Advertisement
ನೆಕ್ಸ್ಟ್ ಪರೀಕ್ಷೆ ನಡೆಸಲು ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಏನೇನು ಬದಲಾವಣೆಗಳನ್ನು ತರಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸಮಿತಿಯು ಸಂಬಂಧಿತ ನಿಯಮಗಳನ್ನು ಪರಿಶೀಲಿಸಲಿದೆ. ನೆಕ್ಸ್ಟ್ ಪರೀಕ್ಷೆಯ ಅರ್ಜಿ, ಪಿಜಿ ಪ್ರವೇಶ ಪರೀಕ್ಷೆ, ಅರ್ಜಿಗೆ ಮಿತಿ ಹೇರಬೇಕೇ ಬೇಡವೇ ಎಂಬ ಬಗ್ಗೆ ಸಮತಿ ಪರಿಶೀಲಿಸಲಿದ್ದು, ಪ್ರಸ್ತಾವಿತ ವ್ಯವಸ್ಥೆಯ ಜಾರಿಗೆ ರಾಜ್ಯಗಳು, ವಿವಿಗಳು, ವೈದ್ಯ ಕೀಯ ಕಾಲೇಜುಗಳು ಸಿದ್ಧತೆ ನಡೆಸಿವೆಯೇ ಎಂಬುದನ್ನೂ ನೋಡಿ, ಸಲಹೆ ನೀಡಲಿದೆ. ಸಮಿತಿ 2 ವಾರಗಳ ಒಳಗಾಗಿ ಶಿಫಾರಸು ಸಲ್ಲಿಸು ವಂತೆ ಸೂಚಿ ಸಲಾಗಿದೆ. ಜೂನ್‌ನಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಹೊರಡಿಸಿದ್ದ ನ್ಯಾಶನಲ್ ಎಕ್ಸಿಟ್ ಟೆಸ್ಟ್‌ನ ನಿಬಂಧನೆಗಳ ಪ್ರಕಾರ, 1 ವರ್ಷದಲ್ಲಿ 2ಹಂತಗಳಲ್ಲಿ ಈ ಪರೀಕ್ಷೆ ನಡೆಯಲಿದೆ ಎಂದಿತ್ತು. Advertisement
Exam: ಎಕ್ಸಿಟ್ ಪರೀಕ್ಷೆ ಸಿದ್ಧತೆ ಪರಿಶೀಲನೆಗೆ ಸಮಿತಿ
01:04 AM Oct 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.