Advertisement

ಹುತಾತ್ಮನ ತಂಗಿಯ ಮದುವೆ ನೆರವೇರಿಸಿದ ಕಮಾಂಡೋಗಳು

12:38 AM Jun 17, 2019 | Sriram |

ಹೊಸದಿಲ್ಲಿ: ಬಿಹಾರದ ಪಟನಾದಲ್ಲಿ ನಡೆದ ಮದುವೆಯ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಏಕೆಂದರೆ, ಮದುವೆಗೆ ಬಂದಿದ್ದ ಭಾರತೀಯ ವಾಯುಪಡೆಯ ಗರುಡ ಕಮಾಂಡೋಗಳು ನೆಲದ ಮೇಲೆ ತಮ್ಮ ಅಂಗೈಗಳನ್ನು ಇಟ್ಟು, ಅವುಗಳ ಮೇಲೆ ವಧುವನ್ನು ನಡೆಸಿದ್ದಾರೆ. ತಮ್ಮ ಅಂಗೈಗಳ ಮೇಲೆ ವಧುವು ಪಾದ ಗಳನ್ನಿಟ್ಟುಕೊಂಡು ಸಾಗುತ್ತಿರುವಂತೆ, ಯೋಧರು ಅಗಲಿದ ತಮ್ಮ ಸ್ನೇಹಿತನನ್ನು ನೆನೆದು ಭಾವುಕರಾಗಿದ್ದಾರೆ.

ಹೌದು, 2017ರಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಗರುಡ ಕಮಾಂಡೋ ಜ್ಯೋತಿಪ್ರಕಾಶ್‌ ನಿರಾಲಾ ಅವರ ತಂಗಿಯ ಮದುವೆ ಯನ್ನು ಯೋಧರೇನಿಂತು ಮಾಡಿಸಿ ಕೊಟ್ಟಿದ್ದಾರೆ. ಆ ಮೂಲಕ ತಮ್ಮ ಸ್ನೇಹಿತನಿಗೆ ಗೌರವ ಸಲ್ಲಿಸಿದ್ದಾರೆ.

ಎನ್‌ಕೌಂಟರ್‌ನಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಿದ್ದ ನಿರಾಲಾ ಅವರಿಗೆ ಕಳೆದ ವರ್ಷದ ಭಾರತ ಸರಕಾರವು ಮರಣೋತ್ತರ ಅಶೋಕ ಚಕ್ರ ನೀಡಿ ಗೌರವಿಸಿತ್ತು. ಅವರ ಕುಟುಂಬವು ಜೀವನೋಪಾಯಕ್ಕಾಗಿ ನಿರಾಲಾ ಅವರನ್ನೇ ಅವಲಂಬಿಸಿತ್ತು. ಜತೆಗೆ, ಅವರಿಗೆ ನಾಲ್ವರು ಸಹೋದರಿಯರೂ ಇದ್ದರು. ನಿರಾಲಾರ ನಿಧನದಿಂದಾಗಿ ಆಘಾತಕ್ಕೊಳಗಾಗಿದ್ದ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿತ್ತು. ಅವರ ಆರ್ಥಿಕ ಸಂಕಷ್ಟವನ್ನು ಅರಿತ ನಿರಾಲಾರ ಸಹೋದ್ಯೋಗಿಗಳು ಹಾಗೂ ಗೆಳೆಯರು 5 ಲಕ್ಷ ರೂ.ಗಳನ್ನು ಸಂಗ್ರಹಿಸಿ, ನಿರಾಲಾ ಸಹೋದರಿಯ ಮದುವೆ ನೆರ ವೇರಿಸಿದ್ದಾರೆ. ಅವರ ಈ ಪ್ರೀತಿಗೆ ದೇಶವೇ ಶಹಬ್ಟಾಸ್‌ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next