Advertisement

ಬ್ಲಾಕಿ ಎಂಬ ಕಾಮಿಡಿ ಚಿತ್ರ

04:20 AM May 20, 2020 | Lakshmi GovindaRaj |

ಕನ್ನಡ ಚಿತ್ರರಂಗದಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಹಾಸ್ಯನಟರಾಗಿ ಗುರುತಿಸಿಕೊಂಡಿರುವ ಮಿತ್ರ, ಹಲವು ಪೋಷಕ ಪಾತ್ರಗಳಲ್ಲಿ ಇಂದಿಗೂ ಬಿಝಿಯಾಗಿದ್ದಾರೆ. ಅವರ ಕೈಯಲ್ಲೀಗ ನಾಲ್ಕೈದು ಚಿತ್ರಗಳಿವೆ. ಆ ಪೈಕಿ  “ಬ್ಲಾಕಿ’ ಎಂಬ ಸಿನಿಮಾ ಕೂಡ ಸೇರಿದೆ. ಇತ್ತೀಚೆಗೆ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದೆ. “ಬ್ಲಾಕಿ’ ಚಿತ್ರದ ಗೆಟಪ್‌ ನೋಡಿದವರೆಲ್ಲರಿಗೂ ಒಂದು ಅಚ್ಚರಿ. ಬಿಡುಗಡೆ ಮಾಡಿರುವ ಫ‌ಸ್ಟ್‌ ಲುಕ್‌ನಲ್ಲಿ ಮಿತ್ರ ಅವರನ್ನು ನೋಡಿದರೆ, ಉತ್ತರ  ಕೊರಿಯದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಗೆಟಪ್‌ನಲ್ಲಿ ಕಾಣುತ್ತಾರೆ.

Advertisement

ಅವರ ಹೇರ್‌ಸ್ಟೈಲ್‌, ಕನ್ನಡಕ, ನಿಂತಿರೋ ಶೈಲಿ ಎಲ್ಲವೂ ಕಿಮ್‌ ಜಾಂಗ್‌ ಉನ್‌ ರೀತಿ ಹೋಲುತ್ತೆ. ಹಾಗಾದರೆ, “ಬ್ಲಾಕಿ ‘ ಸಿನಿಮಾ ಉತ್ತರ ಕೊರಿಯ ಸರ್ವಾಧಿಕಾರಿ  ಕುರಿತ ಕಥೆ ಹೊಂದಿದೆಯಾ? ಇದಕ್ಕೆ ಉತ್ತರ ಸಿನಿಮಾ ಬರುವವರೆಗೂ ಕಾಯಬೇಕು ಅನ್ನೋದು ಚಿತ್ರತಂಡದ ಮಾತು. ಈ ಚಿತ್ರವನ್ನು ರವಿಕಿರಣ್‌ ನಿರ್ದೇಶಿಸಿದ್ದಾರೆ. ಈ ಹಿಂದೆ ಇವರು “ಗಿರ್‌ಗಿಟ್ಲೆ’ ಚಿತ್ರ ನಿರ್ದೇಶಿಸಿದ್ದರು. ಕಥೆ,  ಚಿತ್ರಕಥೆ,  ಸಂಭಾಷಣೆಯ ಜವಾಬ್ದಾರಿಯೂ ಇವರದೇ. ಗಿರೀಶ್‌ ಹಾಗು ವೆಂಕಟೇಶ್‌ ಚಿತ್ರ ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಸ್ವಲ್ಪ ನಡೆದಿದೆ. ಹೆಚ್ಚಿನ ಚಿತ್ರೀಕರಣಕ್ಕಾಗಿ ಬ್ಯಾಂಕಾಕ್‌ಗೆ ಹೊರಡಬೇಕು ಎಂದ ತಯಾರಿಯಲ್ಲಿದ್ದ  ಚಿತ್ರತಂಡಕ್ಕೆ ಕೊರೊನಾ ಎದುರಾಗಿದೆ.

ಹೀಗಾಗಿ, ಕೊರೊನಾ ಸಮಸ್ಯೆ ಬಗೆಹರಿದ ಬಳಿಕ ಬ್ಯಾಂಕಾಕ್‌ನತ್ತ ಚಿತ್ರತಂಡ ಪಯಣ ಬೆಳೆಸಲು ಸಜ್ಜಾಗಿದೆ. ಸಿನಿಮಾ ಕುರಿತು ಹೇಳುವ ನಿರ್ದೇಶಕ ರವಿಕಿರಣ್‌, ಇದೊಂದು ಫ್ಯಾಂಟಸಿ ಚಿತ್ರ. ರೆಗ್ಯುಲರ್‌  ಪ್ಯಾಟ್ರನ್‌ ಹೊರತಾಗಿರುವಂತಹ ಚಿತ್ರ ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದೇವೆ. ಒಂದು ಮರ್ಡರ್‌ ಮಿಸ್ಟ್ರಿಯೊಂದಿಗೆ ಕಾಮಿಡಿ ಫ್ಲೇವರ್‌ನಲ್ಲೇ ಚಿತ್ರ ನಡೆಯಲಿದೆ. ಚಿತ್ರದಲ್ಲೊಂದು ವಿಶೇಷವಿದೆ. ಇಲ್ಲಿ ಕೋತಿ ಕೂಡ ಪ್ರಮುಖ  ಆಕರ್ಷಣೆಯಾಗಿದೆ. ಆ ಕೋತಿ, ಮಿತ್ರ ಅವರ ಬದುಕಿನಲ್ಲಿ ಎಂಟ್ರಿಕೊಟ್ಟ ನಂತರ ಸಾಕಷ್ಟು ತಿರುವು ಪಡೆಯುತ್ತದೆ. ಆ ತಿರುವು ಏನೆಂಬುದು ಸಸ್ಪೆನ್ಸ್‌ ಎನ್ನುತ್ತಾರೆ ನಿರ್ದೇಶಕ ರವಿಕಿರಣ್‌. ಮ್ಯಾಥೀವ್ಸ್‌ ಮನು ಸಂಗೀತ, ಅರುಣ್‌ ಸುರೇಶ್‌  ಛಾಯಾಗ್ರಹಣ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next