Advertisement

ನಗರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಸರ್ವೋತ್ತಮ ಹೆಗ್ಡೆ

09:59 PM Jul 15, 2019 | Team Udayavani |

ಸಿದ್ದಾಪುರ: ಹಾಲಾಡಿ ಪೇಟೆಯಲ್ಲಿ ಸರ್ಕಲ್‌ ನಿರ್ಮಾಣ ಮಾಡುವ ಬಗ್ಗೆ ಗ್ರಾಮ ಪಂಚಾಯತ್‌ ಸಂಪೂರ್ಣ ಬದ್ಧವಾಗಿದೆ ಎಂದು ಹಾಲಾಡಿ ಗ್ರಾ. ಪಂ. ಅಧ್ಯಕ್ಷ ಹಾಲಾಡಿ ಸರ್ವೋತ್ತಮ ಹೆಗ್ಡೆ ಹೇಳಿದರು.

Advertisement

ಪಡು ಹಾಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾ ಭವನದಲ್ಲಿ ನಡೆದ ಹಾಲಾಡಿ ಗ್ರಾಮ ಪಂಚಾಯತ್‌ನ 2019-20ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೋಕೋಪಯೋಗಿ ಇಲಾಖೆಯಿಂದ ಸರ್ಕಲ್‌ ನಿರ್ಮಾಣಕ್ಕೆ ಅನುದಾನ ಬಂದಿದೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸಹಕಾರ ನೀಡಿದ್ದಾರೆ. ಹಾಲಾಡಿ ಪೇಟೆಯಲ್ಲಿ ಜಾಗದ ಸಮಸ್ಯೆ ಇದ್ದು, ಕಾನೂನಿನ ತೊಡಕನ್ನು ನಿವಾರಸಿಕೊಳ್ಳುವ ಕೆಲಸವಾಗಬೇಕಾಗಿದೆ ಎಂದು ಅವರು ಹೇಳಿದರು.

ಸಂಬಂಧಪಟ್ಟ ಇಲಾಖೆಯಿಂದ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಪೇಟೆಯ ವ್ಯವಹಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಮೇಲೆ ಸುಸಜ್ಜಿತವಾದ ಸರ್ಕಲ್‌ ನಿರ್ಮಾಣದ ಜತೆಯಲ್ಲಿ ಹಾಲಾಡಿ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇವೆ. ಈ ನಿಲುವಿಗೆ ಗ್ರಾ.ಪಂ. ಎಂದಿಗೂ ಬದ್ಧವಾಗಿದೆ ಎಂದು ತಿಳಿಸಿದದರು.

ಪೇಟೆಯಲ್ಲಿ ಜಂಕ್ಷನ್‌ ನಿರ್ಮಾಣಕ್ಕೆ ಆಗ್ರಹ
ಹಾಲಾಡಿ ನಾಗರಿಕ ಹಿತರಕ್ಷಣೆ ವೇದಿಕೆಯ ಅಧ್ಯಕ್ಷ ನಾಗರಾಜ ಗೋಳಿ ಮಾತನಾಡಿ, ಹಾಲಾಡಿ ಪೇಟೆಯು ಪ್ರಮುಖ ಎರಡು ಹೆದ್ದಾರಿಗಳು ಸಂದಿಸುವ ಜಂಕ್ಷನ್‌ ಆಗಿದ್ದು, ಇಲ್ಲಿ ಸುಸಜ್ಜಿತವಾದ ಸರ್ಕಲ್‌ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು.

Advertisement

ಹಾಲಾಡಿ ಪೇಟೆ ಅಗಲಿಕರಣವಾಗುವಾಗ ಮಲತಾಯಿ ದೋರಣೆ ತಾಳಿದ್ದೀರಿ. ಕೆಲವೊಂದು ವ್ಯಕ್ತಿಗಳ ಅಂಗಡಿ ಕೋಣೆಗಳನ್ನು ತೆರವು ಮಾಡಿದ್ದಿರಿ. ಉಳಿದವರನ್ನು ಹಾಗೇಯೇ ಬಿಟ್ಟಿದ್ದೀರಿ. ಸರ್ಕಲ್‌ ವಿಚಾರ ಬಂದಾಗ ಅಂಗಡಿ ಕೋಣೆ ತೆರವುಗೊಳಿಸಿದವರ ಮೇಲೆ ಇಲ್ಲದ ಕನಿಕರ ಈಗ ಅಂಗಡಿ ಕೋಣೆ ಇರುವವರ ಮೇಲೆ ಯಾಕೆ ಬಂತು ಎಂದು ಪ್ರಶ್ನಿಸಿದರು. ಈ ವಿಚಾರ ಪರ ಹಾಗೂ ವಿರೂಧ ಬಗ್ಗೆ ಚರ್ಚೆ ನಡೆದು ವಾಗ್ವಾದಕ್ಕೂ ಕಾರಣವಾಯಿತು.

ಪಂ. ಅಧ್ಯಕ್ಷ ಸರ್ವೋತ್ತಮ ಹೆಗ್ಡೆ ಮಧ್ಯೆ ಪ್ರವೇಶಿಸಿ, ಸರ್ಕಲ್‌ ನಿರ್ಮಾಣದ ಬಗ್ಗೆ ಅನುದಾನ ಹಾಗೂ ಪ್ಲಾನ್‌ ಕೂಡ ಸಿದ್ದವಾಗಿದೆ. ಕಾನೂನು ತೊಡಕು ಹಾಗೂ ಸ್ಥಳದಲ್ಲಿರುವವರಿಗೆ ಪುನರ್‌ವಸತಿ ಮಾಡಿದ ಮೇಲೆ ಸುಸಜ್ಜಿತವಾದ ಸರ್ಕಲ್‌ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿ, ಗ್ರಾಮ ಸಭೆ ಮುಂದುವರಿಸಿದರು.

