Advertisement
ಬೆಂಗರೆ ನಿವಾಸಿಗಳಾದ ಮುನ್ನ (35) ಮತ್ತು ಫಾರೂಕ್ (38) ಬಂಧಿತರು. ಪ್ರಮುಖ ಆರೋಪಿಗಳು ಪತ್ತೆಯಾಗಿಲ್ಲ.
ನಗರದ ಉದ್ಯಮಿಯೊಬ್ಬರು ಜಾಗ ಖರೀದಿಸಲು ನಿರ್ಧರಿಸಿ ಹ್ಯಾರಿಸ್ ಎಂಬಾತನಿಗೆ ತಿಳಿಸಿದ್ದರು. ಅದರಂತೆ ಹ್ಯಾರಿಸ್ ಜಾಗವೊಂದನ್ನು ತೋರಿಸಿದ್ದ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದಾಗ ಅಸಮಾಧಾನಗೊಂಡ ಉದ್ಯಮಿ ಆ ಜಾಗ ಖರೀದಿಸುವ ಯೋಜನೆ ಕೈಬಿಟ್ಟಿದ್ದರು. ನಾಲ್ಕು ವರ್ಷಗಳ ಬಳಿಕ ಅದೇ ಜಾಗವನ್ನು ಉದ್ಯಮಿಗೆ ಬೇರೊಬ್ಬರು ತೋರಿಸಿದ್ದು, ಅವರ ಮುಖೇನ ಜಾಗವನ್ನು ಖರೀದಿಸಿದ್ದರು. ಈ ವಿಷಯ ಹ್ಯಾರಿಸ್‌ಗೆ ಗೊತ್ತಾಗಿ ಉದ್ಯಮಿ ಬಳಿ “ಜಾಗ ಮೊದಲು ತೋರಿಸಿದ್ದು ನಾನು. ನನಗೆ ಕಮಿಷನ್ ನೀಡಬೇಕು’ ಎಂದು ಬೇಡಿಕೆ ಮಂಡಿಸಿದ್ದ. ಅದಕ್ಕೆ ಒಪ್ಪದ ಉದ್ಯಮಿ “ನಾನು ಜಾಗ ಖರೀದಿ ಮಾಡಿದ್ದು ಬೇರೆ ವ್ಯಕ್ತಿಯ ಮುಖಾಂತರ. ನಿನಗೆ ಕಮಿಷನ್ ನೀಡುವ ಅಗತ್ಯವಿಲ್ಲ’ ಎಂದು ಹೇಳಿದ್ದರು. ಇದು ಹ್ಯಾರಿಸ್ ಕೋಪಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಹ್ಯಾರಿಸ್ ವಿಷಯವನ್ನು ಬೆಂಗ್ರೆಯ ಫಾರೂಕ್‌ಗೆ ತಿಳಿಸಿದ್ದ. ಹೇಗಾದರೂ ಮಾಡಿ ಉದ್ಯಮಿಯಿಂದ ಕಮಿಷನ್ ಪಡೆದುಕೊಳ್ಳಲೇ ಬೇಕೆಂದು ಇಬ್ಬರೂ ತೀರ್ಮಾನಿಸಿ ಬೆಂಗ್ರೆಯ ಮುನ್ನಾನಿಗೆ ವಿಷಯ ತಿಳಿಸಿದ್ದರು. ಮುನ್ನಾ ವಿಷಯವನ್ನು ಟಾರ್ಗೆಟ್ ಗ್ಯಾಂಗ್‌ನ ಉಮರ್ ಫಾರೂಕ್, ತೌಸೀರ್, ಸಮೀರ್‌ಗೆ ತಿಳಿಸಿದ್ದರು. ಈ ಮೂಲಕ ಟಾರ್ಗೆಟ್ ಗ್ರೂಪ್ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿತ್ತು.
Related Articles
Advertisement