ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿರುವ ಬೆನ್ನಲ್ಲೇ ಸಿಸಿ ಪಾಟೀಲ್ ಕೆಂಪಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುತ್ತಿಗೆದಾರರ ಸಂಘಕ್ಕೆ ಕೆಂಪಣ್ಣ ಚುನಾಯಿತ ಅಧ್ಯಕ್ಷರಾ? ಎಷ್ಟು ವರ್ಷದಿಂದ ಅಧ್ಯಕ್ಷರಾಗಿದ್ದಾರೆ? ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆದಾರಿಗೆ ಅನ್ಯಾಯ ಆಗಿದೆ ಎಂದು ಈವರೆಗೆ ದೂರು ನೀಡಿದ್ದಾರಾ? ಎಷ್ಟು ವರ್ಷದಿಂದ ಇವರು ಗುತ್ತಿಗೆದಾರರಾಗಿದ್ದಾರೆ? ಎಂದು ಸಿಸಿ ಪಾಟೀಲ್ ಕೆಂಪಣ್ಣ ವಿರುದ್ಧ ಪ್ರಶ್ನೆಗಳ ಸುರಿಮಳೆ ಮಾಡಿದರು.
ಈ ಹಿಂದೆ ಒಮ್ಮೆ ಭೇಟಿಯಾದಾಗ ಇಂತಹ ಅಸಂವಿಧಾನಿಕ ಪದ ಬಳಕೆ ಮಾಡಿದ್ದೀರಲ್ಲಾ ಎಂದು ಪ್ರಶ್ನೆ ಮಾಡಿದ್ದೆ, ಅದಕ್ಕೆ ಯಾರೋ ಬರೆದುಕೊಡುತ್ತಾರೆ ಅದನ್ನು ನಾನು ನೀಡಿದ್ದೇನೆ ಎಂದಿದ್ದರು. ಯಾರದೋ ನಿರ್ದೇಶನದ ಮೇರೆಗೆ ಕೆಂಪಣ್ಣ ಕೆಲಸ ಮಾಡ್ತಿದ್ದಾರೆ ಎಂದು ಅವರು ಆರೋಪ ಆರೋಪಿಸಿದರು.
ಗುತ್ತಿಗೆದಾರರಿಗೆ ನ್ಯಾಯ ಕೊಡಿಸುವ ಪ್ರಯತ್ನ ಕೆಂಪಣ್ಣ ಮಾಡಿಲ್ಲ ಈವರೆಗೂ ನೀವು ಬಾಯಿ ಚಪಲಕ್ಕಾಗಿ ನೀವು ಹೇಳಬಹುದು. ಆದರೆ, ಕರ್ನಾಟಕದ ಹೊರಗೆ ರಾಜ್ಯದ ಮಾನ ಮರ್ಯಾದೆ ಏನು ಎಂದು ಆಲೋಚನೆ ಮಾಡಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
224 ಶಾಸಕರು ಭ್ರಷ್ಟ ಅಂದಿದ್ದೀರಿ, ಇದರಲ್ಲಿ ನಾನು ಸಿದ್ದರಾಮಯ್ಯ, ಡಿಕೆಶಿ ಕೂಡಾ ಒಳಗೊಂಡಂತಾಯಿತು ಇದೊಂದು ರಾಜಕೀಯ ಆರೋಪ ಕೆಂಪಣ್ಣ ಕಾನೂನು ಹೋರಾಟಕ್ಕೆ ರೆಡಿ ಇದ್ದರೆ ಕಾನೂನು ಹೋರಾಟಕ್ಕೆ ನಾನು ಸಿದ್ದ ಇದ್ದೇವೆ ಎಂದರು.