Advertisement

ರಬ್ಬರ್‌, ಚಹಾ, ಕಾಫಿಗೆ ಹೊಸ ಕಾಯ್ದೆ?

12:36 AM Feb 04, 2022 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರವು ರಬ್ಬರ್‌, ಚಹಾ, ಕಾಫಿ ಮತ್ತು ಸಂಬಾರ ಪದಾರ್ಥಗಳಿಗೆ ಸಂಬಂಧಿಸಿದ ಹಳೆಯ ಕಾನೂನುಗಳನ್ನು ರದ್ದುಪಡಿಸಿ ಹೊಸ ಕಾಯ್ದೆ ತರಲು ಮುಂದಾಗಿದೆ.

Advertisement

ಸಂಬಾರ ವಸ್ತುಗಳ ಮಸೂದೆ 2022, ರಬ್ಬರ್‌ ಮಸೂದೆ 2022, ಕಾಫಿ ಮಸೂದೆ 2022, ಚಹಾ ಮಸೂದೆ 2022ಗಳನ್ನು ತರಲು ಸರಕಾರ ಮುಂದಾಗಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ಕರಡು ಮಸೂದೆ ಸಿದ್ಧಪಡಿಸಿದ್ದು, ಸಂಬಂಧಪಟ್ಟ ವಲಯಗಳ ಅಭಿಪ್ರಾಯ ಆಹ್ವಾನಿಸಿದೆ. ಈ ವಲಯಗಳಿಗೆ ಉತ್ತೇಜನ ಮತ್ತು ಅನುಕೂಲಕರ ವಾತಾವರಣವನ್ನು ಕಲ್ಪಿಸುವ ದೃಷ್ಟಿಯಿಂದ ಈ ಚಿಂತನೆ ನಡೆಸಿದೆ.

ರಬ್ಬರ್‌ ಅಭಿವೃದ್ಧಿಗೆ ಸಂಬಂಧಿಸಿ ಪುರಾತನ ನಿಬಂಧನೆಗಳನ್ನು ತೆಗೆದುಹಾಕುವುದು, ವ್ಯಾಪಾರ ವನ್ನು ಸುಲಭವಾಗಿ ನಡೆಸಲು ಅನುಕೂಲಕರ ವಾತಾವರಣ ಸೃಷ್ಟಿಸುವುದು, ರಬ್ಬರ್‌ ಮಂಡಳಿಯ ಕಾರ್ಯಗಳನ್ನು ಮರುರೂಪಿಸುವುದು ಮತ್ತು ವಿಶ್ವದರ್ಜೆಯ ರಬ್ಬರ್‌ ಉದ್ಯಮವನ್ನು ರೂಪಿಸಲು ಇದು ಅನಿವಾರ್ಯ. ಕಾಫಿ ಮಂಡಳಿ ಆಧುನಿಕ ಗೊಳಿಸಲು ಹಲವಾರು ಬದಲಾವಣೆ ಮಾಡಬೇಕಾಗಿದೆ. ಉತ್ಪಾದನೆಗೆ ಬೆಂಬಲ, ಸಂಶೋಧನೆ, ಗುಣಮಟ್ಟ ಸುಧಾರಣೆ, ಕಾಫಿಯ ಉತ್ತೇಜನ ಮತ್ತು ಬೆಳೆಗಾರರ ಕೌಶಲ ಅಭಿವೃದ್ಧಿ ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next