ಗ್ರಾ. ಪಂ. ಸದಸ್ಯ ಚೋರಾಡಿ ಅಶೋಕ್‌ ಕುಮಾರ ಶೆಟ್ಟಿ ಮಾತನಾಡಿ, ಹಾಲಾಡಿಯಿಂದ ಉಡುಪಿಯ ಎಲ್ಲಾ ಗ್ರಾ. ಪಂ. ಗಳಿಗೆ ಶುದ್ಧೀಕರಿಸಿದ ನಿರು ನೀಡಬೇಕು. ಚೋರಾಡಿ ರಸ್ತೆಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು 3ಕೋಟಿ ರೂ. ಅನುದಾನ ಒದಗಿಸಿಕೊಟ್ಟಿದ್ದಾರೆ ಎಂದರು.

ಬಸ್‌ ಸಮಯ ಬದಲಾಯಿಸಲು ಆಗ್ರಹ
ಶಾಲೆ ಮಕ್ಕಳ ಸಮಯಕ್ಕನುಗುಣವಾಗಿ ಚೋರಾಡಿಗೆ ಹೋಗುವ ಸರಕಾರಿ ಬಸ್ಸಿನ ವೇಳಾಪಟ್ಟಿ ಬದಲಾಗಬೇಕು ಎನ್ನುವ ಆಗ್ರಹ ಇದೆ. ಈ ಬಗ್ಗೆ ನಿರ್ಣಯ ಮಾಡಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಕೊಡಲಾಗುತ್ತದೆ ಎಂದು ಹೇಳಿದದರು.

ಕುಂದಾಪುರ ರೇಷ್ಮೆ ಇಲಾಖೆಯ ರೇಷ್ಮೆ ನಿರೀಕ್ಷಕ ರಾಜೇಂದ್ರ ಅವರು ಗ್ರಾಮ ಸಭೆಯ ನೋಡೆಲ್‌ ಅಧಿಕಾರಿಯಾಗಿ ಭಾಗವಹಿಸಿ, ಮಾಹಿತಿ ನೀಡಿದರು.
ಜಿ. ಪಂ. ಸದಸ್ಯೆ ಸುಪ್ರಿತಾ ಉದಯ ಕುಲಾಲ್‌, ತಾ. ಪಂ. ಸದಸ್ಯೆ ಸವಿತಾ ಎಸ್‌. ಮೊಗವೀರ, ಗ್ರಾ. ಪಂ. ಉಪಾಧ್ಯಕ್ಷೆ ಮಂಜಿ, ಸದಸ್ಯರಾದ ಅಶೋಕ ಕುಮಾರ್‌ ಶೆಟ್ಟಿ, ಗುರುಪ್ರಸಾದ್‌ ಶೆಟ್ಟಿ , ಜನಾರ್ದನ, ಭೋಜರಾಜ ಕುಲಾಲ, ಜಾನಕಿ, ಶಾರದ ಅರ್ಜುನ್‌, ರತ್ನಾ, ಶಂಕರನಾರಾಯಣ ಅರಕ್ಷಕ ಠಾಣೆಯ ಸಹಾಯಕ ಉಪ ನಿರೀಕ್ಷಕ ಚಂದ್ರಶೇಖರ್‌, ಅಂಗನವಾಡಿ ಮೇಲ್ವಿಚಾರಕಿ ಸವಿತಾ, ಗ್ರಾಮಕರಿಣಿಕ ಅಪ್ರೋಜ್‌, ಗ್ರಾಮ ಕರಣಿಕರು, ಶಂಕರನಾರಾಯಣ ಪಶು ವೈದ್ಯಾಧಿಕಾರಿ ಸಂಪನ್ನ ಶೆಟ್ಟಿ, ಕೃಷಿ ಅಧಿಕಾರಿ ಸುನಿಲ್‌ ನಾಯ್ಕ, ಜ್ಞಾನ ಜ್ಯೋತಿ ಟ್ರಸ್ಟ್‌ನ ವಿಟuಲ, ಹಾಲಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೊಗ್ಯ ಸಹಾಯಕ ನಾರಾಯಣ ಮೊಗವೀರ, ಅಂಗನವಾಡಿ ಕಾರ್ಯಕರ್ತೆಯರು, 28 ಮತ್ತು 76ನೇ ಹಾಲಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ವಸಂತ ಕುಮಾರ್‌ ನಿರೂಪಿಸಿದರು.

ಶುದ್ಧ ನೀರಿನ ವ್ಯವಸ್ಥೆ
ಜನರಿಗೆ ಆರೋಗ್ಯ ಪೂರ್ಣವಾದ ನೀರನ್ನು ನೀಡುವುದಕ್ಕೆ ಹೈಕೋರ್ಟು ಹಾಗೂ ವಿಧಾನ ಪರಿಷತ್‌ ಅರ್ಜಿ ಸಮಿತಿ ಸೂಚಿಸಿದೆ. ಉಡುಪಿ ಜಿಲ್ಲಾ ರೈತ ಸಂಘದ ನಿರಂತರ ಹೋರಾಟದ ಫಲವಾಗಿ ಗ್ರಾ. ಪಂ.ಗಳಿಗೆ ಶುದ್ಧವಾದ ಕುಡಿಯುವ ನೀರು ಸಿಗಲಿದೆ ಎಂದು ಚೋರಾಡಿ ಅಶೋಕ್‌ ಕುಮಾರ್‌ ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next