Advertisement

ಸರ್ವತೋಮುಖ ಪ್ರಗತಿಗಾಗಿ ಸಮಿತಿ ಹೋರಾಟ

12:59 PM Sep 11, 2019 | Suhan S |

ಮುಂಬಯಿ, ಸೆ. 10: ಅಧಿವೇಶನ ಅರ್ಥಪೂರ್ಣವಾಗಿ ನಡೆದಿದೆ. ನಮ್ಮ ಜಿಲ್ಲೆಗಳ ಅಭಿವೃದ್ದಿಯ ಬಗ್ಗೆ ಜಿಲ್ಲೆಯ ಎಲ್ಲಾ ರಾಜಕೀಯ ಧುರೀಣರು ನಮಗೆ ಸಹಕರಿಸುತ್ತಿದ್ದು, ಮಹಾನಗರದಲ್ಲಿನ ಎಲ್ಲಾ ಜಾತಿಯ ಸಂಘಟನೆಗಳ ಸಹಕಾರದಿಂದ ಜಿಲ್ಲೆಗಳ ಸಮಸ್ಯೆಗಳನ್ನು ಬಗೆಯರಿಸಲು ಅಸಾಧ್ಯವಾಗದು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಹೇಳಿದರು.

Advertisement

ಸೆ. 8ರಂದು ಕುರ್ಲಾ ಪೂರ್ವದ ಬಂಟರ ಭವನದ ಅನೆಕ್ಸ್‌ ಹಾಲ್ನಲ್ಲಿ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ 18ನೇ ವಾರ್ಷಿಕ ಮಹಾಸಭೆಯ ಬಳಿಕ ನಡೆದ ಬಹಿರಂಗ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೋನ್ಸೆ ಜಯಕೃಷ್ಣ ಶೆಟ್ಟಿಯವರು ಜಿಲ್ಲೆಗಳ ಸಮಸ್ಯೆಗಳಲೊಂದಾದ ನೀರಿನ ಸಮಸ್ಯೆ ಬಗ್ಗೆ ಹಿಂದೆಯೇ ಸರಕಾರದ ಗಮನಕ್ಕೆ ತಂದಿದ್ದು, ನದಿಗಳ ಜೋಡಣೆಯಿಂದಲೂ ಇದನ್ನು ಬಗೆಯರಿಸಬಹುದು. ಸರಕಾರೇತರ ಸಂಘಟನೆ ಮತ್ತು ಸರಕಾರ ಒಂದುಗೂಡಿ ಜಿಲ್ಲೆಗಳ ಸಮಸ್ಯೆಯನ್ನು ಪರಿಹರಿಸಬಹುದು. ಈ ರೀತಿ ನಮ್ಮ ಜೆಲ್ಲೆಗಳನ್ನು ಉನ್ನತ ಮಟ್ಟಕ್ಕೇರಿಸಬಹುದು. ಮೆಟ್ರೋ ಯೋಜನೆಯಿಂದ ನಗರದ ಆರೇ ಕಾಲನಿಯಲ್ಲಿ ಮರಗಳನ್ನು ಕಡಿದರೂ ಸುಮಾರು ನೂರು ಎಕರೆ ಜಾಗದಲ್ಲಿ ಗಿಡಮರಗಳನ್ನು ನೆಟ್ಟು ಬೆಳೆಸುದರಿಂದ ಮಾಲಿನ್ಯರಹಿತವನ್ನಾಗಿ ಮಾಡುವ ಬಗ್ಗೆ ನಾವು ಸರಕಾರದ ಗಮನಕ್ಕೆ ತರಲಿದ್ದೇವೆ ಎಂದರು.

ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಜಗದೀಶ್‌ ಅಧಿಕಾರಿ ಅವರು ಮಾತನಾಡಿ, ನಮ್ಮವರೇ ಆದ ಜಾರ್ಜ್‌ ಫೆರ್ನಾಂಡಿಸ್‌ರ ಪ್ರೇರಣೆಯಿಂದ ಹಲವು ಪ್ರಗತಿಪರ ಕೆಲಸಗಳು ಆಗಿದ್ದು, ಹಲವು ಸಾಧನೆಗಳನ್ನು ಮಾಡಿರುವ ನಮ್ಮದು ಶ್ರೀಮಂತ ಜಿಲ್ಲೆಗಳು ರೈಲ್ವೇ, ಹೈವೇ, ಪೋರ್ಟ್‌, ಏನ್‌ಪೋರ್ಟ್‌ಗಳನ್ನು ಹೊಂದಿದ ನಮ್ಮ ಜಿಲ್ಲೆಗಳು ಕರ್ನಾಟಕದ ಹೆಬ್ಟಾಗಿಲು. ಪೂರ್ಣ ಚಂದ್ರನ ವ್ಯಕ್ತಿತ್ವವನ್ನು ಹೊಂದಿರುವ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಎಲ್ಲ ಸಮುದಾಯದವರನ್ನು ಒಂದುಗೂಡಿಸಿ ಜಿಲ್ಲೆಗಳ ಪ್ರಗತಿಗಾಗಿ ಹೋರಾಡುತ್ತಿದ್ದು ಅಭಿನಂದನೀಯ ಎಂದರು.

