Advertisement

ಮಾರುಕಟ್ಟೆಯಲ್ಲಿಗ ದೀಪಾವಳಿ ಕಳೆ..

11:00 AM Nov 01, 2021 | Team Udayavani |

ಬೆಂಗಳೂರು: ದೀಪಾವಳಿಯ ಹಬ್ಬಕ್ಕೆ ಮುನ್ನವೇ ಸಂಭ್ರಮ ಕಳೆಗಟ್ಟಲು ಆರಂಭವಾಗಿದೆ. ಮಾರುಕಟ್ಟೆ ಯಲ್ಲಿ ಭಿನ್ನಶೈಲಿಯ ಅಲಂಕಾರಿಕ ವಸ್ತುಗಳು ಕಾಣ ತೊಡಗಿವೆ. ಇದರ ಜತೆಗೆ ದೀಪದ ಹಬ್ಬಕೆ ಕಳೆತುಂ ಬುವ ಪಟಾಕಿಗಳ ಮಾರಾಟ ಕೂಡ ಆರಂಭವಾಗಿದ್ದು ಸಡಗರ ಮತ್ತಷ್ಟು ಹೆಚ್ಚಾಗಿದೆ.

Advertisement

ತಮಿಳನಾಡಿನ ಹೊಸೂರು, ಅನೇಕಲ್‌, ಚಂದಾ ಪುರ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಟಾಕಿಗಳ ಮಾರಾಟ ಪ್ರಕ್ರಿಯೆಯ ಕಳೆ ಕಾಣತೊಡಗಿದೆ. ನಗರದ ಹಲವು ಕಡೆಗಳಲ್ಲಿ ಈಗಾಗಲೇ ಪಟಾಕಿ ಮಾರಾಟದ ಅಂಗಡಿಗಳು ತಲೆಎತ್ತಿದ್ದು ದೀಪದ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಇಂಬು ತಂದಿದೆ.

ಕಳೆದ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರ ಪಟಾಕಿಗಳ ಮಾರಾಟದ ಮೇಲೆ ನಿರ್ಬಂಧಗಳ ಹೇರಿತ್ತು.ಹಸಿರು ಪಟಾಕಿಗಳ ಮಾರಾಟಕ್ಕೆ ಗ್ರೀನ್‌ ಸಿಗ್ನಲ್‌ ನೀಡಿತ್ತು. ಈ ವರ್ಷ ಕೂಡ ಸರ್ಕಾರ ಪಟಾಕಿ ಮಾರಾಟಕ್ಕೆ ಅವಕಾಶ ನೀಡುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿದ್ದೆವು.ಆದರೆ ಈಗ ಸರ್ಕಾರ ಹಸಿರು ಪಟಾಕಿಗಳ ಮಾರಾಟಕ್ಕೆ ಅವಕಾಶ ನೀಡಿರುವುದು ಖುಷಿ ತಂದಿದೆ ಎಂದು ಪಟಾಕಿ ಮಾರಾಟಗಾರರು ಹೇಳುತ್ತಾರೆ.

ಹೊಸ ಪಾಕಿಗಳು ಇನ್ನೂ ಬಂದಿಲ್ಲ

ಕೋವಿಡ್‌ ಆರ್ಥಿಕ ಹೊಡೆತದ ಹಿನ್ನೆಲೆಯಲ್ಲಿ ಕಳೆದ ಬಾರಿ ಪಟಾಕಿಗಳ ಮಾರಾಟ ಕುಸಿದಿತ್ತು. ಈ ಬಾರಿ ಕೋವಿಡ್‌ ಹತೋಟಿಯಲ್ಲಿ ಇರುವುದರಿಂದ ಒಂದಿಷ್ಟು ವ್ಯಾಪಾರವಾಗಬಹುದು ಕಳೆದ ವರ್ಷದ ನಷ್ಟವನ್ನು ಸರಿದೂಗಿಸಬಹುದು ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಜಯನಗರದ ಧಮಾಕ ಸ್ಟೋರ್‌ ನ ವ್ಯಾಪಾರಿ ಚಂದನ್‌ ಹೇಳುತ್ತಾರೆ.

Advertisement

ಮಾರುಕಟ್ಟೆಯಲ್ಲಿ ಈ ವರ್ಷ ಹೊಸ ರೀತಿಯ ಪಟಾಕಿಗಳು ಬಂದಿಲ್ಲ 50ರೂ. ದಿಂದ 5000ರೂ. ವರೆಗಿನ ಪಟಾಕಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಸುರ್‌ಸುರಬತ್ತಿ, ಹೂಕುಂಡ, ವಿಷ್ಣು ಚಕ್ರ, ಸ್ಕೈ ಶಾಟ್‌, ಮಕ್ಕಳ ಪಟಾಕಿಗಳು ಸೇರಿದಂತೆ 200ಕ್ಕೂ ಅಧಿಕ ಶೈಲಿಯ ಸಾಂಪ್ರದಾಯಿಕ ಪಟಾಕಿಗಳು ದೊರೆಯಲಿವೆ ಎಂದು ಮಾಹಿತಿ ನೀಡುತ್ತಾರೆ.

