ಬಾದಾಮಿ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಕೂಡಾ ಇತರ ಚುನಾವಣೆಗಳಂತೆ ಜಾತಿ, ಧರ್ಮ, ಜನಾಂಗದ ಆಧಾರದ ಮೇಲೆ ನಡೆಯುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಜಿ.ಕೆ. ತಳವಾರ ಕಳವಳ ವ್ಯಕ ¤ಪಡಿಸಿದರು.
ಸೋಮವಾರ ಪಟ್ಟಣದ ಕಾನಿಪ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನಗೆ ಮತ ನೀಡಿ ಆಯ್ಕೆ ಮಾಡಿದರೆ ವಿನೂತನ ಕಾರ್ಯಕ್ರಮಗಳ ಮೂಲಕ ಕಸಾಪ ಘಟಕಕ್ಕೆ ಹೊಸತನ ನೀಡಿ ನಾಡು, ನುಡಿಯ ಶ್ರೀಮಂತಿಕೆಗೆ ಶ್ರಮಿಸಲಾಗುವುದು ಎಂದರು.
ಉತ್ತಮ ದಕ್ಷ ಅಧ್ಯಕ್ಷನಾದರೆ ಕನ್ನಡಿಗರ ಹೆಮ್ಮೆಯ ಸಂಸ್ಥೆ ಕಸಾಪ ಘಟಕಕ್ಕೆ ನಿಜವಾದ ಸಾಹಿತಿಯನ್ನು ಆಯ್ಕೆ ಮಾಡಿದರೆ ಮಾತ್ರ ಸಾಹಿತ್ಯ ಪರಿಷತ್‌ನಲ್ಲಿ ಹೊಸತನ ತರಲು ಸಾಧ್ಯವಿದ್ದು ಹೀಗಾಗಿ ನನಗೆ ಮತ ನೀಡಿ. ನಾನು ಸಾಹಿತಿಗಳ, ಸಾಹಿತ್ಯಿಕ ಆಶಯಗಳಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತೇನೆಂದು ಮನವಿ ಮಾಡಿದರು.
ಕಸಾಪ ಘಟಕವು ಕೆಲವೇ ಜನರಸ್ವತ್ತಾಗಿರಬಾರದು. ಅದು ಗ್ರಾಮೀಣ ಭಾಗಕ್ಕೂ ವಿಸ್ತರಿಸಿ ಪ್ರತಿಯೊಬ್ಬ ಕನ್ನಡಿಗರ ಮನೆ ಮನಗಳ ಸ್ವತ್ತಾಗಬೇಕೆಂಬುದು ನನ್ನ ಭಾವನೆ. ಇದಕ್ಕಾಗಿ ಕೆಲವು ನನ್ನದೇ ಆದ ಯೋಜನೆ ಹಾಕಿಕೊಂಡಿದ್ದು, ಸಾಧಕರ ಕಿರು ಹೊತ್ತಿಗೆ, ನನ್ನ ಜಿಲ್ಲೆ ನನ್ನ ಸಾಹಿತಿ, ನನ್ನ ಜಿಲ್ಲೆ ನನ್ನ ಪರಂಪರೆ ವಿಶೇಷ ಕಾರ್ಯಕ್ರಮ ಆಯೋಜನೆ, ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳು ಬೇರೆ ಬೇರೆ ಸಾಹಿತಿ ಕವಿಗಳ ಪರಿಚಯಿಸುವ ಬಗ್ಗೆ ಸಂಕಲ್ಪ ಮಾಡಿದ್ದೇನೆ ಎಂದರು.
ಖ್ಯಾತ ವ್ಯಂಗ್ಯಚಿತ್ರಕಾರ ವೆಂಕಟೇಶ ಇನಾಮದಾರ ಮಾತನಾಡಿ, ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾಡೋಜ ಮಹೇಶ ಜೋಶಿ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ.ಭಂಡಾರಿ, ಎಸ್.ಬಿ.ಕಟಗಿ, ಎ.ಪಿ.ಮೇಟಿ, ಸಿ.ಎಂ.ಕಲ್ಲೂರ, ಉಜ್ವಲ ಬಸರಿ, ಡಿ.ವೈ.ಹೊಸಮನಿ, ವೈ. ಎಫ್.ಶರೀಫ, ಶಿವು ಇಟಗಿ, ಎಸ್.ಎಲ್.ರಾಠೊಡ, ಆರ್.ಆರ್.ಕಟ್ಟಿ ಹಾಜರಿದ್ದರು.