ಕುಂದಾಪುರ: ಅಂದಿನಿಂದ ಇಂದಿನ ತನಕ ಮೀನುಗಾರರ ಪರಿಶ್ರಮ ಅಪಾರ. ಅವರಲ್ಲಿನ ಛಲ, ಸ್ವಾಭಿಮಾನ ಬದುಕನ್ನು ಕಟ್ಟಿಕೊಂಡ ಪರಿ ಪ್ರಶಂಸಾರ್ಹ. ಈ ನಿಟ್ಟಿನಲ್ಲಿ ಮೀನುಗಾರರಿಗೆ ಸರಕಾರದಿಂದ ಲಭಿಸಬಹುದಾದ ಯಾವುದೇ ಸವಲತ್ತನ್ನು ರಾಜಕೀಯ ರಹಿತವಾಗಿ ದೊರಕಿಸಿ ಕೊಡುವಲ್ಲಿ ಶಕ್ತಿ ಮೀರಿ ಪ್ರಯತ್ನಸಿಲಾಗುವುದು ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮುಖ್ಯ ಪ್ರವರ್ತಕ ನಾಡೋಜ ಜಿ.ಶಂಕರ್ ಹೇಳಿದರು.
ಅವರು ಶುಕ್ರವಾರ ಕುಂದಾಪುರ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಜರಗಿದ ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ಸಂಘ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮೀನುಗಾರರ ಆರೋಗ್ಯದ ಸಮಸ್ಯೆಗಳ ಬಗ್ಗೆ ಸಹಕಾರ ನೀಡಲು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಬದ್ಧವಾಗಿದೆ. ಮುಂದಿನ ಬಾರಿ ಹತ್ತು ಮಂದಿ ಬಡ ಮೀನು ವ್ಯಾಪಾರಸ್ಥ ಮಹಿಳೆಯರನ್ನು ಗುರುತಿಸಿ ಸಮ್ಮಾನಿಸಿ ಮತ್ಸéಜ್ಯೋತಿ ಬಿರುದಿನೊಂದಿಗೆ ತಲಾ ರೂ. 50 ಸಾವಿರ ಸಹಾಯಧನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮೀನುಗಾರರ ದೊಡ್ಡ ಸಮಾವೇಶವನ್ನು ಸಂಘಟಿಸಿ ನಮ್ಮ ಬೇಡಿಕೆಗಳನ್ನು ಸರಕಾರದ ಮುಂದೆ ನೀಡುವ ಕಾರ್ಯಕ್ರಮವನ್ನು ನಡೆಸಲಿದ್ದು, ಈ ಕಾರ್ಯಕ್ರಮಕ್ಕೆ ಮೀನುಗಾರರು ತಮ್ಮ ಸಂಘಟಿತ ಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ ಎಂದರು.
ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷೆ ರತ್ನಾ ಮೊಗವೀರ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಪುರಸಭೆಯ ಅಧ್ಯಕ್ಷೆ ವಸಂತಿ ಸಾರಂಗ, ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ವಿವಿಧೋದ್ದೇಶ ಸಹಕಾರ ಸಂಘ (ರಿ.) ಇದರ ಅಧ್ಯಕ್ಷ ಆರ್. ಮಂಜುನಾಥ ಬಾಳಿಕೆರೆ, ಸಹಕಾರಿ ಸಂಘಗಳ ಸಹಾಯಕ ನಿಬಂ ಧಕಿ ಎಂ.ಜೆ. ಚಂದ್ರ ಪ್ರತಿಮಾ, ಮೀನುಗಾರಿಕಾ ಸಹಾಯಕ ನಿರ್ದೇಶಕ ಚಂದ್ರಶೇಖರ್, ಸಂಘದ ಗೌರವಾಧ್ಯಕ್ಷ ಶಂಕರ ಖಾರ್ವಿ, ಉಪಾಧ್ಯಕ್ಷ ಎಂ. ಆರೀಫ್, ಕಾರ್ಯದರ್ಶಿ ಜಿನ್ನಾ ಸಾಹೇಬ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಸಲಹೆಗಾರ ಉದಯಕುಮಾರ್ ಹಟ್ಟಿಯಂಗಡಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಈ ಸಂದರ್ಭ ಮೀನುಗಾರರಿಗೆ ಸರಕಾರದ ಮಟ್ಟದಲ್ಲಿ ಅನೇಕ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಸಹಕರಿಸಿದ ಸಮಾಜದ ಮುಂದಾಳು ನಾಡೋಜ ಡಾ| ಜಿ. ಶಂಕರ್ ಅವರನ್ನು ಸಂಘದ ಪರವಾಗಿ ಸಮ್ಮಾನಿಸಲಾಯಿತು. ಅನಾರೋಗ್ಯ ಹೊಂದಿದ ಮೀನುಗಾರ ವ್ಯಾಪಾರಸ್ಥರಿಗೆ ವೈದ್ಯಕೀಯ ನೆರವನ್ನು ನೀಡಲಾಯಿತು. ಹಿರಿಯ ಮೀನುಗಾರ ವ್ಯಾಪಾರಸ್ಥರಾದ ಚಂದು, ಸುಬ್ಬಿ ಖಾರ್ವಿ, ಲಚ್ಚು ಮೊಗವೀರ, ಬಾಷಾ ಸಾಹೇಬ್ ಅವರನ್ನು ಸಮ್ಮಾನಿಸಲಾಯಿತು..
ಜೈ ಕರ್ನಾಟಕ ಚಿಲ್ಲರೆ ಮೀನು ವ್ಯಾಪಾರಸ್ಥರ ವಿ. ಸ. ಸಂಘ (ರಿ.) ಇದರ ಕಾರ್ಯನಿರ್ವಹಣಾಧಿಕಾರಿ ಸತೀಶ್ ಮರವಂತೆ ವಂದಿಸಿದರು.