Advertisement

ಬರಲಿವೆ ಪ್ರೀಪೇಯ್ಡ್ ವಿದ್ಯುತ್‌ ಮಾಪನಗಳು

10:57 PM Feb 01, 2020 | Lakshmi GovindaRaj |

ಇಂಧನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಒಂದು ವೇಳೆ ಅವು ಪರಿಣಾಮಕಾರಿಯಾಗಿ ಜಾರಿಯಾದಲ್ಲಿ ಕ್ರಾಂತಿಕಾರಕ ಪರಿಣಾಮ ಬೀರಬಲ್ಲದು. ಇದೇ ವೇಳೆ ವಿದ್ಯುತ್‌ ಮತ್ತು ನವೀಕರಿಸಬಹುದಾದ ಇಂಧನ ವಲಯಕ್ಕೆ ಕೇಂದ್ರ 22,000 ಕೋಟಿ ರೂ. ನೀಡಿದೆ.

Advertisement

ಪ್ರೀಪೇಯ್ಡ್ ಮಾಪನಗಳು: ಇಲ್ಲಿಯವರೆಗೆ ಭಾರತೀಯ ವಿದ್ಯುತ್‌ ಕ್ಷೇತ್ರದಲ್ಲಿ ತಿಂಗಳಿಗೊಮ್ಮೆ ಅಂದರೆ ವಿದ್ಯುತ್‌ ಬಳಸಿದ ನಂತರ ಮೀಟರ್‌ ಲೆಕ್ಕಾಚಾರದಲ್ಲಿ ಶುಲ್ಕ ಪಾವತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಬದಲಿಸಿ, ಆರಂಭದಲ್ಲೇ ಹಣ ನೀಡಿ ವಿದ್ಯುತ್‌ ಖರೀದಿಸುವ ಪ್ರೀಪೇಯ್ಡ್ ಮಾಪನಗಳನ್ನು ಜಾರಿಗೆ ತರಲು ತೀರ್ಮಾನಿಸಿದೆ. ಇದು ಪ್ರೀಪೇಯ್ಡ್ ಮೊಬೈಲ್‌ ಸಿಮ್‌ ಮಾದರಿಯನ್ನು ಹೋಲುತ್ತದೆ.

ಗ್ರಾಹಕರಿಗೆ ಮತ್ತು ವಿದ್ಯುತ್‌ ಹಂಚಿಕೆದಾರ ಕಂಪನಿಗಳಿಗೆ ಈ ಅವಕಾಶವನ್ನು ನೀಡಲಾಗುತ್ತದೆ. ಕೇಂದ್ರದ ಈ ಉದ್ದೇಶದಲ್ಲಿ ರಾಜ್ಯಸರ್ಕಾರಗಳ ಪಾತ್ರವೂ ಮಹತ್ವದ್ದಿದೆ. ಸಾಂಪ್ರದಾಯಿಕ ಮಾಪನಗಳ ಬದಲಿಗೆ ಹೊಸ ಪ್ರೀಪೇಯ್ಡ್ ಮಾಪನಗಳನ್ನು ಅಳವಡಿಸಲು ರಾಜ್ಯ ಸರ್ಕಾರ ಮುಂದಿನ ವರ್ಷಗಳಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದೆ.

27,000 ಕಿ.ಮೀ. ಅನಿಲ ಪೈಪ್‌ಲೈನ್‌ ಗ್ರಿಡ್‌: ಸದ್ಯ 16,000 ಕಿ.ಮೀ. ವ್ಯಾಪ್ತಿಯಲ್ಲಿ ಸಹಜ ಅನಿಲ ಪೈಪ್‌ಲೈನ್‌ ಗ್ರಿಡ್‌ ಕಾರ್ಯಾಚರಿಸುತ್ತಿದೆ. ಇದನ್ನು 27,000 ಕಿ.ಮೀ.ಗೆ ವಿಸ್ತರಿಸುವ ಉದ್ದೇಶವಿದೆ. ಬೆಲೆಯ ನೈಜಸ್ಥಿತಿಯನ್ನು ಕಂಡುಕೊಳ್ಳಲು ಜನರಿಗೆ ನೆರವಾಗುವ ಉದ್ದೇಶವನ್ನು ಕೇಂದ್ರ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next