Advertisement
ಬೆಂಗಳೂರಿನ ಹಾರೋಹಳ್ಳಿಯಲ್ಲಿ ಕಸಾಯಿ ಖಾನೆಯನ್ನು ಕೂಡಲೇ ಸ್ಥಗಿತಗೊಳಿಸಿ ಗೋವುಗಳ ಕಳ್ಳಸಾಗಾಣಿಕೆ, ದೇಶಿಯ ತಳಿಯ ವಿನಾಶ, ಪರಿಸರದ ಮೇಲಿನ ದುಷ್ಪರಿಣಾಮವನ್ನು ತಡೆಯಬೇಕು. ಪಿಎಚ್‌ಡಿ ಮತ್ತು ಎಂಫಿಲ್ ಅಧ್ಯಯನ ಮಾಡುವ ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಮಾಸಿಕ 25 ಸಾವಿರ ಶಿಷ್ಯ ವೇತನವನ್ನು ರದ್ದುಗೊಳಿಸಬೇಕು. ಇದು ರಾಜ್ಯ ಸರಕಾರವು ಅಲ್ಪಸಂಖ್ಯಾಕರನ್ನು ಓಲೈಸಲು, ಬಹುಸಂಖ್ಯಾಕ ಅನ್ಯ ಸಮುದಾಯದ ವಿದ್ಯಾರ್ಥಿಗಳಿಗೆ ಮಾಡಿದ ಘೋರ ಅನ್ಯಾಯವಾಗಿದೆ ಮತ್ತು ಸಂವಿಧಾನಬಾಹಿರವಾಗಿದೆ.
ಚಾಮರಾಜನಗರದ ಕೊಳ್ಳೆಗಾಲದ ಮಲೆ ಮಹಾದೇಶ್ವರ ಬೆಟ್ಟದಲ್ಲಿ ಹಸುಗಳು ಮೇಯುವ ಸುಮಾರು 150 ಎಕ್ರೆ ಜಮೀನಿನಲ್ಲಿ ಪರಿಸರ ಹಾನಿಯ ನೆಪದಲ್ಲಿ ಬೇಲಿ ಹಾಕಿದೆ. ಇದರಿಂದ 4,000 ಹಸು ಗಳಿಗೆ ಮೇವು ಇಲ್ಲದೇ, ಸಾಯುವ ಸ್ಥಿತಿಯಲ್ಲಿ ಇವೆ. ಆದ್ದರಿಂದ ಸರಕಾರವು ಕೂಡಲೇ ಬೇಲಿಯನ್ನು ತೆಗೆದು ಹಾಕಬೇಕು ಮತ್ತು ಗೋವುಗಳ ರಕ್ಷಣೆ, ಪಾಲನೆ ಮತ್ತು ಪೋಷಣೆಗೆ ಸಾಕಷ್ಟು ಆರ್ಥಿಕ ಸಹಾಯ ಮತ್ತು ಮೇವು ಒದಗಿಸುವ ಮೂಲಕ ರೈತರಿಗೆ ಮತ್ತು ಗೋಶಾಲೆಗಳಿಗೆ ಸಹಾಯವನ್ನು ನೀಡಬೇಕು ಮತ್ತು ಅಲ್ಲಲ್ಲಿ ಗೋಮಾಳಗಳನ್ನು ನಿರ್ಮಿಸಿ ಗೋಸಂತತಿಯ ಪಾಲನೆಗೆ ಗಮನ ನೀಡಬೇಕು ಎಂದು ಮನವಿಯ ಮೂಲಕ ಸಮಿತಿಯು ಆಗ್ರಹಿಸಿದೆ. ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಕೃಷ್ಣಕುಮಾರ್ ಶರ್ಮ, ಚಂದ್ರಶೇಖರ, ರಮೇಶ, ಕೇಶವ ಗೌಡ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.