Advertisement
ಸಿಪಿಐ, ಸಿಪಿಎಂ ನಾಯಕರು ಸಭೆಯಲ್ಲಿ ಭಾಗ ವಹಿಸಿ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಭೆಗೆ ಕಾಂಗ್ರೆಸ್ ನಾಯಕರು ಗೈರು ಹಾಜರಾಗಿದ್ದರು. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಟಿಆರ್‌ಎಸ್ ನಾಯಕ ಚಂದ್ರಶೇಖರ ರಾವ್, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಕೂಡ ಗೈರು ಹಾಜರಾಗಿದ್ದರು. ಆದರೆ ಅವರು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಟ್ಟಿದ್ದರು. ಎಸ್‌ಪಿ, ಬಿಎಸ್‌ಪಿ ಸಂಪೂರ್ಣ ದೂರ ಉಳಿದಿದ್ದವು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿವರಣೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಪಕ್ಷಗಳೂ ಸರಕಾರದ ಪ್ರಸ್ತಾವಕ್ಕೆ ಬೆಂಬಲ ಸೂಚಿಸಿವೆ ಎಂದರು. ಆದರೆ ಪ್ರಸ್ತಾವಿತ ಸಮಿತಿ ಯಾವ ರೀತಿಯಲ್ಲಿ ಇರಲಿದೆ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. 40 ರಾಜಕೀಯ ಪಕ್ಷಗಳ ನಾಯಕರನ್ನು ಆಹ್ವಾ ನಿಸಲಾಗಿತ್ತು. ಈ ಪೈಕಿ 21 ಪಕ್ಷಗಳ ಅಧ್ಯಕ್ಷರು ಭಾಗವಹಿಸಿದ್ದರು. ಮೂರು ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ಲಿಖೀತವಾಗಿ ಸಲ್ಲಿಸಿದ್ದವು ಎಂದು ರಾಜನಾಥ್ ಸಿಂಗ್ ಹೇಳಿದರು.
Related Articles
Advertisement
ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್, ಒಡಿಶಾ ಮುಖ್ಯಮಂತ್ರಿ ಮತ್ತು ಬಿಜು ಜನತಾ ದಳದ ಅಧ್ಯಕ್ಷ ನವೀನ್ ಪಟ್ನಾಯಕ್, ಪಿಡಿಪಿಯ ಮೆಹಬೂಬಾ ಮುಫ್ತಿ, ನ್ಯಾಶನಲ್ ಕಾನ್ಫರೆನ್ಸ್‌ನ ಡಾ| ಫಾರೂಕ್ ಅಬ್ದುಲ್ಲಾ, ವೈ.ಎಸ್.ಆರ್.ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ ರೆಡ್ಡಿ, ಶಿರೋಮಣಿ ಅಕಾಲಿ ದಳದ ಸುಖ್‌ಬೀರ್ ಸಿಂಗ್ ಬಾದಲ್ ಭಾಗವಹಿಸಿದ್ದರು.
ಕಠಿನ ನಿಯಮಕ್ಕೆ ಆಯೋಗ ಸಲಹೆಏಕಕಾಲದಲ್ಲಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕಾನೂನು ಆಯೋಗ ಕಠಿನ ಕ್ರಮಗಳು ಇರುವ ಸಲಹೆಗಳನ್ನು ಈಗಾಗಲೇ ಸೂಚಿಸಿದೆ. ಜನತಾ ಪ್ರಾತಿನಿಧ್ಯ ಕಾಯ್ದೆ, ಸಂವಿಧಾನಕ್ಕೆ ತಿದ್ದುಪಡಿ ತರುವ ಬಗ್ಗೆ 2018ರ ಆಗಸ್ಟ್‌ನಲ್ಲಿ ಸಲಹೆ ಮಾಡಿತ್ತು. ಹೆಚ್ಚಿನ ರಾಜ್ಯಗಳು ಈ ಪ್ರಯತ್ನಕ್ಕೆ ಸಮ್ಮತಿ ಸೂಚಿಸಿದಲ್ಲಿ ಮತ್ತು ಸಂವಿಧಾನದ 2 ಅಂಶಗಳಿಗೆ ತಿದ್ದುಪಡಿಯಾದಲ್ಲಿ ಈ ಕ್ರಮ ಜಾರಿಗೆ ತರಬಹುದು ಎಂದು ಸೂಚಿಸಿತ್ತು. ಹಿಂದೆಯೂ ನಡೆದಿತ್ತು
ಲೋಕಸಭೆ, ವಿಧಾನಸಭೆಗಳಿಗೆ ಏಕ ಕಾಲ ದಲ್ಲಿ ಚುನಾವಣೆ ನಡೆಸುವ ಬಗ್ಗೆ ಹಿಂದಿನ ಸಂದರ್ಭಗಳಲ್ಲಿಯೂ ಪ್ರಯತ್ನ ಗಳು ನಡೆದಿದ್ದವು. 1952, 1957, 1962, 1967ರಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾ ವಣೆಗಳು ನಡೆದಿದ್ದವು. ಆದರೆ 1967ರಲ್ಲಿ ಲೋಕಸಭೆಯನ್ನು ಅವಧಿಗೆ ಮುನ್ನವೇ ವಿಸರ್ಜಿಸಲಾಗಿತ್ತು. ಜತೆಗೆ 1968, 1969ರಲ್ಲಿ ಕೆಲವು ವಿಧಾನಸಭೆಗಳನ್ನು ಅವಧಿಗೆ ಮುನ್ನವೇ ವಿಸರ್ಜಿಸಲಾಗಿತ್ತು. 1983ರಲ್ಲಿ ಮತ್ತೆ ಶಿಫಾರಸು
1967ರ ಬಳಿಕ 1983ರಲ್ಲಿ ಅಂದರೆ 16 ವರ್ಷಗಳ ಬಳಿಕ ಚುನಾವಣ ಆಯೋಗ ತನ್ನ ವಾರ್ಷಿಕ ವರದಿಯಲ್ಲಿ ಏಕಕಾಲದಲ್ಲಿ ಚುನಾವಣೆ ವಿಚಾರ ಪ್ರಸ್ತಾವಿಸಿತ್ತು. 1999ರಲ್ಲಿ ಕಾನೂನು ಆಯೋಗದ ವರದಿ ಯಲ್ಲಿಯೂ ಇದೇ ಅಂಶ ಉಲ್ಲೇಖೀಸ ಲಾಗಿತ್ತು. 2014ರಲ್ಲಿ ಬಿಜೆಪಿ ತನ್ನ ಚುನಾ ವಣ ಪ್ರಣಾಳಿಕೆಯಲ್ಲಿ ಒಂದು ರಾಷ್ಟ್ರ; ಒಂದು ಚುನಾವಣೆ ಬಗ್ಗೆ ವಾಗ್ಧಾನ ಮಾಡಿತ್ತು. 2017ರಲ್ಲಿ ನೀತಿ ಆಯೋಗ ಈ ಬಗ್ಗೆ ಸಲಹಾ ಪತ್ರಿಕೆ ಸಿದ್ಧಪಡಿಸಿತ್ತು.