Advertisement
ಈ ಹಕ್ಕಿಯ ತಲೆ ಹಸಿರು ಹಿನ್ನೆಲೆಯ ಹೊಳೆವ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಬಾಲ ಬೂದು ಬಣ್ಣದ್ದು. ರೆಕ್ಕೆ ಒಳಭಾಗದ ಮುಕ್ಕಾಲು ಭಾಗ ಬಿಳಿಯಾಗಿರುತ್ತದೆ. ರೆಕ್ಕೆಯ ಅಂಚು ಯಾವ ಬಣ್ಣದಿಂದ ಕೂಡಿರುತ್ತದೆ ಎಂಬುದು ಹಾರುವಾಗ ಸ್ಪಷ್ಟವಾಗಿ ಕಾಣುತ್ತದೆ. ಬಹುತೇಕ ಕಪ್ಪೇ. ಸಾಮಾನ್ಯವಾಗಿ ಪ್ರಾಯಕ್ಕೆ ಬರುವ ಮುನ್ನ ಗಂಡು-ಹೆಣ್ಣು ಒಂದೇರೀತಿಯ ಬಣ್ಣದಿಂದ ಕಾಣುತ್ತದೆ. ಕಣ್ಣು ಮತ್ತು ಚುಂಚಿನ ನಡುವೆ ಬಿಳಿ ಮತ್ತು ಕಪ್ಪು ಬಣ್ಣದ ರೇಖೆ ಇರುತ್ತದೆ. ಚುಂಚು, ಕಾಲು ಕೆಂಪು ಹಾಗೂ ಕೆಲವೊಮ್ಮೆ ಕಂದುಗೆಂಪು ಬಣ್ಣದಿಂದ ಕೂಡಿರುವುದೂ ಇದೆ.
ದೊಡ್ಡ ಸರೋವರ, ನೀರಿನ ವೇಗ ಹೆಚ್ಚಿರುವ ನದಿ ಅಂದರೆ ಇದಕ್ಕೆ ಬಲು ಪ್ರಿಯ. ಪಾಕಿಸ್ತಾನ, ಉತ್ತರ ಭಾರತ, ದಕ್ಷಿಣದ ಮುಂಬಯಿವರೆಗೂ ಈ ಹಕ್ಕಿಯನ್ನು ಕಾಣಬಹುದು. ಕರ್ನಾಟಕದ ಕುಮಟಾ, ಹೊನ್ನಾವರ ಭಾಗದ ನದೀ ತೀರ, ಮುಖಜ ಭಾಗದಲ್ಲಿ ಕಾಣಸಿಗುತ್ತದೆ. ಈ ಹಕ್ಕಿ ಲಡಾಕ್ ಮತ್ತು ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಮರಿಮಾಡುತ್ತದೆ. ಜೋಡಿಯಾಗಿ ಇಲ್ಲವೇ ಚಿಕ್ಕಗುಂಪಿನಲ್ಲಿ ಸಾಮಾನ್ಯವಾಗಿ ಈಜುತ್ತಾ ,ಮುಳುಗಿ ನೀರಿನಲ್ಲಿರುವ ಕ್ರಿಮಿ ಮತ್ತು ಚಿಕ್ಕ ಮೀನನ್ನು ಹಿಡಿದು ತಿನ್ನುತ್ತದೆ.
Related Articles
Advertisement
ಇದೇ ಗುಂಪಿಗೆ ಸೇರಿದ ಕೆಲವು ಉಪಪ್ರಬೇಧದ ಬಾತು ನೆಲದಲ್ಲೂ ಮೊಟ್ಟೆ ಇಟ್ಟ ಉದಾಹರಣೆಗಳಿವೆ.ಹೆಣ್ಣು ಹೊಟ್ಟೆಯ ತಳದಲ್ಲಿ ಮರದ ತುಣುಕು, ಹಳೆಯ ಗೂಡಿನ ಅವಶೇಷ, ಹುಲ್ಲು ಹಾಕುವುದು, ಮೊಟ್ಟೆ ಇಟ್ಟ ನಂತರ ತನ್ನ ಎದೆ ಭಾಗದ ಗರಿಗಳಿಂದ ಮೊಟ್ಟೆ ಮುಚ್ಚುತ್ತದೆ. ಇದು 28-35 ದಿನ ಕಾವು ಕೊಡುತ್ತದೆ. ಮರಿಯಾದ ಒಂದರಿಂದ ಎರಡು ದಿನ ಮಾತ್ರ ಗೂಡಲ್ಲಿ ಕಳೆಯುವುದು. ಮೊಟ್ಟೆಯ ಬಣ್ಣ, ಬಿಳಿ, ಕ್ರೀಮ್ ವೈಟ್, ಐವರೀ ತಿಳಿ ಹಳದಿ ಛಾಯೆಯಿಂದ ಕೂಡಿರುತ್ತದೆ.