Advertisement

ಅಪಘಾತ ವ್ಯಾಜ್ಯಗಳಿಗೆ‌ ಆಯೋಗ: ಸುಪ್ರೀಂ

12:30 AM Mar 06, 2019 | Team Udayavani |

ಹೊಸದಿಲ್ಲಿ: ರಸ್ತೆ ಅಪಘಾತಗಳಿಗೆ ಸಂಬಂಧಪಟ್ಟ ಅಹವಾಲುಗಳನ್ನು ಆಲಿಸಲು, ಪರಿಹಾರ ಅಥವಾ ವಿಮಾ ಸಂಬಂಧಿ ವಿವಾದಗಳನ್ನು ತ್ವರಿತವಾಗಿ, ಸ್ನೇಹಪೂರ್ವಕವಾಗಿ ಇತ್ಯರ್ಥಗೊಳಿಸುವಂಥ ಮೋಟಾರ್‌ ಅಪಘಾತ ಮಧ್ಯಸ್ಥಿಕೆ ಆಯೋಗವನ್ನು (ಎಂಎಎಂಎ) ಅಸ್ತಿತ್ವಕ್ಕೆ ತರುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. 

Advertisement

ರಸ್ತೆ ಅಪಘಾತಗಳು ದಿನೇ ದಿನೆ ಹೆಚ್ಚುತ್ತಿದ್ದು, ಅವುಗಳಿಗೆ ಸಂಬಂಧಪಟ್ಟ ವ್ಯಾಜ್ಯಗಳೂ ಗಣನೀಯವಾಗಿ ಹೆಚ್ಚಳವಾಗಿವೆ. ಹಾಗಾಗಿ, ಅಂಥ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ಯಾವುದಾದರೊಂದು ಸರ್ಕಾರಿ ಸಂಸ್ಥೆಯ ಮಧ್ಯಪ್ರವೇಶವು ಅನಿವಾರ್ಯ ಎಂದೆನಿಸುತ್ತಿರುವುದರಿಂದ ಈ ಕುರಿತಂತೆ ಪರಿಶೀಲಿ ಸಬೇಕು. ಎಂಎಎಂಎ ಸ್ಥಾಪನೆಯು ಔಚಿತ್ಯವೆಂದೆ ನಿಸಿದರೆ, ಅದಕ್ಕಾಗಿ ಮೋಟಾರ್‌ ವಾಹನ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಸುಪ್ರೀಂ ಕೋರ್ಟ್‌, ಕೇಂದ್ರ ಸರಕಾರಕ್ಕೆ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next