Advertisement

ಮಹಾನಗರ ಪಾಲಿಕೆಯಿಂದ ಕರ ಸಂಗ್ರಹ ಕ್ಯಾಂಪ್‌ ಆರಂಭ

03:26 PM Jan 22, 2021 | Team Udayavani |

ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಮತ್ತು ಒಳಚರಂಡಿಗಳ ಬಾಕಿ ತೆರಿಗೆ ಪಾವತಿಸುವಂತೆ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಇದಕ್ಕಾಗಿ ಗುರುವಾರದಿಂದ ಮೂರು ದಿನಗಳ ಕ್ಯಾಂಪ್‌ ಆರಂಭಿಸಲಾಗಿದೆ. ಗುರುವಾರ ಮೊದಲ ದಿನ ಕೌಂಟರ್‌ ಹಂತದಲ್ಲೇ ನೀರಿನ ತೆರಿಗೆ 21,651ರೂ. ಮತ್ತು ಒಳಚರಂಡಿ ತೆರಿಗೆ 11,145ರೂ. ಸಂಗ್ರಹಿಸಲಾಗಿದೆ. ಇದೇ ವೇಳೆ ಐದು ಅನಧಿಕೃತ ಒಳ ಚರಂಡಿ ಅ ಧಿಕೃತ
ಮಾಡಲಾಗಿದೆ. ಒಂದು ಹೊಸ ನಳದ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.

Advertisement

ಇಲ್ಲಿನ ಹಳೆ ಜೇವರ್ಗಿ ರಸ್ತೆಯಲ್ಲಿರುವ ಪಿ ಆ್ಯಂಡ್‌ ಟಿ ನೀರಿನ ಟ್ಯಾಂಕ್‌ ಹತ್ತಿರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ವತಿಯಿಂದ ಕರ ಸಂಗ್ರಹ ಕ್ಯಾಂಪ್‌ನಲ್ಲಿ ಮಾತನಾಡಿದ ಅವರು, ನಗರದಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

ತಿಂಗಳಿಗೆ 15ರೂ. ನೀರಿನ ತೆರಿಗೆ ಇದೆ. ಆದರೂ ಸಾರ್ವಜನಿಕರು ಪಾವತಿ ಮಾಡುತ್ತಿಲ್ಲ. ಹೀಗಾಗಿ ಜನರಲ್ಲಿ ನೀರಿನ ಹಾಗೂ ಒಳಚರಂಡಿ ತೆರಿಗೆ ಬಗ್ಗೆ
ಅರಿವು ಮೂಡಿಸುವುದಕ್ಕಾಗಿಯೇ ಈ ಕ್ಯಾಂಪ್‌ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜ.23ರವರೆಗೆ ಈ ಕ್ಯಾಂಪ್‌ ನಡೆಯಲಿದ್ದು, ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3ರ ವರೆಗೆ ತೆರಿಗೆ ಪಾವತಿ ಮಾಡಬಹುದು. ಪಿ ಆ್ಯಂಡ್‌ ಟಿ ನೀರಿನ ಟ್ಯಾಂಕ್‌
ಹತ್ತಿರದ ಕ್ಯಾಂಪ್‌ನಲ್ಲಿ ನೇರವಾಗಿ ಸಾರ್ವಜನಿಕರು ತೆರಿಗೆ ಪಾವತಿಸಬಹುದಾಗಿದೆ. ಅಲ್ಲದೇ, ಪಿ ಆ್ಯಂಡ್‌ ಟಿ ಕಾಲೋನಿ, ರೆಹಮತ್‌ ನಗರ, ಅಂಬಿಕಾ ನಗರ,
ತಾರಫೈಲ್‌, ಎಸ್‌ಬಿಐ ಕಾಲೋನಿ, ಬಿದ್ದಾಪುರ ಕಾಲೋನಿ, ಸಾಯಿನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪಾಲಿಕೆ ಸಿಬ್ಬಂದಿ ಮನೆ-ಮನೆ ಬಂದು ತೆರಿಗೆ ಸಂಗ್ರಹಣೆ ಮಾಡಲಿದ್ದಾರೆ ಎಂದು ವಿವರಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ನರಸಿಂಹ ರೆಡ್ಡಿ, ಮಹಾನಗರ ಪಾಲಿಕೆ ಕಾರ್ಯಪಾಲಕ
ಅಭಿಯಂತರ ಚಂದ್ರರೆಡ್ಡಿ, ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್‌.ಎನ್‌.ಸ್ವಾಮಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next