Advertisement

165 ವಾರ್ಡ್‌ಗಳಲ್ಲಿ ಕಮಿಟಿ ಸಭೆ

12:07 PM Oct 04, 2020 | Suhan S |

ಬೆಂಗಳೂರು: ಪಾಲಿಕೆ ಸದಸ್ಯರ ಅಧಿಕಾರ ಅವಧಿ ಮುಕ್ತಾಯದ ಬೆನ್ನಲ್ಲೆ ಪಾಲಿಕೆಯ ಅಧಿಕಾರಿಗಳನ್ನುನೋಡಲ್‌ ಅಧಿಕಾರಿಗಳನ್ನಾಗಿ ನೇಮಿಸಿದ್ದು, ಇದೇ  ಮೊದಲ ಬಾರಿ ಶನಿವಾರ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಸೇರಿದಂತೆ ಪಾಲಿಕೆಯ 165ಅಧಿಕಾರಿಗಳು 165 ವಾರ್ಡ್‌ಗಳಲ್ಲಿ ವಾರ್ಡ್‌ ಕಮಿಟಿ ಸಭೆ ನಡೆಸಿದರು.

Advertisement

ಆಯುಕ್ತರೂ ವಸಂತನಗರ ನೋಡಲ್‌ ಅಧಿಕಾರಿಗಳಾಗಿ ನೇಮಕವಾಗಿದ್ದು, ಜನರೊಂದಿಗೆ ಮಾತುಕತೆ ನಡೆಸಿದರು. ಆಡಳಿತಾಧಿಕಾರಿ ಗೌರವ್‌ ಗುಪ್ತಾ ನಾಗರಿಕರ ಜತೆ ಮುಕ್ತವಾಗಿ ಮಾತನಾಡಿದರುಬಳಿಕ ಮಾತನಾಡಿ, ಬಿಬಿಎಂಪಿ ವಾರ್ಡ್‌ಗಳಿಗೆ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಿದ ಬಳಿಕ ಶನಿವಾರ ಮೊದಲ ವಾರ್ಡ್‌ ಕಮಿಟಿ ಸಭೆ ನಡೆಸಲಾಗಿದೆ. 198 ವಾರ್ಡ್‌ ಪೈಕಿ 165 ವಾರ್ಡ್‌ಗಳಲ್ಲಿ ವಾರ್ಡ್‌ ಕಮಿಟಿ ಸಭೆ ನಡೆದಿದೆ ಎಂದು ಆಯುಕ್ತರು ತಿಳಿಸಿದರು.

ತಿಂಗಳ ಮೊದಲ ಮತ್ತು ಮೂರನೇ ಶನಿವಾರ ವಾರ್ಡ್‌ ಸಮಿತಿ ಸಭೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಶನಿವಾರ165 ವಾರ್ಡ್‌ಗಳಲ್ಲಿ ಮೊದಲ ವಾರ್ಡ್‌ ಸಮಿತಿ ಸಭೆ ನಡೆಸಲಾಗಿದೆ. ಉಳಿದ 33 ವಾರ್ಡ್‌ಗಳಲ್ಲಿ ಸ್ಥಳೀಯ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು,ಸ್ಥಳೀಯರು ಮತ್ತೂಂದು ದಿನ ಸಭೆನಡೆಸುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸಭೆ ನಡೆದಿಲ್ಲ ಎಂದು ಮಾಹಿತಿ ನೀಡಿದರು.

ಸಮಸ್ಯೆ ತ್ವರಿತವಾಗಿ ನಿವಾರಿಸಿ: ವಾರ್ಡ್‌ಗಳಲ್ಲಿ ಇರುವ ಸಮಸ್ಯೆಗಳನ್ನು ನಿಗದಿತ ಸಮಯದಲ್ಲಿ ನಿವಾರಣೆ ಮಾಡಲು ಸಮರ್ಪಕ ಯೋಜನೆ ರೂಪಿಸಬೇಕು ಎಂದು ಆಡಳಿತಾಧಿಕಾರಿ ಗೌರವ್‌ ಗುಪ್ತ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಲಸೂರುವಾರ್ಡ್‌ನಲ್ಲಿ ನಡೆದ ವಾರ್ಡ್‌ ಸಮಿತಿ ಸಭೆಯಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಸ್ಥಳೀಯ ಮಟ್ಟದ ಚಿಕ್ಕ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಹಲಸೂರು ಕೆರೆ, ಅಂಗಳ ಸ್ವಚ್ಛ ಹಾಗೂ ಸುಂದವಾಗಿರುವಂತೆ ಕ್ರಮ ವಹಿಸಬೇಕು. ಬೀದಿ ದೀಪ, ಸೂಕ್ಷ ಪ್ರದೇಶಗಳಿಗೆ ಸಿಸಿ ಕ್ಯಾಮೆರಾ, ಅನಧಿಕೃತವಾಹನ ತೆರವು ಸೇರಿದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ವಾರ್ಡ್‌ ವ್ಯಾಪ್ತಿಯಲ್ಲಿರುವ34 ಬೂತ್‌ ಮಟ್ಟದಲ್ಲಿ ಆಸ್ತಕ್ತಿಯುಳ್ಳ ವಿದ್ಯಾರ್ಥಿಗಳನ್ನು ಸ್ವಯಂಸೇವಕಾರಾಗಿ ನಿಯೋಜನೆ ಮಾಡಿಕೊಂಡರೆ ಇನ್ನೂ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗಲಿದೆ ಎಂದು ಕ್ಷೇಮಾಭಿವೃದ್ಧಿ ಸಂಘಗಳಿಗೆ ಸಲಹೆ ನೀಡಿದರು.

