Advertisement
ಹೀಗೆಂದು ಹೇಳಿದ್ದು ತಮಿಳುನಾಡು ಸಿಎಂ ಪಳನಿಸ್ವಾಮಿ. ಬುಧವಾರ ಕಾವೇರಿ ಜಲವಿವಾದ ನ್ಯಾಯಾಧಿಕರಣ 2007ರಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖೀಸಿ ಮಾತನಾಡಿದ ಪಳನಿಸ್ವಾಮಿ, “ವರ್ಷಕ್ಕೆ 192 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಹರಿಸಬೇಕು ಎಂದು ನ್ಯಾಯಾಧಿಕರಣ ಆದೇಶಿಸಿದೆ. ಆದರೆ, ಕರ್ನಾಟಕ111 ಟಿಎಂಸಿ ನೀರನ್ನಷ್ಟೇ ಬಿಟ್ಟಿದ್ದು, ಇನ್ನೂ 81 ಟಿಎಂಸಿ ನೀರು ಹರಿಸಲು ಬಾಕಿ ಇದೆ. ಅದನ್ನು ಮೇ ತಿಂಗಳೊಳಗೆ ಹರಿಸುವಂತೆ ಕರ್ನಾಟಕವನ್ನು ಕೇಳಿಕೊಳ್ಳುತ್ತೇವೆ. ಕೇಂದ್ರ ಸರ್ಕಾರದ ಮೂಲಕವೂ ಇದನ್ನು ಕೇಳಿಸಲಾಗುತ್ತಿದೆ,’ ಎಂದೂ ಹೇಳಿದ್ದಾರೆ.