Advertisement

ಗ್ರಾಮ ಕಾರ್ಯಪಡೆ ಆರಂಭ; ಶೀಘ್ರ “ಕೋವಿಡ್ 19 ಸೈನಿಕ’ಪಡೆ ರಂಗಕ್ಕೆ

10:27 AM Apr 04, 2020 | Sriram |

ಮಂಗಳೂರು: ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಗ್ರಾಮೀಣ ಭಾಗಗಳಲ್ಲಿಯೂ ವ್ಯಾಪಕ ಪ್ರಯತ್ನಗಳು ನಡೆಯು ತ್ತಿದ್ದು, ಆಯಾ ಗ್ರಾ.ಪಂ.ಗಳ ಪಿಡಿಒಗಳು ಇದರ ನೇತೃತ್ವ ವಹಿಸಿಕೊಂಡಿದ್ದಾರೆ.

Advertisement

ಈಗಾಗಲೇ ಗ್ರಾಮ ಮತ್ತು ಪಂಚಾ ಯತ್‌ ಕಾರ್ಯಪಡೆ ರಚನೆಯಾಗಿದೆ. ಇದಕ್ಕೆ ಬಲ ನೀಡಲು “ಕೋವಿಡ್ 19 ಸೈನಿಕರ’ ಸೇವೆ ಕೂಡ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಹೋಮ್‌ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾದಿಂದ ಆರಂ ಭಿಸಿ ಪಡಿತರ ಸಾಮಗ್ರಿ ವಿತರಣೆ, ಶಾಲಾ ಮಕ್ಕಳ ಬಿಸಿ ಯೂಟದ ಕಿಟ್‌ ವಿತರಣೆ, ನರೇಗಾ ಯೋಜನೆ ಸಮರ್ಪಕವಾಗಿ ನಡೆ ಯುವಂತೆ ನೋಡಿಕೊಳ್ಳುವುದು, ಅಗತ್ಯ ವಸ್ತುಗಳ ಲಭ್ಯತೆ ಗಮನಿಸುವುದು ಸೇರಿದಂತೆ ಹತ್ತಾರು ಜವಾಬ್ದಾರಿಗಳನ್ನು ಪಿಡಿಒಗಳು ನಿರ್ವಹಿಸುತ್ತಿದ್ದಾರೆ. ಗ್ರಾಮ ಮತ್ತು ಪಂಚಾಯತ್‌ ಮಟ್ಟಗಳ ಎರಡು ಪ್ರತ್ಯೇಕ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾಗಿಯೂ ಪಿಡಿಒಗಳೇ ಇದ್ದಾರೆ.

ಈಗ ಅತ್ಯಂತ ಪ್ರಾಮುಖ್ಯವಾಗಿರುವ ಹೋಂ ಕ್ವಾರಂಟೈನ್‌ನವರ ಮೇಲಿನ ನಿಗಾ ಕಾರ್ಯದಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯ ಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ಯರು, ಪೊಲೀಸರು, ವೈದ್ಯಾಧಿಕಾರಿಗಳ ತಂಡವನ್ನು ಸಮನ್ವಯ ಗೊಳಿಸುವ ಜವಾಬ್ದಾರಿ ಪಿಡಿಒ ಗಳದ್ದಾಗಿದೆ.

ಮಾತ್ರವಲ್ಲದೆ ಪಿಡಿಒಗಳು ದಿನಕ್ಕೊಮ್ಮೆ ಅಥವಾ ಎರಡು ದಿನಕ್ಕೊಮ್ಮೆ ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ ಮನೆಗಳಿಗೆ ತೆರಳಿ ಚಿತ್ರ, ಮಾಹಿತಿಯನ್ನು ದಾಖಲಿಸಿ ಆ್ಯಪ್‌ ಮೂಲಕ ಇಲಾಖೆಗೆ ಕಳುಹಿಸಿ ಕೊಡಬೇಕಿದೆ. ಇದರ ಜತೆಗೆ ಹಲವೆಡೆ ಚೆಕ್‌ಪೋಸ್ಟ್‌ಗಳಲ್ಲಿಯೂ ಪಿಡಿಒಗಳ ಸೇವೆ ಬಳಸಿಕೊಳ್ಳಲಾಗುತ್ತಿದೆ.

Advertisement

ಪ್ರತಿ ದಿನ ಸಭೆ
ಪಂಚಾಯತ್‌ ಮಟ್ಟದ ಕಾರ್ಯಪಡೆ ಪ್ರತಿ ಸೋಮವಾರ ಮತ್ತು ಗುರುವಾರ ಸಭೆ ಸೇರಲು ಹಾಗೂ ಗ್ರಾಮ ಮಟ್ಟದ ಕಾರ್ಯಪಡೆ ಪ್ರತಿ ದಿನ ಸಭೆ ಸೇರಲು ಸೂಚಿಸಲಾಗಿದೆ. ಪಂಚಾಯತ್‌ ಕಾರ್ಯಪಡೆ ನೀಡುವ ಸೂಚನೆಗಳನ್ನು ಗ್ರಾಮ ಮಟ್ಟದ ಕಾರ್ಯಪಡೆ ಪಾಲಿಸಬೇಕು. ಸಭೆಯ ವರದಿಯನ್ನು ಪಿಡಿಒಗಳಿಗೆ ನೀಡಬೇಕು. ನರೇಗಾದಲ್ಲಿಯೂ ಸಾಮಾಜಿಕ ಅಂತರ ಉದ್ಯೋಗ ಖಾತರಿ ಯೋಜನೆಯನ್ನು ತುರ್ತಾಗಿ ಆರಂಭಿಸುವಂತೆ ಸರಕಾರದಿಂದ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಆರಂಭಗೊಂಡಿವೆ. ನರೇಗಾದಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮೊದಲಾದ ನಿಯಮ ವಿಧಿಸಲಾಗಿದೆ.

ಕೋವಿಡ್ 19 ಸೇವಕರು ಗ್ರಾ.ಪಂ. ಮಟ್ಟದಲ್ಲಿ ಪಿಡಿಒಗಳ ನೇತೃತ್ವದ ತಂಡಕ್ಕೆ ನೆರವಾಗಲು ಕೋವಿಡ್ 19  ಸೈನಿಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಸ್ವಯಂಸೇವೆಗೆ ಉತ್ಸುಕವಾಗಿರುವವರನ್ನು ಆಯ್ಕೆ ಮಾಡಲಾಗುತ್ತದೆ. ಅವರಿಗೆ ಇಲಾಖೆ ಆನ್‌ಲೈನ್‌ನಲ್ಲಿಯೇ ಅರ್ಹತಾ ಪರೀಕ್ಷೆ ನಡೆಸಲಿದೆ. ಗ್ರಾ.ಪಂ. ಮಟ್ಟದಲ್ಲಿ ಇಂತಹ 2 ಮಂದಿ ಸೇವಕರನ್ನು ನಿಯೋಜಿಸಿಕೊಳ್ಳಲಾಗುತ್ತದೆ. ದ.ಕ ಜಿಲ್ಲೆಯಲ್ಲಿಯೂ ಗ್ರಾಮ ಮತ್ತು ಪಂಚಾಯತ್‌ ಮಟ್ಟದ ಕಾರ್ಯಪರ್ಡೆಗಳು ಕಾರ್ಯನಿರ್ವಹಿಸುತ್ತಿವೆ. ನರೇಗಾವನ್ನು ಕೂಡ ತುರ್ತಾಗಿ ಆರಂಭಿಸಲು ಆದೇಶ ಬಂದಿದೆ. ಹೊಸ ಮಾನದಂಡ ವಿಧಿಸಲಾಗಿದೆ. ಆ ಮಾನದಂಡಕ್ಕೆ ಪೂರಕವಾದ ಕಾಮಗಾರಿಗಳು ಇರುವ ಗ್ರಾ.ಪಂ.ಗಳಲ್ಲಿ ಶೀಘ್ರದಲ್ಲಿ ನರೇಗಾ ಕಾಮಗಾರಿ ಆರಂಭಿಸಲಾಗುವುದು.
-ಡಾ| ಸೆಲ್ವಮಣಿ ಆರ್‌. ಸಿಇಒ ದ.ಕ ಜಿ.ಪಂ.

Advertisement

Udayavani is now on Telegram. Click here to join our channel and stay updated with the latest news.

Next