Advertisement

ಹಳ್ಳಿಗಳಿಗೆ ಬರಲಿದೆ “ವಾಟರ್‌ ಆಂಬ್ಯುಲೆನ್ಸ್‌’ಸೇವೆ

07:28 AM Mar 31, 2017 | |

ಬೆಂಗಳೂರು: ಭೀಕರ ಬರ ಹಾಗೂ ಬಿರು ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯಲ್ಲಿನ ಲೋಪ-ದೋಷ ಸರಿಪಡಿಸಲು “ವಾಟರ್‌ ಆಂಬ್ಯುಲೆನ್ಸ್‌’ ಸೇವೆ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ.

Advertisement

ಗ್ರಾಮೀಣ ಪ್ರದೇಶಗಳಲ್ಲಿನ ಜನವಸತಿಗಳಿಗೆ ಕಲ್ಪಿಸಲಾಗಿರುವ ಕುಡಿಯುವ ನೀರು ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಯಟಾಗುವುದರ
ಜತೆಗೆ ಕಾಮಗಾರಿಗಳಲ್ಲಿನ ವಿಳಂಬ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಇದರ ಸಮರ್ಪಕ ನಿರ್ವಹಣೆ ಹಾಗೂ ಸಮಸ್ಯೆಧಿಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು “ವಾಟರ್‌ ಆಂಬ್ಯುಲೆನ್ಸ್‌’ ಸೇವೆ ಆರಂಭಿಸಲು ತೀರ್ಮಾನಿಸಲಾಗಿದೆ.

ಪ್ರತಿ ಜಿಪಂ ವ್ಯಾಪ್ತಿಯಲ್ಲಿ ಸೇವೆ: ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಯಾವುದೇ ಬಾಧೆ ಬರದಂತೆ ನೋಡಿಕೊಳ್ಳಲು ಪ್ರತಿ ಜಿಪಂ ವ್ಯಾಪ್ತಿಯಲ್ಲಿ ಒಂದು “ಕುಡಿಯುವ ನೀರಿನ ತುರ್ತು ಸೇವಾ ವಾಹನ’ (ವಾಟರ್‌ ಆಂಬ್ಯುಲೆನ್ಸ್‌) ಕಾರ್ಯನಿರ್ವಹಿಸಲಿದೆ. ಕುಡಿಯುವ ನೀರಿನ ವ್ಯವಸ್ಥೆಯಲ್ಲಿನ ವ್ಯತ್ಯಯ, ಅವುಗಳ ದುರಸ್ಥಿಯಲ್ಲಿ ಆಗುತ್ತಿರುವ ವಿಳಂಬ, ಈಗಾಗಲೇ ಸರ್ಕಾರದಿಂದ ಅನುಮೋದನೆಗೊಂಡು ಅನುಷ್ಠಾನಗೊಂಡಿರುವ ಶುದ್ಧೀಕರಣ ಘಟಕಗಳ ಕಾರ್ಯನಿರ್ವಹಣೆಯಲ್ಲಿನ ಸಮಸ್ಯೆಗಳಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ, ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಆಗುತ್ತಿರುವ ವಿಳಂಬ
ಮುಂತಾದ ಸಮಸ್ಯೆಗಳ ಬಗ್ಗೆ ಬರುವ ದೂರುಗಳ ಬಗ್ಗೆ ತಕ್ಷಣ ಸ್ಪಂದಿಸುವುದು “ವಾಟರ್‌ ಆಂಬ್ಯುಲೆನ್ಸ್‌’ ಹೊಣೆಗಾರಿಕೆಯಾಗಿದೆ.

