Advertisement
ಈ ಬಗ್ಗೆ ಸುದ್ದಿಗಾರರ ಜತೆಗೆ ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್, ರೈತರಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರಕಾರದಲ್ಲಿ ಹಣವಿಲ್ಲ. ಆದರೆ ಪಕ್ಷದ ಚೇಲಾಗಳಿಗೆ ಬಿರಿಯಾನಿ ಊಟ ಕೊಡಿಸಲು, ಮಜಾ ಮಾಡಲು ದುಡ್ಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ಯಾರಂಟಿ ಜಾರಿ ಸಮಿತಿಯ 3 ಸಾವಿರ ಕಾಂಗ್ರೆಸ್ ಕಾರ್ಯಕರ್ತರಿಗೆ ವಾರ್ಷಿಕ 25 ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಕಾಂಗ್ರೆಸ್ ಚೇಲಾಗಳಿಗೆ ಕ್ಯಾಬಿನೆಟ್ ದರ್ಜೆ ನೀಡಲಾಗುತ್ತದೆ. ಸರಕಾರ ರೈತರಿಗೆ ಯಾವಾಗ ಪರಿಹಾರ ನೀಡಲಿದೆ ಎಂದು ಪ್ರಶ್ನಿಸಿದರು. ಜನರ ಗಮನ ತಪ್ಪಿಸಲು ಸಿಎಂ ತಂತ್ರ
ಜನಸಾಮಾನ್ಯರಿಗೆ ಮೋಸ ಮಾಡುವ ಮತ್ತೂಂದು ಯೋಚನೆ ಇದು. ಕಾರ್ಯಕರ್ತ ರನ್ನು ಸಾಕುವ ಹೊಸ ಕಾರ್ಯಕ್ರಮ. ಸಿದ್ದರಾಮಯ್ಯ ನವರ ಪಂಚೆಗೆ ಜನರು ಕೈ ಹಾಕುತ್ತಿದ್ದಾರೆ. ಅವರ ಗಮನ ಬೇರೆಡೆ ಸೆಳೆಯಲು ಈ ತಂತ್ರ ಹೂಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಟೀಕಿಸಿದ್ದಾರೆ.
Related Articles
ಮಾಜಿ ಸಚಿವ ಸಿ.ಟಿ.ರವಿ ಅವರು, ಯಾರಪ್ಪನ ಮನೆ ಹಣ ಎಂದು ಜನರ ತೆರಿಗೆಯನ್ನು ನಿಮ್ಮ ಕಾರ್ಯಕರ್ತರಿಗೆ ನೀಡುತ್ತೀರಿ? ರಾಜ್ಯದ ಬೊಕ್ಕಸವನ್ನು ನೀವು ದೋಚಿದ್ದು ಸಾಕಾಗಿಲ್ಲ ಎಂದು ನಿಮ್ಮ ಕೆಳಗಿನವರಿಗೂ ಅವಕಾಶ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
Advertisement
ಜನರ ತೆರಿಗೆ ಹಣ ಇರುವುದು ನಿಮ್ಮ ಕಾರ್ಯಕರ್ತರಿಗೆ ಕೊಡುವುದಕ್ಕೆ ಅಲ್ಲ. ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನಕ್ಕೆ, ಶಾಸಕರ ಕ್ಷೇತ್ರಕ್ಕೆ ಅನುದಾನ ನೀಡುವುದಕ್ಕೆ ಕಾರಣ ನೀಡುವ ಸರಕಾರ ಈಗ ದುಂದುವೆಚ್ಚಕ್ಕೆ ಮುಂದಾಗಿದೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡುತ್ತೇವೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಸಿದ್ದರಾಮಯ್ಯನವರೇ ಇದು ಕಾನೂನಾತ್ಮಕವಾಗಿ ಸರಿಯಲ್ಲ. ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಬೊಕ್ಕಸದ ಹಣ ದುಂದು ವೆಚ್ಚ ಮಾಡಬೇಡಿ. ಬೆಂಬಲಿಗರನ್ನು ತೃಪ್ತಿಪಡಿಸಲು ಈ ಸಮಿತಿ ಮಾಡಿದ್ದಾರೆ.
-ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ.