Advertisement

ಇಂದಿನಿಂದ ಪಡುಬಿದ್ರಿ ಢಕ್ಕೆಬಲಿ ಸೇವೆಗಳ ಆರಂಭ

05:52 PM Jan 14, 2025 | Team Udayavani |

ಪಡುಬಿದ್ರಿ: ಇಲ್ಲಿನ ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಢಕ್ಕೆಬಲಿ ಸೇವೆಗಳು ಜ. 15ರಿಂದ ಆರಂಭಗೊಳ್ಳಲಿದೆ. ಈ ಬಾರಿ ದಾಖಲೆಯ 44 ಸೇವೆಗಳು ನಡೆಯಲಿದ್ದು ಮಾ. 12ರಂದು ನಡೆಯುವ ಮಂಡಲ ವಿಸರ್ಜನಾ ಸೇವಾ ಢಕ್ಕೆ ಬಲಿಯೊಂದಿಗೆ ಸಂಪನ್ನಗೊಳ್ಳಲಿದೆ.

Advertisement

ಪಡುಬಿದ್ರಿಯ ಈ ಶಕ್ತಿ ಆರಾಧನಾ ತಾಣಕ್ಕೆ ಸಂಬಂಧಪಟ್ಟ ಹೆಜಮಾಡಿ ಹಾಗೂ ಮುರುಡಿ ಬ್ರಹ್ಮಸ್ಥಾನದಲ್ಲಿ ಜ. 19 ಹಾಗೂ 21ರಂದು ನಡೆಯುವ ಸೇವೆಗಳ ಹೊರತಾಗಿ 42 ಢಕ್ಕೆಬಲಿ ಸೇವೆಗಳು ಪಡುಬಿದ್ರಿಯ ಬ್ರಹ್ಮಸ್ಥಾನದಲ್ಲೇ ನಿರ್ದಿಷ್ಟ ದಿನಗಳಲ್ಲಿ ನಡೆಯಲಿವೆ.

ಇಲ್ಲಿನ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ವನದುರ್ಗಾ ಟ್ರಸ್ಟ್‌ನ ಆಡಳಿತ ವ್ಯವಸ್ಥೆಯಲ್ಲಿನ ಈ ಬ್ರಹ್ಮಸ್ಥಾನದಲ್ಲಿನ ಢಕ್ಕೆಬಲಿ ಸೇವೆಯು ಜಿಲ್ಲೆಯ ಬೇರೆಲ್ಲೂ ಕಾಣಸಿಗದ ಬಲು ಅಪರೂಪದ ಸೇವಾ ವೈವಿಧ್ಯವಾಗಿ ಗುರುತಿಸಲ್ಪಟ್ಟಿದೆ. ಸಂಜೆಯ ಹೊರೆ ಕಾಣಿಕೆ ಮೆರವಣಿಗೆಯ ಮೂಲಕ ಈ ಪ್ರಕೃತಿ ಆರಾಧನಾ ತಾಣವಾಗಿರುವ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಫಲಪುಷ್ಪ, ಹಿಂಗಾರ, ಅಡಕೆ, ಬಾಳೆದಿಂಡು ಮುಂತಾದ ಪ್ರಕೃತಿಜನ್ಯ ವಸ್ತುಗಳಿಂದ ಈ ತಾಣವು ಸಾಲಂಕೃತಗೊಳ್ಳುತ್ತದೆ. ಆ ಬಳಿಕ ವೈದ್ಯ ವೃಂದದ ಢಕ್ಕೆ ನಿನಾದದೊಂದಿಗೆ ರಾತ್ರಿ ತಂಬಿಲ, ಢಕ್ಕೆಬಲಿ ಸೇವೆಗಳು ಮರುದಿನ ಮುಂಜಾವದವರೆಗೂ ಸಾಗಲಿವೆ. ಇದೇ ಫಲಪುಷ್ಪಗಳನ್ನು ಸೇವಾವಧಿಯ ಬಳಿಕ ಪ್ರಸಾದ ರೂಪದಲ್ಲಿ ಸಾರ್ವಜನಿಕರಿಗೆ ವಿತರಿಸಲಾಗುವುದು. ಸಾವಿರಾರು ಮಂದಿ ಭಕ್ತರು ದೊಂದಿ ಬೆಳಕಲ್ಲೇ ನಡೆಯುವ ಇಲ್ಲಿನ ಸೇವೆಯನ್ನು ಕಣ್ತುಂಬಿಸಿಕೊಳ್ಳಲು ಮರಳಲ್ಲೇ ಆಸೀನರಾಗುತ್ತಾರೆ. ಭಯರಹಿತರಾಗಿ ರಾತ್ರಿ ಕಳೆವ ಭಕ್ತರಿಗೆ ಈ ತಾಣದಲ್ಲಿ “ಮರಳು’ ಮಾತ್ರವೇ ಈ ಖಡೆYàಶ್ವರೀ ದೇವಿಯ ಪ್ರಧಾನ ಪ್ರಸಾದವೂ ಆಗಿರುತ್ತದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.