Advertisement

ಆರ್ಥಿಕ ಸ್ವಾವಲಂಬನೆ ಅಧ್ಯಯನಕ್ಕೆ ಸಮಿತಿ ರಚನೆ

12:24 PM Dec 02, 2021 | Team Udayavani |

ಬೆಂಗಳೂರು: ಇಂಧನ ಇಲಾಖೆ ಬೆನ್ನಲ್ಲೇ ರಾಜ್ಯ ಸಾರಿಗೆ ನಿಗಮಗಳ ಆರ್ಥಿಕ ಸ್ವಾವ ಲಂಬನೆ ಹಾಗೂ ಸಂಪನ್ಮೂಲ ಕ್ರೋಢೀಕರಣ ಗಳಿಗೆ ಸಂಬಂಧಿಸಿ ದಂತೆಯೂ ಅಧ್ಯಯನಕ್ಕೆ ಮುಂದಾಗಿ ರುವ ಸರ್ಕಾರ, ಇದಕ್ಕಾಗಿ ಸಮಿತಿಯನ್ನು ರಚಿಸಿ ಮಂಗಳವಾರ ಆದೇಶ ಹೊರಡಿಸಿದೆ.

Advertisement

ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಏಕಸದಸ್ಯ ಸಮಿತಿ ರಚಿಸಲಾಗಿದ್ದು, ಇದು ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದೆ. ಅದನ್ನು ಆಧರಿಸಿ ಸರ್ಕಾರ ಸಾರಿಗೆ ನಿಗಮಗಳ ಚೇತರಿಕೆಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

ಸಮಿತಿಯು ಪ್ರಮುಖವಾಗಿ ಕೆಎಸ್‌ ಆರ್‌ಟಿಸಿ, ಎನ್‌ಡಬ್ಲ್ಯು ಕೆಆರ್‌ಟಿಸಿ, ಕೆಕೆ ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳ ಮರುವಿನ್ಯಾಸ, ಭೂಮಿ, ಕಟ್ಟಡ ಮತ್ತಿತರ ಸ್ಥಿರಾಸ್ತಿಗಳು, ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣ ಮತ್ತಿತರ ವಿಷಯಗಳನ್ನು ಪರಿಗಣಿಸಿ ಅಧ್ಯಯನ ನಡೆಸಲಿದೆ.

ಸಾರಿಗೆ ಕ್ಷೇತ್ರದ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಸಮಿತಿ ಗುರುತಿಸುವ ಇತರೆ ಯಾವುದೇ ಅಂಶಗಳನ್ನು ಒಳಗೊಂಡು ಅಧ್ಯಯನ ನಡೆಸಬಹುದು. ಸಮಿತಿ ಎಲ್ಲ ನಾಲ್ಕೂ ನಿಗಮಗಳು ಸಹಕಾರ ನೀಡಬೇಕು. ಸಮಿತಿ ಅಧ್ಯಕ್ಷರ ಸಂಭಾವನೆ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸ ಲಾಗುವುದು ಎಂದು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ವಿ.ಎಸ್‌. ಪುಷ್ಪ ಆದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next