Advertisement

ಬರಲಿದೆ 50 ಹೊಸ ಕಾರು

07:50 AM Feb 06, 2018 | Harsha Rao |

ಹೊಸದಿಲ್ಲಿ: ಗುರುವಾರದಿಂದ  ಗ್ರೇಟರ್‌ ನೋಯ್ಡಾದಲ್ಲಿ ಅಟೋ ಎಕ್ಸ್‌ಪೋ ಆರಂಭವಾಗಲಿದ್ದು, ಸುಮಾರು 50 ಎಲೆಕ್ಟ್ರಿಕ್‌ ಮತ್ತು ಹೈಬ್ರಿಡ್‌ ಕಾರುಗಳು ಮತ್ತು ಅವುಗಳ ಮಾದರಿ ಅನಾವರಣ ಗೊಳ್ಳಲಿದೆ. ಗಮನಾರ್ಹ ಅಂಶವೆಂದರೆ ಅವುಗಳೆಲ್ಲವೂ ಕೈಗೆಟಕುವ ದರದಲ್ಲಿರಲಿದೆ. ಮುಂದಿನ 2-3 ವರ್ಷಗಳ ಅವಧಿಯಲ್ಲಿ ಮಾರುಕಟ್ಟೆಗೆ ಬರಲಿವೆ ಎಂದು “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ. 

Advertisement

2030ರ ಒಳಗಾಗಿ ದೇಶದಲ್ಲಿ ವಿದ್ಯುತ್‌ ಕಾರುಗಳು ಸಂಚಾರ ಮಾಡಬೇಕು ಎಂಬ ಸರಕಾರದ ಆಶಯಕ್ಕೆ ಪೂರಕವಾಗಿ ಮತ್ತು ಕಚ್ಚಾ ತೈಲ ಆಮದು ಪ್ರಮಾಣ ತಗ್ಗಿಸಬೇಕು ಎಂಬ ಸಲಹೆಗೆ ಪೂರಕವಾಗಿ ವಿವಿಧ ವಾಹನ ತಯಾರಕ ಕಂಪನಿಗಳು ದೇಶಕ್ಕೆ ಅನುಗುಣವಾಗಿ ಕಾರುಗಳನ್ನು ಉತ್ಪಾದಿಸಲು ಮುಂದಾಗಿವೆ. 

ಮಾರುತಿ ಸುಜುಕಿ, ಹುಂಡೈ ಮೋಟಾರ್ಸ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಟೊಯೋಟಾ ಮೋಟಾರ್ಸ್‌, ಬಿಎಂಡಬ್ಲೂé ಮತ್ತು ಮರ್ಸಿಡಿಸ್‌ ಬೆಂಝ್ ತಮ್ಮ ಹೊಸ ಮಾದರಿ ಕಾರುಗಳನ್ನು ಪ್ರದರ್ಶಿಸಲಿವೆ. 

Advertisement

Udayavani is now on Telegram. Click here to join our channel and stay updated with the latest news.

Next