ಇದನ್ನೂ ಓದಿ:ಆರೋಗ್ಯ ವಿಚಾರಿಸಿದ ಗೃಹ ಸಚಿವರು

ಈ ಹಿಂದಿನಂತೆ ಆರ್ಡರ್‌ ಬರುತ್ತಿಲ್ಲ

ಈ ಹಿಂದೆ ದೀಪಾವಳಿ ಆರಂಭದ ಒಂದೇರಡು ವಾರದ ಹಿಂದೆಯೇ ಪಟಾಕಿಗಳಿಗೆ ಆರ್ಡರ್‌ ಬರುತ್ತಿತ್ತು. ಆದರೆ ಈ ಬಾರಿ ಆ ರೀತಿಯ ವಾತಾವಾರಣವಿಲ್ಲ. ಹಸಿರು ಪಟಾಕಿ ಅಂತಾನೋ ಗೊತ್ತಿಲ್ಲ ಜನರು ಆರ್ಡರ್‌ ಮಾಡುತ್ತಿಲ್ಲ. ಈ ಹಿಂದೆ ಗ್ರಾಹಕರು 5 ನೂರ ರಿಂದ 5 ಸಾವಿರ ರೂ. ಮುಖ ಬೆಲೆಯ ಪಟಾಕಿಗಳನ್ನು ಖರೀದಿ ಮಾಡುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಯಿಲ್ಲ ಎಂದು ಸ್ವಾತಿ ಡೀಲರ್ಸ್‌ನ ಮಾಲೀಕ ನಿತೀಶ್‌ ಹೇಳುತ್ತಾರೆ.

ಹಬ್ಬದ ಕಳೆ ಈಗ ಆರಂಭವಾಗುತ್ತಿದೆ.ಇನ್ನೂ ಒಂದೆರಡು ದಿನ ಏನೂ ಹೇಳಲಾಗದು.ಕೆಲವರು ಶಿವಕಾಶಿಗೆ ಹೋಗಿ ಪಟಾಕಿಗಳನ್ನು ಖರೀದಿ ಮಾಡುತ್ತಾರೆ. ಇನ್ನೂ ಕೆಲವರು ಹೊಸೂರಿಗೆ ಹೋಗಿ ರಾಶಿಗಟ್ಟಲೆ ಪಟಾಕಿ ಖರೀದಿಸುತ್ತಾರೆ. ಹಸಿರು ಪಟಾಕಿ ಯನ್ನು ಗ್ರಾಹಕರು ಖರೀದಿಸುತ್ತಾರೆ ಎಂಬ ನಿರೀಕ್ಷೆಯಿದೆ ಎಂದು ತಿಳಿಸುತ್ತಾರೆ.

ಹಸಿರು ಪಟಾಕಿ ಯಾವುದು?

ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದ ಹೊಗೆ ಉಗುಳುವ, ಕಡಿಮೆ ಪ್ರಮಾ ಣದ ಮಾಲಿನ್ಯಕಾರಕ ಕಣಗಳನ್ನು ಹೊರಹಾಕುವ ಪಟಾಕಿಗಳನ್ನು ಹಸಿರು ಪಟಾಕಿಗಳು ಎಂದು ಹೇಳಲಾಗುತ್ತದೆ. ಮಾಲಿನ್ಯ ಮತ್ತು ಹೊಗೆಯು ಎಷ್ಟು ಪ್ರಮಾಣದಲ್ಲಿ ಕಡಿಮೆ ಇರಬೇಕು ಎಂಬುದನ್ನು ಈಗಾಗಲೇ ರಾಷ್ಟ್ರೀಯ ಪರಿಸರ ಎಂಜನಿಯರಿಂಗ್‌ ಸಂಶೋಧನಾ ಸಂಸ್ಥೆ ಸ್ಪಷ್ಟಪಡಿಸಿದೆ.

ಕಡಿಮೆ ಬೆಳಕು ಮತ್ತು ಶಬ್ಧ ಹೊರಸೂಸುವ ಸಿಡಿತದ ಬಳಿಕ ಕಡಿಮೆ ಪ್ರಮಾಣದ ನೈಟ್ರೋ ಜನ್‌ ಆಕ್ಸೆ„ಡ್‌, ಸೆಲ್ಸರ್‌ ಡೈ ಆಕ್ಸೈಡ್‌ ಹೊರಚೆಲ್ಲುವ ಪಟಾಕಿಗಳನ್ನು ಹಸಿರು ಪಟಾಕಿ ಎಂದು ಕರೆಯಲಾಗುತ್ತದೆ.