Advertisement

ನೋಡಲ್‌ ಅಧಿಕಾರಿ ಸರ್ಫರಾಜ್‌ ಖಾನ್‌ ಮಾತನಾಡಿ,ಹಲಸೂರುವಾರ್ಡ್‌ರಸ್ತೆಬದಿನಿಲ್ಲಿಸಿರುವ ವಾಹನಗಳನ್ನು ಪೊಲೀಸ್‌ ಅಧಿಕಾರಿಗಳ ಜೊತೆ ಚರ್ಚಿಸಿ ಬಿಂಗೀಪುರಭೂರ್ಭತಿಗೆಸ್ಥಳಾಂತರಮಾಡಲಾಗುವುದು. ಹಲಸೂರು ಕರೆಯನ್ನು ಸ್ವಚ್ಛಗೊಳಿಸಲಾಗುವುದು ಎಂದು ಹೇಳಿದರು.

ಸ್ವಿಚ್‌ ಹಾಳು ಮಾಡಲಾಗುತ್ತಿದೆ: ಸಭೆ ವೇಳೆ ಸಾರ್ವಜನಿಕರೊಬ್ಬರು ಬೀದಿ ದೀಪಗಳ ಸ್ವಿಚ್‌ಗಳನ್ನು ಕಿಡಿಗೇಡಿಗಳು ಹಾಳು ಮಾಡುತ್ತಿದ್ದಾರೆ ಎಂದರು. ಆಡಳಿತಾಧಿಕಾರಿ ಪ್ರತಿಕ್ರಿಯಿಸಿ, ರಾತ್ರಿ ಗಸ್ತು ತಿರುಗುವ ವೇಳೆ ಅಂತಹ ಪ್ರಕರಣಗಳು ಕಂಡುಬಂದರೆ ಸೂಕ್ತ ಕ್ರಮವಹಿಸಿ ಎಂದು ಮಾರ್ಷಲ್‌ಗ‌ಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಶಾಸಕ ರಿಜ್ವಾನ್‌ ಅರ್ಷದ್‌, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಎರಡೂ ವಾರ್ಡ್‌ಗಳಲ್ಲಿ ಕೇಳಿ ಬಂದ ದೂರುಗಳು :  ವಾರ್ಡ್‌ ಸಮಿತಿ ಸಭೆಯಲ್ಲಿ ಬ್ಲಾಕ್‌ ಸ್ಪಾಟ್‌ ಸಮಸ್ಯೆ, ರಸ್ತೆ ಗುಂಡಿ ಕಾಮಗಾರಿ ವಿಳಂಬ, ಅನಧಿಕೃತಕಟ್ಟಡ ನಿರ್ಮಾಣ, ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಆರೋಪಕೇಳಿಬಂದವು. ಆಡಳಿತಾಧಿಕಾರಿ ಹಾಗೂ ಆಯುಕ್ತರು ಮುಂದಿನ ಸಭೆ ಒಳಗೆ ಪರಿಹಾರಕ್ಕೆ ಸೂಚಿಸಿದರು. ವಾರ್ಡ್‌ ಸಮಿತಿ ಸದಸ್ಯರು, ವಾರ್ಡ್‌ನ ಗುತ್ತಿಗೆದಾರರು, ಅಧಿಕಾರಿಗಳನ್ನು ಒಳಗೊಂಡ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚನೆ ಮಾಡಿಕೊಳ್ಳುವಂತೆ ಸೂಚಿಸಿದರು. ಈ ಗ್ರೂಪ್‌ನಲ್ಲಿ ಬರುವ ದೂರುಗಳನ್ನು ತಕ್ಷಣ ಪರಿಹಾರ ಮಾಡುವಂತೆ ನಿರ್ದೇಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next