Advertisement

ನದಿ ನೀರು ನಿರ್ವಹಣೆಗೆ ಸಮಿತಿ ರಚನೆ ಸಲಹೆ

02:30 PM Jun 26, 2019 | Team Udayavani |

ಬೆಳಗಾವಿ: ಕೃಷ್ಣಾ ತೀರದ ರೈತರು ಮತ್ತು ಜನರ ಕುಡಿಯುವ ನೀರಿನ ಸಂಕಷ್ಟಗಳನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕರ್ನಾಟಕ-ಮಹಾರಾಷ್ಟ್ರ ನದಿ ನೀರು ನಿರ್ವಹಣಾ ಮೇಲ್ವಿಚಾರಣೆ ಸಮಿತಿಯೊಂದನ್ನು ಮಠಾಧೀಶರ ನೇತೃತ್ವದಲ್ಲಿ ರೈತರೇ ರಚಿಸಿಕೊಳ್ಳುವುದು ಸೂಕ್ತ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

Advertisement

ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ ಬಿಡುಗಡೆಯಾದ ನೀರು ಅಥಣಿ ತಾಲೂಕಿನ ದರೂರು ಸೇತುವೆ ತಲುಪಿದ ಹಿನ್ನೆಲೆಯಲ್ಲಿ ಮಂಗಳವಾರ ಕೃಷ್ಣಾ ನದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಲಾØಪುರ ಜಿಲ್ಲೆಯ. ಶಿರೋಳ ಶಾಸಕ ಉಲಾØಸರಾವ ಪಾಟೀಲರು ಸ್ವತಃ ರಾಜಾಪುರ ಬ್ಯಾರೇಜ್‌ ಗೇಟನ್ನು ತೆರೆದು ಒಮ್ಮೆ ನೀರು ಬಿಡಿಸಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಕೃಷ್ಣಾ ತೀರದ ಜನಪ್ರತಿನಿಧಿಗಳು ಮತ್ತು ರೈತರನ್ನು ಒಳಗೊಂಡ ಸಮಿತಿಯೊಂದನ್ನು ಮಠಾಧೀಶರ ಮಾರ್ಗದರ್ಶನದಲ್ಲಿ ರಚಿಸಿಕೊಂಡರೆ ಬೇಸಿಗೆಯಲ್ಲಿ ನದಿಗಳ ನೀರು ನಿರ್ವಹಣಾ ಮೇಲ್ವಿಚಾರಣೆ ಕೈಗೊಳ್ಳಬಹುದಾಗಿದೆ ಎಂದು ಅವರು ಸಲಹೆ ನೀಡಿದರು.

ಕಳೆದ ಮೂರು ತಿಂಗಳಿಂದ ಚಿಕ್ಕೋಡಿ,ಅಥಣಿ ಮತ್ತು ರಾಯಬಾಗ ತಾಲೂಕುಗಳ ರೈತರು ಮತ್ತು ಸಾರ್ವಜನಿಕರು ಕುಡಿಯುವ ನೀರಿನ ತೀವ್ರ ಅಭಾವದಿಂದ ಸಂಕಷ್ಟಕ್ಕೆ ಒಳಗಾದರೂ ರಾಜ್ಯ ಸರಕಾರವು ಕೊಯ್ನಾ ನೀರು ಬಿಡುಗಡೆಗೆ ಯಾವುದೇ ಗಂಭೀರ ಪ್ರಯತ್ನ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗ ಕೊಲಾØಪುರ ಸುತ್ತಮುತ್ತಲೂ ಭಾರೀ ಮಳೆ ಸುರಿದಿದ್ದರಿಂದ ರಾಜಾಪುರ ಬ್ಯಾರೇಜಿನಿಂದ ಅನಿವಾರ್ಯವಾಗಿ ಬಿಟ್ಟ ನೀರು 60 ಕಿಮೀ ಸಾಗಿ ದರೂರು ಸೇತುವೆ ದಾಟಿ ಹೋಗುತ್ತಿದೆ. ಆದರೆ ನೀರಿನ ಸಮಸ್ಯೆ ಮುಂದಿನ ವರ್ಷವೂ ಪುನರಾವರ್ತನೆ ಯಾಗಬಾರದು. ಸರಕಾರ ಈಗಿನಿಂದಲೇ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದರು.

ನದಿ ಇಂಗಳಗಾವದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಕೃಷ್ಣಾ ನದಿ ನೀರು ದರೂರು ಸೇತುವೆ ತಲುಪಿದ್ದು ಜನರು ಇದನ್ನು ಹಾಲಿನಂತೆಯೇ ಮಿತವಾಗಿ ಬಳಸಬೇಕು ಎಂದರು.

Advertisement

ಭಾರತೀಯ ಕಿಸಾನ್‌ ಸಂಘದ ಭರಮು ನಾಯಕ, ಅಶೋಕ ದಾನಗೌಡರ, ಸಿದ್ಧಾರೂಢ ಮಠಪತಿ, ಲಕಡಿ,ದುಂಡಪ್ಪ ಅವಟಿ, ಬಸವರಾಜ ಖೇಮಲಾಪುರ, ಶಿವಪ್ಪ ಶಮರಂತ, ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನ ಬಣದ ಜಿಲ್ಲಾಧ್ಯಕ್ಷೆ ಯಶೋಧ ಬಿರಡಿ, ಸತ್ತೆವ್ವ ತಾಸಿಲ್ದಾರ, ವಿರೇಂದ್ರ ಗೋಬರಿ, ಶಿವಾನಂದ ಸದಲಗಾ, ದರ್ಶನ್‌ ಶೆಟ್ಟಿ, ಅಭಿನವ ಉಪಾಧ್ಯೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next