ಕೌನ್ಸಿಲ್‌ ಫಾರ್‌ ಸೈಂಟಿಫಿಕ್‌ ಆ್ಯಂಡ್‌ ಇಂಡಸ್ಟ್ರೀಸ್‌ ರಿಸರ್ಚ್‌ (ಸಿಎಸ್‌ಐಆರ್‌) ಅಭಿವೃದ್ದಿ ಪಡಿಸಿದ ಹಸಿರು ಪಟಾಕಿಗಳು ಮಾಲಿನ್ಯಕಾರಕಗಳನ್ನು ತಮ್ಮ ಸಂಪ್ರ ದಾಯಿಕ ಪ್ರತಿರೂಪಗಳಿಗಿಂತ ಶೇ.30ರಷ್ಟು ಕಡಿಮೆ ಪ್ರಮಾಣದಲ್ಲಿ ಹೊರ ಸೂಸುತ್ತವೆ. ಹಾಗೆಯೇ ಕಡಿಮೆ ಅಪಾಯಕಾರಿ ಮತ್ತು ಹೆಚ್ಚು ಹಾನಿಕಾರಕವಲ್ಲದ ರಾಸಾಯಿನಿಗಳಿಂದ ತಯಾರು ಮಾಡಲಾಗಿರುತ್ತದೆ. ಈ ಹಸಿರು ಪಟಾಕಿಗಳ ಪತ್ತೆಗಾಗಿಯೇ ಹಸಿರು ಲೋಗೊ ಮತ್ತು ಕ್ಯೂ ಆರ್‌ ಕೋಡಿಂಗ್‌ ಹಾಕಲಾಗಿರುತ್ತದೆ. ಸಾಮಾನ್ಯ ಪಾಟಾಕಿಗಳಲ್ಲಿ ನೈಟ್ರೇಟ್‌ ಮತ್ತು ಬೇರಿ ಯಂಗಳು ಕಂಡುಬರುತ್ತವೆ. ಈ ರಾಸಾಯಿನಿಕಗಳು ಹಸಿರು ಪಟಾಕಿಗಳಲ್ಲಿ ಇರುವುದಿಲ್ಲ. ಹಾಗೆಯೇ ಹಸಿರು ಪಟಾಕಿಗಳು ಸಿಡಿದಾಗಲೂ ಆವಿ ಮತ್ತು ಹೊಗೆ ಹೊರಹಾಕುವುದರನ್ನು ದುರ್ಬಲ ಮಾಡುತ್ತದೆ.

ಇದರಲ್ಲಿ ಸುರಕ್ಷಿತ ಅಲ್ಯೂ ಮಿನಿಯಂ ಮತ್ತು ಥರ್ಮೈಟ್‌ ಇರುತ್ತದೆ. ಜತೆಗೆ ಸಾಮಾನ್ಯ ಪಟಾಕಿಗಳು ಸುಮಾರು 160 ಡೆಸಿಬಲ್‌ ಧ್ವನಿಯನ್ನು ಹೊರಸೂಸುತ್ತವೆ. ಆದರೆ ಹಸಿರು ಪಟಾಕಿಗಳು ಹೊರಸೂಸುವಿಕೆ ಧ್ವನಿ 110ರಿಂದ 120 ಡೆಸಿಬಲ್‌ ಗಳಿಗೆ ಸೀಮಿತವಾಗಿರುತ್ತದೆ. ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ರಾಷ್ಟ್ರೀಯ ಪರಿಸರ ಎಂಜನಿಯರಿಂಗ್‌ ಸಂಶೋಧನಾ ಸಂಸ್ಥೆ (ನೀರಿ) ಹಸಿರು ಪಟಾಕಿ ಏನು ಎಂಬುವುದನ್ನು ಕೂಡ ವಿವರಿಸಿದೆ.

ಪಟಾಕಿ ಸಿಡಿಸುವುದರಿಂದ ಆಗುವ ಮಾಲಿನ್ಯ ಶೇ.30ರಷ್ಟು ಕಡಿಮೆ ಆಗಬೇಕು ಎಂಬುವುದು ನೀರಿ ಮಾನದಂಡದಲ್ಲಿರುವ ಮುಖ್ಯಾಂಶವಾಗಿದೆ ಎಂದು ಹೇಳಿದ್ದಾರೆ. “ನೀರಿ’ ಪ್ರಮಾಣೀಕರಿಸಿದ ಪಟಾಕಿಗಳು ಮಾತ್ರ ಹಸಿರು ಪಟಾಕಿಗಳಾಗಿರುತ್ತವೆ ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.

ಬಣ್ಣ ಬಣ್ಣಗಳಿಂದ ತಯಾರಾಗುವ ಪಟಾಕಿಗಳು ಅಪಾಯಕಾರಿಗಳಾಗಿವೆ. ಹೆಚ್ಚಿನ ಪ್ರಮಾಣದ ರಾಸಾಯಿನಿಕಗಳನ್ನು ಬಳಕೆ ಮಾಡಿ ಅವುಗಳನ್ನು ತಯಾರು ಮಾಡಲಾಗುತ್ತದೆ. ಅದು ಗಾಳಿ ಮೂಲಕ ಹಾರಿಬಂದು ನೀರಿನಲ್ಲಿ ಸೇರಿರುತ್ತದೆ. ಆ ನೀರನ್ನು ಬಳಕೆ ಮಾಡುವುದರಿಂದ ಆರೋಗ್ಯದ ಮೇಲೂ ಅದು ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. -ಶ್ರೀನಿವಾಸುಲು, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next