ಬ್ರಹ್ಮಾವರ: ಚೇರ್ಕಾಡಿ ಗ್ರಾ.ಪಂ.ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಗ್ರಾಮೀಣ ಪ್ರದೇಶ, ಪ. ಪಂಗಡದವರು ಹೆಚ್ಚಾಗಿ ವಾಸಿಸುತ್ತಿರುವ ಈ ಗ್ರಾಮಕ್ಕೆ ಈಗಾಗಲೇ ಸುಮಾರು 2 ಕೋ.ರೂ.ಗೂ ಮಿಕ್ಕಿ ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ಅಲ್ಲದೆ ವಸತಿ ಯೋಜನೆ ಸಮಸ್ಯೆ, ಪೇತ್ರಿ ಪಶು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕುರಿತು ಸರಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ಜಿಲ್ಲೆಯ ಮರಳು ಸಮಸ್ಯೆಗೆ ಎಡೆಬಿಡದೆ ಪ್ರಯತ್ನಿಸಿ ಬಗೆಹರಿಸಿ ಸಾಮಾನ್ಯ ಜನರ ಸಮಸ್ಯೆಗೆ ಸ್ಪಂದಿಸಿದ ಶಾಸಕರನ್ನು ಸಮ್ಮಾನಿಸಲಾಯಿತು.
ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ್ ಶೆಟ್ಟಿ, ತಾ.ಪಂ. ಸದಸ್ಯೆ ಗೋಪಿ ಕೆ. ನಾಯ್ಕ, ಪಂಚಾಯತ್ ಉಪಾಧ್ಯಕ್ಷೆ ಸುಗುಣಾ ಎಸ್. ಪೂಜಾರಿ, ಮಾರ್ಗದರ್ಶಿ ಅ ಧಿಕಾರಿ ಗಿರಿಧರ್ ಗಾಣಿಗ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅ ಧಿಕಾರಿಗಳಾದ ಡಾ| ಸುಷ್ಮಾ ಪ್ರವೀಣ್ ಹೆಗ್ಡೆ, ಸುರೇಶ್ ಬಂಗೇರ, ಶ್ರೀರಾಮ ಹೆಗಡೆ, ಉದಯ ಗಾಣಿಗ, ಅಶ್ವಿನಿ, ಚಂದು, ಶಿವರಾಜ್, ಮಂಜುನಾಥ ಗಾಣಿಗ, ಪ್ರಭಾತ್, ಹರೀಶ್ ಮಾಹಿತಿ ನೀಡಿದರು.
ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರಾದ ಪ್ರಕಾಶ್ ಬಿ.ಬಿ., ಪದ್ಮನಾಭ ಸೇರಿಗಾರ್, ರತ್ನಾವತಿ, ಮುಕ್ತಾ, ನಾಗರತ್ನಾ ಉಪಸ್ಥಿತರಿದ್ದರು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸಹಕರಿಸಿದರು. ಪಿಡಿಒ ಸುಭಾಷ್ ಖಾರ್ವಿ ಸ್ವಾಗತಿಸಿ, ಬಿಲ್ ಕಲೆಕ್ಟರ್ ಶೇಖರ್ ನಾಯ್ಕ ವರದಿ ಮಂಡಿಸಿದರು. ಪಂಚಾಯತ್ ಸದಸ್ಯ ಕಮಲಾಕ್ಷ ಹೆಬ್ಟಾರ್ ನಿರೂಪಿಸಿ, ವಂದಿಸಿದರು.
ಸಮ್ಮಾನ
ಚೇರ್ಕಾಡಿ ಗ್ರಾಮದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮಂಜುನಾಥ ನಾಯ್ಕ, ಸಾಧು ಸೇರಿಗಾರ್, ಆನಂದ ಶೆಟ್ಟಿ ಕುಧ್ಕುಂಜೆ ಅವರನ್ನು ಸಮ್ಮಾನಿಸಲಾಯಿತು.