Advertisement

ವಾಣಿಜ್ಯ ತೆರಿಗೆ ಮಂಗಳೂರು ವಲಯ ಜಂಟಿ ಆಯುಕ್ತರಿಗೆ ಭಡ್ತಿ

03:50 AM Jul 09, 2017 | Team Udayavani |

ಮಹಾನಗರ: ವಾಣಿಜ್ಯ ತೆರಿಗೆ ಇಲಾಖೆ(ಜಾರಿ) ಮಂಗಳೂರು ವಲಯದ ಜಂಟಿ ಆಯುಕ್ತರಾಗಿದ್ದ ಬಿ.ಎ. ನಾಣಿಯಪ್ಪ ಅವರಿಗೆ ಭಡ್ತಿ ನೀಡಿ ರಾಜ್ಯ ವಾಣಿಜ್ಯ ತೆರಿಗೆ ಅಪರ ಆಯುಕ್ತ (ಗುಪ್ತ ವಾರ್ತೆ ಸಮನ್ವಯ)ರಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ತೆರವಾದ ಅವರ ಸ್ಥಾನಕ್ಕೆ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೇಮಾಜಿ ನಾಯಕ್‌ ನೇಮಕಗೊಂಡಿದ್ದಾರೆ. ಇದೇ ವೇಳೆ ವಾಣಿಜ್ಯ ತೆರಿಗೆ ಇಲಾಖೆಯ ಡಿ.ಸಿ.ಕೃಷ್ಣ ಕುಮಾರ್‌ ಅವರನ್ನು ಬೆಂಗಳೂರು ವಲಯ ವಿಭಾಗಕ್ಕೆ ವರ್ಗಾಯಿಸಲಾಗಿದೆ. 

Advertisement

2015ರ ಆಗಸ್ಟ್‌ನಲ್ಲಿ ಮಂಗಳೂರು ವಲಯದ ಜಂಟಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದ ನಾಣಿಯಪ್ಪ, ರಾಜ್ಯದಲ್ಲೇ ಅತಿ ಹೆಚ್ಚು ದಂಡ ಮತ್ತು ತೆರಿಗೆ ಸಂಗ್ರಹಿಸಿದ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2015-16ರಲ್ಲಿ 1.95 ಕೋಟಿ ರೂ. ದಂಡ, 11.37 ಕೋಟಿ ತೆರಿಗೆ ವಸೂಲಾತಿಯಾಗಿದೆ. 2016-17ರಲ್ಲಿ 2.71 ಕೋಟಿ ರೂ. ದಂಡ, 18.60 ಕೋಟಿ ರೂ.ತೆರಿಗೆ ವಸೂಲಾತಿ ಯಾಗಿದೆ. 

ನಾಣಿಯಪ್ಪ ಕೈಗೊಂಡಿದ್ದ ಕಠಿಣ ಕಾನೂನು ಕ್ರಮಗಳಿಂದ ಮಂಗಳೂರಿನಿಂದ ಸಾಗಾಟ ವಾಗುತ್ತಿದ್ದ ಅಕ್ರಮ ಅಡಿಕೆ ಸಾಗಾಟ ಸಂಪೂರ್ಣ ಸ್ಥಗಿತಗೊಂಡಿತ್ತು. ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಕಮಿಷನರ್‌ ಆಗಿ ನಿಯುಕ್ತಿಗೊಂಡಿದ್ದ ನಾಣಿಯಪ್ಪ ಹುಬ್ಬಳ್ಳಿ, ಬೆಂಗಳೂರು, ಹಾಸನ, ಗುಲ್ಬರ್ಗಗಳಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. 2011ರಲ್ಲಿ ಯು.ಎಸ್‌.ಎ.ನ ನಾರ್ತ್‌ ಕರೊಲಿನಾದ ಡ್ನೂಕ್ಸ್‌ ಯುನಿವರ್ಸಿಟಿಯಲ್ಲಿ ಒಂದು ತಿಂಗಳ ಕಾಲ ನಡೆದ ವ್ಯಾಟ್ಸ್‌ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯವನ್ನು ಅವರು ಪ್ರತಿನಿಧಿಸಿದ್ದಾರೆ.

“ಇಲಾಖೆಯ ಡಿ.ಸಿ. ಕೃಷ್ಣ ಕುಮಾರ್‌, ಎ.ಸಿ.ವಿಜಯ ಕುಮಾರ್‌, ಮಹಿಳಾ ಅಧಿಕಾರಿಗಳು ಮತ್ತು ಸಿಬಂದಿ ಸಹಕಾರದಿಂದ ಗರಿಷ್ಠ ದಂಡ ಮತ್ತು ತೆರಿಗೆ ವಸೂಲಾತಿಯಾಗಿದೆ’ ಎಂದು ನಾಣಿಯಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next