Advertisement
ದೇಶವು 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದರು. ಬೆಳಗ್ಗೆ 7 ಗಂಟೆ ಸುಮಾರಿಗೆ ರಾಜ್‌ಘಾಟ್ ತಲುಪಿ ಗಾಂಧಿ ಸ್ಮೃತಿಯಲ್ಲಿ ಪುಷ್ಪ ನಮನ ಸಲ್ಲಿಸಿದ ನಂತರ ಪ್ರಧಾನಿ ಕೆಂಪುಕೋಟೆಗೆ ಆಗಮಿಸಿದರು.
Related Articles
Advertisement
ಈ ವರ್ಷದ ಆಚರಣೆಯು ವಿಶಿಷ್ಟ ಭಾರತ 2047 ಅನ್ನು ಆಧರಿಸಿದೆ. ಈ ಬಾರಿಯ ಸಮಾರಂಭದಲ್ಲಿ ರೈತರು, ಬುಡಕಟ್ಟು ಜನಾಂಗದ ಮಹಿಳೆಯರು ಸೇರಿದಂತೆ ಆರು ಸಾವಿರ ಮಂದಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ವಿವಿಧ ರಾಜ್ಯಗಳ ಸುಮಾರು 2000 ಕಲಾವಿದರು ಕೆಂಪು ಕೋಟೆಯಲ್ಲಿ ಪ್ರದರ್ಶನ ನೀಡಿದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತ ತಂಡವೂ ಸಂಭ್ರಮಾಚರಣೆಯ ಭಾಗವಾಗಿತ್ತು. ಏತನ್ಮಧ್ಯೆ, ಮುಂಜಾಗ್ರತಾ ಕ್ರಮವಾಗಿ ದೆಹಲಿಯ ಎಲ್ಲಾ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.
ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ತ್ವರಿತ ತನಿಖೆ ಮತ್ತು ಕಠಿಣ ಶಿಕ್ಷೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ಆಕ್ರೋಶ ವ್ಯಕ್ತಗೊಳ್ಳುತ್ತಿದ್ದು, ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ” ಎಂದು ಹೇಳಿದ ಪ್ರಧಾನಿ ಮೋದಿ, “ಸಾರ್ವಜನಿಕ ನಂಬಿಕೆಗಾಗಿ ತ್ವರಿತ ತನಿಖೆ ಮತ್ತು ಶಿಕ್ಷೆಯ ಅಗತ್ಯವಿದೆ” ಎಂದು ಹೇಳಿದರು. ನೈಸರ್ಗಿಕ ವಿಕೋಪಗಳು ಆತಂಕಕ್ಕೆ ಕಾರಣ:
ಕೇರಳಡಾ ವಯನಾಡು ಸೇರಿದಂತೆ ಉತ್ತರಾಖಂಡ್ ನಲ್ಲಿ ಇತ್ತೀಚಿಗೆ ನಡೆದ ನೈಸರ್ಗಿಕ ವಿಕೋಪಗಳಿಂದಾಗಿ ರಾಷ್ಟ್ರ ಎದುರಿಸುತ್ತಿರುವ ಸವಾಲುಗಳನ್ನು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ. ಹಲವಾರು ಜನರು ತಮ್ಮ ಕುಟುಂಬ ಸದಸ್ಯರನ್ನು, ಆಸ್ತಿಯನ್ನು ನೈಸರ್ಗಿಕ ವಿಕೋಪದಲ್ಲಿ ಕಳೆದುಕೊಂಡಿದ್ದಾರೆ; ರಾಷ್ಟ್ರವೂ ನಷ್ಟವನ್ನು ಅನುಭವಿಸಿದೆ. ಪ್ರಧಾನಿ ಮೋದಿಯವರು ರಾಷ್ಟ್ರಕ್ಕೆ ತಮ್ಮ ಬೆಂಬಲದ ಭರವಸೆ ನೀಡಿದರು, “ಇಂದು, ನಾನು ಅವರೆಲ್ಲರಿಗೂ ನನ್ನ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇನೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಈ ರಾಷ್ಟ್ರವು ಅವರೊಂದಿಗೆ ನಿಲ್ಲುತ್ತದೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ” ಎಂದು ಹೇಳಿದರು.