ಹೊಸದಿಲ್ಲಿ: ಹೊಸ ವರ್ಷ ಮತ್ತು ಕ್ರಿಸ್‌ಮಸ್‌ಗೆ ಮುನ್ನ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ವಾಣಿಜ್ಯ ಎಲ್‌ಪಿಜಿ ಬೆಲೆಯಲ್ಲಿ ಪರಿಷ್ಕರಣೆ ಮಾಡಿ ಶುಕ್ರವಾರ ಪ್ರಕಟಿಸಿವೆ.
19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು 39.50 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ಹೊಸ ದರಗಳು ಇಂದಿನಿಂದ (22 ಡಿಸೆಂಬರ್) ಜಾರಿಗೆ ಬರುತ್ತವೆ.
ಬೆಲೆ ಇಳಿಕೆಯ ನಂತರ, ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟದ ಬೆಲೆ ಈಗ 1757.50 ರೂ. ಇದೆ.
ವಾಣಿಜ್ಯ ಮತ್ತು ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಗಳ ಮಾಸಿಕ ಪರಿಷ್ಕರಣೆಗಳು ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನದಂದು ನಡೆಯುತ್ತದೆ. ಈ ಬಾರಿ ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಬೆಲೆಯಲ್ಲಿ ಮಾತ್ರ ಪರಿಷ್ಕರಣೆಯಾಗಿದೆ.
19 ಕೆಜಿಯ ವಾಣಿಜ್ಯ ಸಿಲಿಂಡರ್ ಈಗ ದೆಹಲಿಯಲ್ಲಿ ರೂ 1757.50, ಕೋಲ್ಕತ್ತಾದಲ್ಲಿ ರೂ 1868.50, ಮುಂಬೈನಲ್ಲಿ ರೂ 1710 ಮತ್ತು ಚೆನ್ನೈನಲ್ಲಿ ರೂ 1929 ಕ್ಕೆ ಲಭ್ಯವಿರುತ್ತದೆ.