Advertisement

ಸರಕಾರಿ ಆಸ್ಪತ್ರೆ ಮೇಲೆ ಆಯೋಗದ ಕಡಿವಾಣ

06:00 AM Nov 23, 2017 | Team Udayavani |

ಬೆಳಗಾವಿ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಉದ್ದೇಶದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ (ತಿದ್ದುಪಡಿ) ಮಸೂದೆಗೆ ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ ಸಿಕ್ಕಿದೆ. ಇದೇ ವೇಳೆ ಸರಕಾರಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸ್ವತಂತ್ರ ಆಯೋಗ ರಚಿಸುವು ದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ ಕುಮಾರ್‌ ಪ್ರಕಟಿಸಿದ್ದಾರೆ.

Advertisement

ವಿಧಾನಸಭೆಯಲ್ಲಿ ಅಂಗೀಕಾರವಾಗಿರುವ ಮಸೂದೆಯಲ್ಲಿ ಕರ್ತವ್ಯ ನಿರ್ಲಕ್ಷ é ಅಥವಾ ಲೋಪ ಎಸಗಿದ ವೈದ್ಯರಿಗೆ ಜೈಲು ಶಿಕ್ಷೆಯ ಪ್ರಸಾವ ಇಲ್ಲ. ದಂಡದ ಮೊತ್ತ ಹೆಚ್ಚಿಸಲಾಗಿದೆ. ಆದರೆ, ನೋಂದಣಿ ಮಾಡಿಕೊಳ್ಳದ ವೈದ್ಯರು ಮತ್ತು ನಕಲಿ ವೈದ್ಯರ ವಿಚಾರದಲ್ಲಿ ಜೈಲು ಶಿಕ್ಷೆ ವಿಧಿಸುವ ವಿಚಾರದಿಂದ ಹಿಂದೆ ಸರಿಯುವುದಿಲ್ಲ. ಅಲ್ಲದೆ, ಚಿಕಿತ್ಸಾ ದರಪಟ್ಟಿ ಸರಕಾರ ಸಿದ್ಧಪಡಿಸುವುದಿಲ್ಲ. ವೈದ್ಯರು, ತಜ್ಞರು ಸೇರಿ ದರ ನಿಗದಿಪಡಿಸಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಆಯೋಗ ರಚನೆ: ಮಸೂದೆಗೆ ಸದನದ ಅನುಮೋದನೆ ಕೋರಿ ಮಾತನಾಡಿದ ಸಚಿವರು, ಸರಕಾರಿ ಆಸ್ಪತ್ರೆಗಳ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ಆಯೋಗ ರಚಿಸುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದ್ದು, ಮುಂದಿನ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ತರಲಾಗುವುದು ಎಂದು ಹೇಳಿದರು.ಗುಣಮಟ್ಟದ ಚಿಕಿತ್ಸೆ, ಸೌಲಭ್ಯಗಳು, ಆಸ್ಪತ್ರೆಗಳ ನಿಯಂತ್ರಣ ವಿಚಾರದಲ್ಲಿ ಖಾಸಗಿ ಅಥವಾ ಸರಕಾರಿ ಆಸ್ಪತ್ರೆಗಳನ್ನು

ಸರಕಾರ ಪ್ರತ್ಯೇಕಿಸಿ ನೋಡುವುದಿಲ್ಲ. ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಕ್ಕೆ ಮಸೂದೆ ತರಲಾಗಿದೆ. ಆದೇ ರೀತಿ ಸರಕಾರಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸ್ವತಂತ್ರ ಆಯೋಗ ರಚಿಸಲಾಗುವುದು ಎಂದರು.

ಎರಡು ಪ್ರತ್ಯೇಕ ಪ್ರಾಧಿಕಾರಗಳು: ನೋಂದಣಿ ಮತ್ತು ಕುಂದುಕೊರತೆ ನಿವಾರಣ ಪ್ರಾಧಿಕಾರ ಇವೆರಡು ಪ್ರತ್ಯೇಕವಾಗಿ ಕಾರ್ಯನಿರ್ವ ಹಿಸಲಿದ್ದು, ಜಿಲ್ಲಾಧಿಕಾರಿಗಳು ಎರಡೂ ಪ್ರಾಧಿ ಕಾರಗಳ ಮುಖ್ಯಸ್ಥರಾಗಿರುತ್ತಾರೆ. ದುಬಾರಿ ಶುಲ್ಕ ಮತ್ತಿತರ ದೂರುಗಳು ಬಂದು ಅವು ಸಾಬೀತಾ ದರೆ ದಂಡ ವಿಧಿಸಲಾಗುವುದು ಎಂದರು.

Advertisement

ಆಸ್ಪತ್ರೆಗೆ ಚಿಕಿತ್ಸೆಗೆ ಹೋದ ರೋಗಿ ಮೃತಪಟ್ಟರೆ ಚಿಕಿತ್ಸಾ ಶುಲ್ಕ ಸಿಗುವುದಿಲ್ಲ ಎಂಬ ಆತಂಕ ಖಾಸಗಿ ಆಸ್ಪತ್ರೆಯವರಿಗೆ ಬೇಡ. ಬಹುತೇಕ ಎಲ್ಲರನ್ನೂ ನಾವು ಯೂನಿವರ್ಸಲ್‌ ಹೆಲ್ತ್‌ ಯೋಜನೆಯಡಿ ತರುತ್ತಿದ್ದೇವೆ. ಅಷ್ಟಕ್ಕೂ ಹಣ ಭರಿಸುವ ಬಾಧ್ಯತೆ ಸರಕಾರದ್ದು. ಆದರೆ, ಹಣ ಇಲ್ಲ ಎಂದು ಹೆಣ ಕೊಡದಿರುವುದು ನಾಗರಿಕ ಸಮಾಜಕ್ಕೆ ಭೂಷಣ ಅಲ್ಲ ಎಂದು ಹೇಳಿದರು.

ಇಂಥದ್ದೊಂದು ಮಸೂದೆ ತರುತ್ತಿರುವುದು ಇಡೀ ದೇಶದಲ್ಲಿ ಕರ್ನಾಟಕ ಮೊದಲ ರಾಜ್ಯ. ಆದರೆ, ಇದರಿಂದ ನಾಳೆಯೇ ಸ್ವರ್ಗ ಸೃಷ್ಟಿಯಾಗುತ್ತದೆ ಎಂದು ನಾನು ಹೇಳುವುದಿಲ್ಲ. ಶಾಸಕರು ಒಮ್ಮೆ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟರೆ, ವೈದ್ಯರು ಪುಣ್ಯಕೋಟಿ ಪದ್ಯವನ್ನು ಒಮ್ಮೆ ಓದಿಕೊಂಡರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
– ರಮೇಶ್‌ಕುಮಾರ್‌, ಆರೋಗ್ಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next