ಸೇವೆ ಜಾರಿ ಹೇಗೆ?: ಈ ಕುರಿತು ಗ್ರಾಮೀಣ ನೀರು ಪೂರಕೈ ಮತ್ತು ನೈರ್ಮಲ್ಯ ಇಲಾಖೆ ಆದೇಶ ಹೊರಡಿಸಿದ್ದು, ಪ್ರತಿ ಜಿಪಂಗೆ ಒಂದು ವಾಟರ್‌ ಆಂಬ್ಯುಲೆನ್ಸ್‌ ಇರಲಿದೆ. ವಾಹನಧಿವನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಬೇಕು. ಇದಕ್ಕೆ ತಗಲುವ
ವೆಚ್ಚವನ್ನು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಹಣದಲ್ಲಿ ಭರಿಸಬೇಕು. ವಾಟರ್‌ ಆಂಬ್ಯುಲೆನ್ಸ್‌ ನಿರ್ವಹಿಸಲು ಹಾಗೂ ದೂರುಗಳನ್ನು ಸ್ವೀಕರಿಸಿ, ದುರಸ್ಥಿಗೊಳಿಸಲು ತಾಂತ್ರಿಕ ನುರಿತ ಸಿಬ್ಬಂದಿಯನ್ನು ಅಗತ್ಯತೆಗೆ ಅನುಗುಣವಾಗಿ ನೇಮಕ ಮಾಡಬೇಕು. ಇವರ ವೇತನ/ಭತ್ಯೆಗಳನ್ನು ಯೋಜನೆಯ ಹಣದಿಂದಲ್ಲೇ ಪಾವತಿಸಬೇಕು. ತಾಲೂಕು ಮತ್ತು ಜಿಲ್ಲಾ
ಮಟ್ಟದಲ್ಲಿ ದೂರು ಸ್ವೀಕರಿಸಿ ಲಾಗ್‌ಬುಕ್‌ ಅಥವಾ ದಾಖಲಾತಿ ಪುಸ್ತಕದಲ್ಲಿ ನಮೂದಿಸಬೇಕು. 

ಇಲಾಖೆಯ ವಿಭಾಗೀಯ ಕಚೇರಿಯಲ್ಲಿ ಇದರ ನಿರ್ವಹಣೆಗೆ ಸ್ಥಳಾವಕಾಶ ಒದಗಿಸಬೇಕು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಒಬ್ಬ ನೋಡಲ್‌ ಅಧಿಕಾರಿ ನೇಮಿಸಬೇಕು. ವಾಟರ್‌ ಆಂಬ್ಯುಲೆನ್ಸ್‌ ನ ಕಾರ್ಯನಿರ್ವಹಣೆ ಬಗ್ಗೆ ಪ್ರತಿ ವಾರದ ಕಡೆ ದಿನ ಜಿ.ಪಂ. ಸಿಇಓಗೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.  

Advertisement

ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ
ಗ್ರಾಮೀಣ ಭಾಗದ ಕುಡಿಯುವ ನೀರಿನ ವ್ಯವಸ್ಥೆಯ ಸಮರ್ಪಕ ನಿರ್ವಹಣೆಗೆ ವಾಟರ್‌ ಆಂಬ್ಯುಲೆನ್ಸ್‌ ಸೇವೆ ಆರಂಭಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಕೊಳವೆ ಜಾಲ (ಪೈಪ್‌ಲೈನ್‌) ಸಮರ್ಪಕ ವ್ಯವಸ್ಥೆ, ತುರ್ತು ಕಾಮಗಾರಿಗಳು, ಶೀಘ್ರ ದುರಸ್ಥಿ, ನೀರು ಶುದ್ಧೀಕರಣ ಘಟಕಗಳ ಚಾಲನೆ, ಅವುಗಳ ಕಾರ್ಯಕ್ಷಮತೆ ಹೆಚ್ಚಳ ಮತ್ತು ದುರಸ್ಥಿ, ಬರಪರಿಹಾರ ಕಾಮಗಾರಿಗಳ ಮೇಲುಸ್ತುವಾರಿ ನಡೆಸುವುದರ ಜೊತೆಗೆ ಈ ಎಲ್ಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ತ್ವರಿತಗತಿಯಲ್ಲಿ 
ಪರಿಹಾರ ಒದಗಿಸಿಕೊಡುವುದೇ ಈ ವಾಟರ್‌ ಆ್ಯಂಬುಲೆನ್ಸ್‌ ಕೆಲಸವಾಗಿದೆ.

ಗ್ರಾಮೀಣ ಭಾಗದ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು “ವಾಟರ್‌ ಆಂಬ್ಯುಲೆನ್ಸ್‌ ‘ ಸೇವೆ ಆರಂಭಿಸಲಾಗಿದೆ. ಸದ್ಯಕ್ಕೆ ಸೇವೆಯನ್ನು ಬೇಸಿಗೆಗೆ ಮಾತ್ರ ಸಿಮೀತಗೊಳಿಸಲಾಗಿದ್ದು, ಏಪ್ರಿಲ್‌,
ಮೇ ಮತ್ತು ಜೂನ್‌ ಬಳಿಕ ಅವಶ್ಯಕತೆ ಮತ್ತು ಬೇಡಿಕೆ ಕಂಡುಬಂದಲ್ಲಿ ಈ ಸೇವೆಯನ್ನು ಮುಂದುವರಿಸುವ ಬಗ್ಗೆ ಆಲೋಚಿಸಲಾಗುವುದು.
ಎಚ್‌.ಕೆ. ಪಾಟೀಲ್‌, ಗ್ರಾಮೀಣಾಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next