಿ ಬೇಸಿಗೆಯಲ್ಲಿ ಮರಿಮಾಡಿ ಮರಿಗಳು ಹಾರುವ ಸಾಮರ್ಥ್ಯ ಬಂದಾಗ ಅಲ್ಲಿಯ ವಿಪರೀತ ಚಳಿಯಿಂದ ರಕ್ಷಣೆ ಪಡೆಯಲು ದಕ್ಷಿಣ ಮುಖವಾಗಿ ಸಾಗಿ ಆಫ್ರಿಕಾ, ಸೌದಿ ಅರೇಬಿಯಾ, ಚೀನಾ, ಜಪಾನ ಮತ್ತು ಮಧ್ಯ ಏಷ್ಯಾಕ್ಕೆ ವಲಸೆ ಬರುತ್ತದೆ. ಈ ಹಕ್ಕಿಯ ಮೈಬಣ್ಣ ಬೂದು. ಗಂಡು ಹಕ್ಕಿ ಸ್ವಲ್ಪ ಮಸಕು ಬಣ್ಣ ಇದ್ದು ಮೈಮೇಲೆ ಬೂದು ಬಣ್ಣದ ರೇಖೆ ಇದೆ. ತಲೆಯ ಎರಡೂ ಪಕ್ಕದಲ್ಲಿ ಬಿಳಿ ಬಣ್ಣದ ಗೋಟ ಇರುವ ಹೊಳೆವ ಹಸಿರು ಬಣ್ಣ ಇದೆ. ಮುಂಭಾಗದಎದೆಯಲ್ಲಿ ಚುಕ್ಕಿಗಳಿವೆ. ಹೆಣ್ಣು ಬಾತುವಿನ ಮೈಬಣ್ಣ ಬೂದು ಮತ್ತು ಎದೆಯಲ್ಲಿ ಚುಕ್ಕೆಗಳಿವೆ. ರೆಕ್ಕೆ ಕಂದು,
ಹಸಿರು ,ಕಪ್ಪು ಮಿಶ್ರ ಬಣ್ಣದಿಂದಕೂಡಿದೆ. ಹೊಟ್ಟೆ ಭಾಗ ಮಾಸಲು ಬಣ್ಣದಿಂದ ಕೂಡಿದೆ. ಜೊಂಡು ಹುಲ್ಲು ಉಪಯೋಗಿಸಿ ಗೂಡು ಮಾಡುವುದು. ಅದರ ಮೇಲೆ ಗರಿಗಳ ಮೆತ್ತನೆ ಹಾಸು ಹಾಕಿ ಆ ತಗ್ಗಿನಲ್ಲಿ 7-10 ಹೊಳೆವ ಬಿಳಿ ಬಣ್ಣದ ಮೊಟ್ಟೆ ಇಡುತ್ತದೆ. ಭತ್ತದ ಎಳೆ ಚಿಗುರು, ತೆನೆ, ಕಾಳು, ಹುಲ್ಲುಬೀಜ ತಿನ್ನುತ್ತಾ
ಬೆಳೆದು ಚಳಿಗಾಲ ಬರುವ ಹೊತ್ತಿಗೆ ರೆಕ್ಕೆ ಬಲಿತು ವಲಸೆ ಹೋಗಲು ಸಿದ್ಧ ವಾಗುತ್ತದೆ. ಇದು ವಲಸೆಗೆ ಏನು ಸಿದ್ಧತೆ ಮಾಡುವುದು? ಸೈಬೇರಿಯಾಯುರೋಪಿನಿಂದ ಭಾರತಕ್ಕೆ ಬರಲು ಸಮಯ ಎಷ್ಟು ಬೇಕು? ಪ್ರತಿದಿನ ಎಷ್ಟುದೂರ ಹಾರುವುದು? ಎಷ್ಟು ವೇಗದಲ್ಲಿ ಬರುತ್ತವೆ? ಇವೆಲ್ಲಾ ಸಂಶೋಧನೆ ಮಾಡಲು ಒಳ್ಳೆಯ ಸಂಗತಿ. ಇದು ತಿಳಿದರೆ ಈ ಹಕ್ಕಿಗಳ ಜೀವನಕ್ರಮದ ಮೇಲೆ ಹೆಚ್ಚು ವಿಷಯ ತಿಳಿದೀತು. ಪಿ.ವಿ.ಭಟ್ ಮೂರೂರು