ಭೋಪಾಲ್/ಜೈಪುರ: ಕರ್ನಾಟಕ ಮಾದರಿ ಗ್ಯಾರಂಟಿ ಜತೆಗೆ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಗೆಲ್ಲುವ ನಿಟ್ಟಿನಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ)ಗಳ ಅಭಿವೃದ್ಧಿಗಾಗಿ ಆಯೋಗ ರಚಿಸುವ ವಾಗ್ಧಾನ ಮಾಡಿದೆ.
ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿದ ಮಾಜಿ ಸಿಎಂ ಕಮಲ್‌ನಾಥ್ ಒಬಿಸಿ ವರ್ಗದ ಜನರ ಹಿತರಕ್ಷಣೆಗೆ ಕಾಂಗ್ರೆಸ್ ಬದ್ಧವಾಗಿದೆ. ಅದಕ್ಕಾಗಿ ಪ್ರತ್ಯೇಕ ಆಯೋಗ ರಚನೆ ಮಾಡ ಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಆ ಆಯೋಗಕ್ಕೆ ಸಮಾನ ಅವಕಾಶಗಳ ಆಯೋಗ ಎಂದೂ ಹೆಸರು ನೀಡಿದ್ದಾರೆ ಕಾಂಗ್ರೆಸ್ ನಾಯಕ. ಇದೇ ವೇಳೆ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಇನ್ನೂ ಹಲವು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ, ಸರಕಾರಿ ಪರೀಕ್ಷೆಗಳ ಪ್ರವೇಶ ಪರೀಕ್ಷೆ ಶುಲ್ಕವನ್ನು ಮನ್ನಮಾಡುವುದಾಗಿ ಕಾಂಗ್ರೆಸ್‌ನ ಮತ್ತೂಬ್ಬ ನಾಯಕ ಪ್ರದೀಪ್ ಜೈನ್ ಆದಿತ್ಯ ಹೇಳಿದ್ದಾರೆ. ನ.17ರಂದು ನಡೆಯಲಿರುವ ಮತದಾನಕ್ಕಾಗಿ 3,832 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ವರಿಷ್ಠರಿಂದಲೇ ನಿರ್ಧಾರ: ಇದೇ ವೇಳೆ, ಐದೂ ರಾಜ್ಯಗಳಲ್ಲಿಯೂ ನಾಮ ಪತ್ರ ಸಲ್ಲಿಕೆ ಬಿರುಸಾಗಿದೆ. ರಾಜಸ್ಥಾನದ ಟೋಂಕ್‌ನಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಮಾಜಿ ಡಿಸಿಎಂ ಸಚಿನ್ ಪೈಲಟ್ ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು. ಇನ್ನೊಂದೆಡೆ ಕಾಂಗ್ರೆಸ್ ರಾಜಸ್ಥಾನಕ್ಕಾಗಿ 56 ಮಂದಿ ಹೆಸರು ಇರುವ ನಾಲ್ಕನೇ ಪಟ್ಟಿ ಪ್ರಕಟಿಸಿದೆ.
ಉಳ್ಳವರ ವರ್ಸಸ್ ಪ್ರಜೆಗಳು: ತೆಲಂಗಾಣದಲ್ಲಿ ಜಮೀನ್ದಾರರು ಮತ್ತು ಸಾಮಾನ್ಯರ ನಡುವಿನ ಹೋರಾಟ ಏರ್ಪಟ್ಟಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕೊಲ್ಲ ಪುರ ಎಂಬಲ್ಲಿ ಮಾತನಾಡಿದ ಅವರು ಸೋನಿಯಾ ಗಾಂಧಿ ಅವರು ಪ್ರತ್ಯೇಕ ರಾಜ್ಯ ರಚನೆಗೆ ಸಮ್ಮತಿ ಸೂಚಿಸುವ ಮೂಲಕ ರಾಜ್ಯದ ಜನರ ಹಿತ ಕಾಪಾಡಿದ್ದಾರೆ. ನಮ್ಮ ಪಕ್ಷ ಗೆದ್ದರೆ ಜನರ ನಿರೀಕ್ಷೆ ಈಡೇರಿಸಲಿದೆ ಎಂದು ರಾಹುಲ್ ಹೇಳಿದ್ದಾರೆ.
ನ.30ರಂದು ಸಮೀಕ್ಷೆಗೆ ನಿಷೇಧ: ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ಯಲ್ಲಿ ನ.7, ನ.30ರಂದು ಟಿವಿ ಚಾನೆ ಲ್‌ಗಳು ಮತಗಟ್ಟೆ ಸಮೀಕ್ಷೆ ನಡೆಸುವಂತೆ ಇಲ್ಲ. ಆ ಎರಡು ದಿನ ಗಳಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6.30 ರ ವರೆಗೆ ಈ ನಿಯಮ ಅನ್ವಯ ವಾಗಲಿದೆ ಎಂದು ಚುನಾವಣ ಆಯೋಗ ತಿಳಿಸಿದೆ. ಈ ನಿಯಮ ಉಲ್ಲಂ ಸಿದವರಿಗೆ ಕಾನೂ ನಿನ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯೋಗ ಎಚ್ಚರಿಕೆ ನೀಡಿದೆ.