Advertisement
ಭಾನುವಾರ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಇಬ್ಬರಿಗೆ ಡಿಸೆಂಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ನಂತರ ಭಾರತಿ ಸಿಂಗ್ ಕಲ್ಯಾಣ್ ಜೈಲಿನಲ್ಲಿ, ಪತಿ ಹರ್ಷ್ ಲಿಂಬಾಚಿಯನ್ನು ತಾಲೋಜಾ ಜೈಲಿನಲ್ಲಿ ಇರಿಸಲಾಗಿತ್ತು ಎಂದು ವರದಿ ತಿಳಿಸಿದೆ.
Related Articles
Advertisement
ಅಂಧೇರಿಯಲ್ಲಿರುವ ಲೋಖಾಂಡೆವಾಲಾ ಕಾಂಪ್ಲೆಕ್ಸ್ ನಲ್ಲಿರುವ ಭಾರತಿ ಸಿಂಗ್ ನಿವಾಸದ ಮೇಲೆ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರ ನೇತೃತ್ವದ ತಂಡ ದಾಳಿ ನಡೆಸಿರುವುದಾಗಿ ಪಿಟಿಐ ವರದಿ ಮಾಡಿತ್ತು..
ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ ಪೆಡ್ಲರ್ ಗಳ ವಿಚಾರಣೆ ನಡೆಸುವ ವೇಳೆ ಭಾರತಿ ಸಿಂಗ್ ಹೆಸರು ಬೆಳಕಿಗೆ ಬಂದಿರುವುದಾಗಿ ಸಮೀರ್ ವಾಂಖೇಡೆ ತಿಳಿಸಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಿ ಸಿಂಗ್ ಹಾಗೂ ಪತಿ ಹರ್ಷ್ ಅವರನ್ನು ಎನ್ ಸಿಬಿ ಅಧಿಕಾರಿಗಳು ಕಚೇರಿಯಲ್ಲಿ ವಿಚಾರಣೆ ನಡೆಸಿದ್ದರು.