Advertisement
ಈ ವೇಳೆ ಮಾತನಾಡಿದ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಮುಂದಿನ ಕೌನ್ಸಿಲ್ ಸಭೆಯಲ್ಲಿ ನಗರಪಾಲಿಕೆ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳಿಗೆ ಇರುವ ಕಮರ್ಷಿಯಲ್ ಎ ಮತ್ತು ಬಿ ಎಂಬ ವಿಭಾಗಗಳನ್ನು ತೆಗೆದುಹಾಕಿ ವಾಣಿಜ್ಯ ಎಂಬ ಒಂದೇ ವಿಭಾಗದಡಿ ಎಲ್ಲ ವಾಣಿಜ್ಯ ಆಸ್ತಿಗಳೂ ಸೇರುವಂತೆ ಮಾಡಲಾಗುತ್ತದೆ.
Related Articles
Advertisement
ಕಟ್ಟಡ ಹಳೆಯದಾದಂತೆ ಆ ಶುಲ್ಕವೂ ಕಡಿಮೆಯಾಗಬೇಕು ಎಂಬ ವಿಷಯವನ್ನು ಕೌನ್ಸಿಲ್‌ನಲ್ಲಿ ಇಡಲಾಗುತ್ತದೆ. ಅಲ್ಲದೆ ಬಿ ಖಾತಾ ಪದ್ಧತಿಯನ್ನೂ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತದೆ. ಇದರಿಂದಾಗಿ ಪಾಲಿಕೆಯ ಆದಾಯ ಹೆಚ್ಚಾಗಲಿದೆ ಎಂದು ತಿಳಿಸಿದರು.
ಲೋಪ ಸರಿಪಡಿಸಿ: ಮಾಜಿ ಮೇಯರ್ ಭೈರಪ್ಪ ಮಾತನಾಡಿ, ಸೆಟ್ ಬ್ಯಾಕ್ ಸ್ಥಳಕ್ಕೂ ಪಾಲಿಕೆ ತೆರಿಗೆ ವಿಧಿಸುತ್ತಿರುವುದು ತಪ್ಪು. ಕೆಲವರು ದಶಗಳಿಂದ ತೆರಿಗೆ ಪಾವತಿಸಿಲ್ಲದಿದ್ದರೂ ಅವರನ್ನು ಕೇಳದೆ ಕೇವಲ ಎರಡು-ಮೂರು ವರ್ಷಗಳಿಂದ ತೆರಿಗೆ ಕಟ್ಟಿಲ್ಲದವರ ಆಸ್ತಿಗಳಿಗೆ ಬ್ಯಾನರ್ ಹಾಕಲಾಗುತ್ತಿದೆ. ಇನ್ನು ಕೆಲವರು ತೆರಿಗೆ ಕಟ್ಟಲು ತಯಾರಿದ್ದರೂ ಕಟ್ಟಿಸಿಕೊಳ್ಳಲು ಸಿಬ್ಬಂದಿ ತಯಾರಿಲ್ಲ. ಆನ್‌ಲೈನ್ ತೆರಿಗೆ ಪಾವತಿ ವ್ಯವಸ್ಥೆಯಲ್ಲೂ ಹಲವು ಲೋಪದೋಷಗಳಿವೆ.
ಅದನ್ನು ಸರಿಪಡಿಸಬೇಕು ಎಂದರು. ಸಭೆಯಲ್ಲಿ ಒಕ್ಕೂಟದ ಕಾರ್ಯದರ್ಶಿ ಎಂ.ಆರ್. ರಾಜಾರಾಂ, ಕಲ್ಯಾಣ ಮಂಟಪಗಳ ಮಾಲೀಕರ ಸಂಘದ ಕಾರ್ಯದರ್ಶಿ ವಿನಯ್ ವೆಂಕಟೇಶ್, ಮನೋಜ್ ಶಣೈ, ಒಕ್ಕೂಟದ ಉಪಾಧ್ಯಕ್ಷ ಸಿ.ನಾರಾಯಣಗೌಡ, ಜಂಟಿ ಕಾರ್ಯದರ್ಶಿ ಕೆ.ಆರ್. ಸತ್ಯನಾರಾಯಣ, ನಿರ್ದೇಶಕರಾದ ಎಸ್.ಕೆ.ದಿನೇಶ್, ಎ.ಸುಧೀಂದ್ರ, ವೀರಭದ್ರಪ್ಪ, ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತ ಎಂ.ಎನ್.ಶಶಿಕುಮಾರ್, ಉದ್ದಿಮೆ ರಹದಾರಿ ಅಧಿಕಾರಿ ರೂಪಾ ಮತ್ತಿತರರು ಉಪಸ್ಥಿತರಿದ್ದರು.
ಅವಮಾನಿಸುವ ಬ್ಯಾನರ್ ಅಳವಡಿಕೆ ಹಾಕುವುದಿಲ್ಲ
ನಗರಪಾಲಿಕೆ ವತಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ ತೆರಿಗೆ ಕಟ್ಟದವರ ಕಟ್ಟಡಗಳಿಗೆ ಬ್ಯಾನರ್ ಹಾಕಿದ್ದಾರೆ, ಇದರಿಂದಾಗಿ ಎಲ್ಲರಿಗೂ ಅವಮಾನವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಮುಂದೆ ಹಾಗಾಗದಂತೆ ಪಾಲಿಕೆ ನೋಡಿಕೊಳ್ಳುತ್ತದೆ. ಮೂಲಭೂತ ಸೌಕರ್ಯಗಳನ್ನು ಸ್ಥಗಿತಗೊಳಿಸುತ್ತಿರುವ ಬಗ್ಗೆಯೂ ಚರ್ಚೆ ನಡೆಸಿ ಹಾಗಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಆಯುಕ್ತ ಲಕ್ಷ್ಮೀಕಾಂತರೆಡ್ಡಿ ಹೇಳಿದರು.