ಉಪಾಧ್ಯಕ್ಷ ಪೆಲಿಕ್ಸ್‌ ಡಿ. ಸೋಜಾ ಮಾತನಾಡಿ, ಜಲ ಸಂಗ್ರಹಣೆ, ಹೆಚ್ಚಿನ ಉದ್ಯೋಗಾವಕಾಶದ ಬಗ್ಗೆ ಮಾಹಿತಿ ನೀಡಿದರು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ ಅವರು ಮಾತನಾಡಿ, ಜಿಲ್ಲೆಗಳಲ್ಲಿ ವಿದ್ಯತ್‌ನ ಕೊರತೆಯಿಂದ ಸಣ್ಣ ಉದ್ಯಮಗಳ ಕೊರತೆ ಉಂಟಾಗಿದೆ. ಅಭಿವೃದ್ದಿ ಕಾರ್ಯದಲ್ಲಿ ತೊಡಗಿರುವ ಈ ಸಂಸ್ಥೆಯನ್ನು ಬೆಳೆಸಿದಲ್ಲಿ ತುಳು ನಾಡು ಬೇಳೆಯಬಹುದು ಎಂದು ಹೇಳಿದರು.

ಸಫಲಿಗ ಸೇವಾ ಸಂಘ ಮುಂಬಯಿ ಅಧ್ಯಕ್ಷರಾದ ಶ್ರೀನಿವಾಸ ಸಾಫಲ್ಯರು ಮಾತನಾಡಿ, ಜಾಗತಿಕ ಮಟ್ಟದಲ್ಲೇ ಪರಿಸರ ಮಾಲಿನ್ಯದ ಸಮಸ್ಯೆಯಿದ್ದು ನಮ್ಮ ಜಿಲ್ಲೆಗಳಲ್ಲಿ ಅಭಿವೃದ್ದಿಯೊಂದಿಗೆ ಮರಗಿಡಗಳನ್ನು ನೆಟ್ಟು ಬೆಳೆಸುವ ಕೆಲಸಗಳೂ ಆಗಬೇಕಾಗಿದೆ ಎಂದರು.

Advertisement

ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ ಕುಲಾಲ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಜಿಲ್ಲೆ ಗಳ ಅಭಿವೃದ್ದಿಗೆ ಸಮಿತಿಯ ಕೊಡುಗೆ ಪ್ರಶಂಸನೀಯ ಎಂದರು. ವಕ್ಕಲಿಕರ ಸಂಘ ಮಹಾರಾಷ್ಟ್ರವು ತಮ್ಮ ಸಂಪೂರ್ಣ ಸಹಕಾರವನ್ನು ವ್ಯಕ್ತಪಡಿಸಿದೆ ಎಂದು ಅಧ್ಯಕ್ಷ ಜಿತೇಂದ್ರ ಗೌಡ ತಿಳಿಸಿದರು.

ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಆರ್‌. ಎಂ. ಭಂಡಾರಿ ಅವರು ಮಾತನಾಡಿ, ಕಾನೂನು ಸಲಹೆ ಬಗ್ಗೆಯೂ ನಾವು ಈ ಸಮಿತಿಗೆ ಸಹಕರಿಸುವೆವು ಎಂದು ನುಡಿದರು. ಕರ್ನಾಟಕ ವಿಶ್ವಕರ್ಮ ಅಸೋಶಿಯೇಶನ್‌ ಮುಂಬಯಿ ಅಧ್ಯಕ್ಷ ಸದಾನಂದ ಆಚಾರ್ಯರು ಮಾತನಾಡಿ, ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಸಮಿತಿಯು ಮಾಡುತ್ತಿರುವ ಕೆಲಸಕ್ಕೆ ಬೆಂಬಲ ಸೂಚಿಸಿದರು.

ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷರಾದ ರಾಮಚಂದ್ರ ಗಾಣಿಗ ಅವರು ಮಾತನಾಡಿ, ಯವುದೇ ಸಮಸ್ಯೆ, ಅಪಮಾನವನ್ನು ಲೆಕ್ಕಿಸದೆ ಊರಿಗೆ ವಿದ್ಯುತ್‌ ಸಂಪರ್ಕವನ್ನು ಒದಗಿಸಿದ ತೃಪ್ತಿ ನಮಗಿದೆ ಎಂದರು. ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷರಾದ ರವಿ ದೇವಾಡಿಗ ಅವರು ಮಾತನಾಡಿ, ಎಲ್ಲರ ಸಹಕಾರದಿಂದ ಜಿಲ್ಲೆಗಳ ಅಭಿವೃದ್ದಿಯಾಗಲಿ ಎಂದರು. ಬಿಲ್ಲವ ಛೇಬಂರ್‌ ಆಪ್‌ ಕಾಮರ್ಸ್‌ ಮತ್ತು ಇಂಡಸ್ಟ್ರೀಸ್‌ನ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ ಅವರು ಮಾತನಾಡಿ, ಮಾಲಿನ್ಯ ನಿಯಂತ್ರಣಗೊಳ್ಳುದರೊಂದಿಗೆ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಉದ್ದಿಮೆಗಳು ಸ್ಥಾಪನೆಯಾಗಿ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿ ಎಂದು ನುಡಿದರು.

ಬಂಟ್ಸ್‌ ಛೇಂಬರ್‌ ಆಪ್‌ ಕಾಮರ್ಸ್‌ ಮತ್ತು ಇಂಡಸ್ಟ್ರೀಸ್‌ನ ಕಾರ್ಯಾಧ್ಯಕ್ಷ ಕೆ. ಸಿ. ಶೆಟ್ಟಿ ಅವರು ಮಾತನಾಡಿ, ಪರಿಸರವು ಉತ್ತಮವಾದಲ್ಲಿ ಸರಕಾರದ ಮನವೊಲಿಸಿ ದೊಡ್ಡ ಮಟ್ಟದ ಉದ್ದಿಮೆಯನ್ನು ಸ್ಥಾಪಿಸಬಹುದು ಎಂದರು. ನ್ಯಾಯವಾದಿ ಡಿ. ಕೆ. ಶೆಟ್ಟಿ ಅವರು ಮಾತನಾಡಿ, ಕೃಷಿ ಆಧಾರಿತ ಹಾಗು ಪೋಲ್ಯೂಟರಿ, ಡೈರಿ ಉದ್ದಿಮೆಗಳು ಗೃಹ ಕೈಗಾರಿಕೆಯಂತಿದ್ದು, ಹೊಟೇಲು ಉದ್ದಿಮೆಯಿಂದಾಗಿ ಇದಕ್ಕೆ ಬೇಡಿಕೆ ಅಧಿಕವಾಗಬಹುದು ಎಂದರು.

ಬಿಎಸ್‌ಕೆಬಿ ಅಸೋಸಿಯೇಶನ್‌ನ ಅಧ್ಯಕ್ಷರಾದ ಸುರೇಶ್‌ ಎಸ್‌. ರಾವ್‌ ಮಾತನಾಡಿ, ಈಗಾಗಲೇ ಕಟೀಲಿನಲ್ಲಿ ನೂರು ಹಾಸಿಗೆಯ ಎಲ್ಲಾ ಸೌಲಭ್ಯ ಗಳನ್ನು ಹೊಂದಿದ ಆಸ್ಪತ್ರೆಯನ್ನು ಸ್ಥಾಪಿಸಿದ್ದು ಅದರಲ್ಲಿ ಬಡತನದ ರೇಖೆಯಿಂದ ಕೆಳಗಿದ್ದವರಿಗೆ ಹಾಗೂ 70 ವರ್ಷಕ್ಕೆ ಮೇಲ್ಪಟ್ಟ ಎಲ್ಲಾ ವರ್ಗದ ಹಿರಿಯ ನಾಗರಿಕರಿಗೆ ಉಚಿತ ಸೇವೆಯನ್ನು ನೀಡುತ್ತಿದ್ದೇವೆ ಎಂದು ಹೇಳಿದರು.

