ಬೆಂಗಳೂರು: ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 7ನೇ ಶತಕ ಬಾರಿಸಿ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದನ್ನು ಯುನಿವರ್ಸ್ ಬಾಸ್ ಖ್ಯಾತಿಯ ಗೇಲ್ ಬಹಳ ತಮಾಷೆಯಾಗಿ ಸ್ವೀಕರಿಸಿದ್ದಾರೆ. ಮುಂದಿನ ವರ್ಷ ಮರಳಿ ಐಪಿಎಲ್ ಆಡಲಿಳಿದು ಕೊಹ್ಲಿ ದಾಖಲೆಯನ್ನು ಮತ್ತೆ ವಶಪಡಿಸಿಕೊಳ್ಳಲಿದ್ದೇನೆ ಎಂದು ಜೋಕ್ ಮಾಡಿದ್ದಾರೆ!
“ಅನುಮಾನವೇ ಇಲ್ಲ. ವಿರಾಟ್ ಕೊಹ್ಲಿ ಅವರದು ಅದ್ಭುತ ಇನ್ನಿಂಗ್ಸ್. ಅವರು ಯುನಿವರ್ಸ್ ಬಾಸ್‌ನ ದಾಖಲೆಯನ್ನು ಮೀರಿ ನಿಂತರು. ಇರಲಿ, ನಾನು ನಿವೃತ್ತಿಯನ್ನು ತೊರೆದು ಐಪಿಎಲ್‌ಗೆ ಮರಳುತ್ತೇನೆ. ಮುಂದಿನ ವರ್ಷ ನಿಮ್ಮನ್ನು ನೋಡಿಕೊಳ್ಳುತ್ತೇನೆ, ನಿಮ್ಮ ದಾಖಲೆಯನ್ನು ಮುರಿಯುತ್ತೇನೆ ನೋಡಿ ವಿರಾಟ್…’ ಎಂಬುದಾಗಿ ಚಟಾಕಿ ಹಾರಿಸಿದರು.