ಸಮಿತಿಯ ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್‌ ಎಲ್ ಶೆಟ್ಟಿ ಅವರು ಮಾತನಾಡಿ, ಜಿಲ್ಲೆಗಳಲ್ಲಿ ನೀರಿನ ಮಟ್ಟವು ಕಡಿಮೆಯಾಗಿದ್ದು ಇದರ ಬಗ್ಗೆ ಗಮನಹರಿಸಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಉಪಾಧ್ಯಕ್ಷರಾದ ಎಲ್. ವಿ. ಅಮೀನ್‌ ಮಾತನಾಡಿ, ವಿದ್ಯುತ್‌ ಸಮಸ್ಯೆ ಬಗೆಯರಿದಾಗ ಜಿಲ್ಲೆಯ ಅಭಿವೃದ್ದಿ ಸಾಧ್ಯ. ಸಣ್ಣ ಕೈಗಾರಿಕೆಗಳಿಂದ ಉದ್ಯೋಗ ಸೃಷ್ಟಿಸುವ ಕೆಲಸ ಮಾಡೋಣ ಎಂದರು.

ನ್ಯಾಯವಾದಿ ಡಿ. ಕೆ. ಶೆಟ್ಟಿ ಅವರು ಮಾತನಾಡಿ, ಕೃಷಿ ಆಧಾರಿತ ಹಾಗು ಪೋಲ್ಯೂಟರಿ, ಡೈರಿ ಉದ್ದಿಮೆಗಳು ಗೃಹ ಕೈಗಾರಿಕೆಯಂತಿದ್ದು, ಹೊಟೇಲ್ ಉದ್ದಿಮೆಯಿಂದಾಗಿ ಇದಕ್ಕೆ ಬೇಡಿಕೆ ಅಧಿಕವಾಗಬಹುದು ಎಂದರು. ಪ್ರವೀಣ್‌ ನಾರಾಯಣ ದೇವಾಡಿಗ ಮಾತನಾಡಿ, ನೀರಿನ ಸಮಸ್ಯೆ ನಿವಾರಣೆ ಬಗ್ಗೆ ಮಾರ್ಗದರ್ಶನ ನೀಡಲು ತನ್ನ ಸಹಕಾರ ವ್ಯಕ್ತಪಡಿಸಿದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್‌ ದಾಸ್‌ ಕಾರ್ಯಕ್ರಮ ನಿರ್ವಹಿಸಿದರು ಗೌರವ ಕಾರ್ಯದರ್ಶಿ ದೇವದಾಸ್‌ ಕುಲಾಲ್ ವಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಪಿ. ಧನಂಜಯ ಶೆಟ್ಟಿ, ಬಾಲಕೃಷ್ಣ ಭಂಡಾರಿ, ಚಂದ್ರಶೇಖರ ಅರ್‌. ಬೆಳ್ಚಡ, ಜಿ. ಟಿ. ಆಚಾರ್ಯ, ಕೆ. ಎಲ್. ಬಂಗೇರ, ಅಂಥೋನಿ ಸಿಕ್ವೇರ, ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನ್‌ ದಾಸ್‌, ಗೌರವ ಕಾರ್ಯದರ್ಶಿಗಳಾದ ರವಿ ಎಸ್‌. ದೇವಾಡಿಗ, ಪ್ರೊ| ಶಂಕರ್‌, ಹ್ಯಾರಿ ಸಿಕ್ವೇರ, ಬಿ. ಮುನಿರಾಜ್‌ ಜೈನ್‌, ದೇವದಾಸ್‌ ಕುಲಾಲ್, ಗೌರವ ಕೋಶಾಧಿಕಾರಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್‌, ಗೌರವ ಜತೆ ಕೋಶಾಧಿಕಾರಿ ತುಳಸಿದಾಸ್‌ ಅಮೀನ್‌, ಸಮಿತಿಯ ವಕ್ತಾರರಾದ ದಯಾಸಾಗರ ಚೌಟ, ಮಾಜಿ ಅಧ್ಯಕ್ಷರುಗಳಾದ , ವಿಶ್ವನಾಥ ಮಾಡ, ಹರೀಶ್‌ ಕುಮಾರ್‌ ಶೆಟ್ಟಿ ಮತ್ತು ಧರ್ಮಪಾಲ ಯು. ದೇವಾಡಿಗ, ಡಾ| ಆರ್‌. ಕೆ. ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ ಬೋಳ, ಚಿತ್ರಾಪು ಕೆ. ಎಂ. ಕೋಟ್ಯಾನ್‌, ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ಹರೀಶ್‌ ಜಿ. ಅಮೀನ್‌, ಸಮಿತಿಯ ಇತರ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ಚಿತ್ರ -ವರದಿ : ಈಶ್ವರ ಎಂ. ಐಲ್.

Advertisement

Udayavani is now on Telegram. Click here to join our channel and stay updated with the latest news.

Next